Crime News: ತಮಿಳುನಾಡಿನ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಕಣಿವೆಗೆ ಉರುಳಿದ ಟ್ರಕ್; 7 ಜನ ಸಾವು, 14 ಮಂದಿಗೆ ಗಾಯ

| Updated By: ಸುಷ್ಮಾ ಚಕ್ರೆ

Updated on: Apr 02, 2022 | 6:07 PM

Accident: ತಿರುಪತ್ತೂರ್ ಜಿಲ್ಲೆಯ ಸೆಂಬರೈ ಗ್ರಾಮದ ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ ಪ್ರಯಾಣಿಕರು ತೆರಳುತ್ತಿದ್ದರು. ಈ ವೇಳೆ ಟ್ರಕ್ ಕಣಿವೆಗೆ ಉರುಳಿದ್ದು, 7 ಜನರು ಸಾವನ್ನಪ್ಪಿದ್ದಾರೆ.

Crime News: ತಮಿಳುನಾಡಿನ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಕಣಿವೆಗೆ ಉರುಳಿದ ಟ್ರಕ್; 7 ಜನ ಸಾವು, 14 ಮಂದಿಗೆ ಗಾಯ
ಸಾಂಕೇತಿಕ ಚಿತ್ರ
Follow us on

ಚೆನ್ನೈ: ತಮಿಳುನಾಡಿನ ತಿರುಪತೂರ್​ ಜಿಲ್ಲೆಯಲ್ಲಿರುವ ಸೆಂಬರಾಯ್ ಎಂಬ ಗ್ರಾಮದ ದೇವಸ್ಥಾನಕ್ಕೆ (Temple) ಹೊರಟಿದ್ದ ಪ್ರಯಾಣಿಕರಿದ್ದ ಟ್ರಕ್ ಕಣಿವೆಗೆ ಉರುಳಿದ್ದು, ಆ ಟ್ರಕ್​​ನಲ್ಲಿದ್ದ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ 14 ಜನರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಯುಗಾದಿಯ (Ugadi Festival) ದಿನವಾದ ಇಂದು ದೇವಸ್ಥಾನಕ್ಕೆ ಹೊರಟಿದ್ದ 7 ಜನರು ಇಹಲೋಕ ತ್ಯಜಿಸಿದ್ದು, ಈ ಘಟನೆಗೆ ಟ್ರಕ್ ಚಾಲಕನ ವೇಗದ ಚಾಲನೆಯೇ ಕಾರಣ ಎನ್ನಲಾಗಿದೆ.

ತಿರುಪತ್ತೂರ್ ಜಿಲ್ಲೆಯ ಸೆಂಬರೈ ಗ್ರಾಮದ ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ ಪ್ರಯಾಣಿಕರು ತೆರಳುತ್ತಿದ್ದರು ಎಂದು ತಮಿಳುನಾಡು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಈ ಅಪಘಾತಕ್ಕೆ ಕಾರಣವಾಗುವ ಘಾಟ್ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಟ್ರಕ್ ಚಾಲಕನು ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ. ಇದರಿಂದ ಟ್ರಕ್ ಕಣಿವೆಗೆ ಉರುಳಿದೆ.

ಟ್ರಕ್ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹೆಚ್ಚಿನ ತನಿಖೆಗಾಗಿ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದುರ್ಘಟನೆಯ ವಿಡಿಯೋದಲ್ಲಿ ಗಾಯಗೊಂಡ ಮಹಿಳೆಯರು ಮತ್ತು ಮಕ್ಕಳು ಪಲ್ಟಿಯಾದ ಟ್ರಕ್‌ನಿಂದ ದೂರದಲ್ಲಿ ನೆಲದ ಮೇಲೆ ಬಿದ್ದಿರುವುದನ್ನು ಹಲವು ಮಾಧ್ಯಮಗಳು ಪ್ರಸಾರ ಮಾಡಿವೆ. ಗಾಯಗೊಂಡ 14 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಕೆಎಸ್ಆರ್​ಟಿಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವು

ನಟ ಸಿಂಬು ಕಾರು ಅಪಘಾತ; 70 ವರ್ಷದ ವ್ಯಕ್ತಿ ಸಾವು: ಆ್ಯಕ್ಸಿಡೆಂಟ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Published On - 6:06 pm, Sat, 2 April 22