ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಇಂದು ಚಂಡಮಾರುತವಾಗಿ ಪರಿಣಮಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.ಈ ಚಂಡಮಾರುತವನ್ನು ಅಸಾನಿ ಚಂಡಮಾರುತ (Asani Cyclone) ಎಂದು ಕರೆಯಲಾಗುತ್ತದೆ. ಚಂಡಮಾರುತಕ್ಕೆ ಶ್ರೀಲಂಕಾದಿಂದ ಅಸಾನಿ ಎಂಬ ಹೆಸರನ್ನು ನೀಡಲಾಗಿದೆ. ಹಾಗಾದರೆ, ಈ ಚಂಡಮಾರುತಕ್ಕೆ ಅಸಾನಿ ಎಂದು ಹೆಸರಿಡಲು ಕಾರಣವೇನು? ಈ ಹೆಸರಿನ ಅರ್ಥವೇನು? ಇಲ್ಲಿದೆ ಮಾಹಿತಿ. ಶ್ರೀಲಂಕಾದ ಅಧಿಕೃತ ಭಾಷೆಗಳಲ್ಲಿ ಒಂದಾದ ಸಿಂಹಳದಲ್ಲಿ ‘ಅಸಾನಿ’ ಎಂದರೆ ‘ಕ್ರೋಧ’ (Wrath) ಎಂದು ಅರ್ಥ. ಈ ಅಸಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಗಂಟೆಗೆ 70 ರಿಂದ 90 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಈ ಚಂಡಮಾರುತದಿಂದಾಗಿ ತೀರಾ ಏನೂ ಅಪಾಯವಾಗುವುದಿಲ್ಲ.
ಉಷ್ಣವಲಯದ ಚಂಡಮಾರುತಗಳನ್ನು ಹೆಸರಿಸಲು ಪ್ರಪಂಚದಾದ್ಯಂತ ಆರು ಪ್ರಾದೇಶಿಕ ಹವಾಮಾನ ಕೇಂದ್ರಗಳಿವೆ. ಭಾರತೀಯ ಹವಾಮಾನ ಇಲಾಖೆಯು ಆ ಆರರಲ್ಲಿ ಒಂದಾಗಿದೆ. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಸೇರಿದಂತೆ ಉತ್ತರ ಹಿಂದೂ ಮಹಾಸಾಗರದಲ್ಲಿ ಅಭಿವೃದ್ಧಿ ಹೊಂದುವ ಉಷ್ಣವಲಯದ ಚಂಡಮಾರುತಗಳಿಗೆ ನವದೆಹಲಿಯಲ್ಲಿ ಹೆಸರಿಡಲಾಗುತ್ತದೆ. IMD ಪ್ರಮಾಣಿತ ವಿಧಾನವನ್ನು ಅನುಸರಿಸುತ್ತದೆ. ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮಯನ್ಮಾರ್, ಓಮನ್, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್, ಇರಾನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ಈ 13 ಸದಸ್ಯ ರಾಷ್ಟ್ರಗಳಿಂದ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ.
IMD issues new list of Names of Tropical Cyclones over north Indian Ocean. The current list has a total of 169 names including 13 names each from 13 WMO/ESCAP member countries. Detailed Press Release available at https://t.co/dArV0Ug8nh and https://t.co/wRl94BzRXr pic.twitter.com/ge0oVz4riD
— India Meteorological Department (@Indiametdept) April 28, 2020
13 ರಾಷ್ಟ್ರಗಳು ಸೂಚಿಸಿದ ಪ್ರತಿ ದೇಶಗಳ 13 ಹೆಸರುಗಳಂತೆ 169 ಹೆಸರುಗಳ ಪಟ್ಟಿಯನ್ನು 2020ರಲ್ಲಿ ರಚಿಸಲಾಗಿದೆ. ಈ ಹೆಸರುಗಳನ್ನು ದೇಶವಾರು ಪಟ್ಟಿ ಮಾಡಲಾಗಿದೆ. ಈ ಎಲ್ಲ ರಾಷ್ಟ್ರಗಳನ್ನು ವರ್ಣಮಾಲೆಯಂತೆ ಜೋಡಿಸಲಾಗಿದೆ. ಈ ದೇಶಗಳು ಒಂದೊಂದಾಗಿ ಚಂಡಮಾರುತಗಳನ್ನು ಹೆಸರಿಸುವಂತೆ ರಾಷ್ಟ್ರಗಳ ಹೆಸರುಗಳನ್ನು ಅನುಕ್ರಮವಾಗಿ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ, ಬಂಗಾಳಕೊಲ್ಲಿಯಲ್ಲಿನ ಎದ್ದಿರುವ ಚಂಡಮಾರುತಕ್ಕೆ ಅಸಾನಿ ಎಂದು ಹೆಸರಿಸಲಾಗಿದೆ.
ವಾಯುಭಾರ ಕುಸಿತವು ಮಾರ್ಚ್ 23ರಂದು ಬಾಂಗ್ಲಾದೇಶ-ಮಯನ್ಮಾರ್ ಕರಾವಳಿಯತ್ತ ಸಾಗುವ ಸಾಧ್ಯತೆಯಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಮಾರ್ಚ್ 22ರವರೆಗೆ ಸ್ಥಗಿತಗೊಳಿಸಲಾಗಿದೆ ಮತ್ತು ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳಕೊಲ್ಲಿಗೆ ತೆರಳದಂತೆ ಮೀನುಗಾರರಿಗೆ ಸಲಹೆಯನ್ನು ನೀಡಲಾಗಿದೆ.
ಅಸಾನಿ ಚಂಡಮಾರುತವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿಯನ್ನು ತರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ಮಂಗಳವಾರ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಮೊದಲ ಬಾರಿಗೆ ರೂಪುಗೊಂಡಿತು. ಅಸಾನಿ ಈ ವರ್ಷದ ಮೊದಲ ಚಂಡಮಾರುತವಾಗಿದೆ. ಸುಮಾರು ಎರಡು ದಶಕಗಳಲ್ಲಿ ಮಾರ್ಚ್‌ನಲ್ಲಿ ರೂಪುಗೊಂಡ ಮೊದಲನೆಯ ಚಂಡಮಾರುತವಾಗಿದೆ.
ಅಸಾನಿ ಚಂಡಮಾರುತದ ಹೆಸರನ್ನು ಶ್ರೀಲಂಕಾದಿಂದ ನೀಡಲಾಗಿದೆ. ಅಸಾನಿ ಎಂದರೆ ಸಿಂಹಳದಲ್ಲಿ ‘ಕ್ರೋಧ’ ಎಂದರ್ಥ. ‘ಅಸಾನಿ’ ಮತ್ತು ‘ಅಂಪನ್’ ಹೊರತುಪಡಿಸಿ, IMD ಇದುವರೆಗೂ ‘ಗತಿ’, ‘ನಿವಾರ್’, ‘ಬುರೆವಿ’, ‘ತೌಕ್ತೇ’, ‘ಯಾಸ್’, ‘ಗುಲಾಬ್’, ‘ಶಾಹೀನ್’ ಮತ್ತು ‘ಜವಾದ್’ ಹೆಸರುಗಳನ್ನು ನಿಸರ್ಗದಿಂದ ಸೂಚಿಸಲಾಗಿದೆ.
ಭಾರತ, ಬಾಂಗ್ಲಾದೇಶ, ಇರಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಶ್ರೀಲಂಕಾ, ಥೈಲ್ಯಾಂಡ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ನಡುವೆ ಚರ್ಚೆಯ ನಂತರ ಹೆಸರುಗಳ ಪಟ್ಟಿಯನ್ನು ಸಂಗ್ರಹಿಸಲಾಗಿದೆ. ಈ ಹೊಸ ಸಮಿತಿಯನ್ನು 2018ರಲ್ಲಿ ರಚಿಸಲಾಯಿತು.
ಇದನ್ನೂ ಓದಿ: Cyclone Asani: ಇಂದು ಸಂಜೆ ಅಪ್ಪಳಿಸಲಿದೆ ಅಸಾನಿ ಚಂಡಮಾರುತ; ಅಂಡಮಾನ್ನಲ್ಲಿ ಭಾರೀ ಮಳೆ, ಶಾಲೆಗಳಿಗೆ ರಜೆ ಘೋಷಣೆ
Cyclone Asani: ಅಸಾನಿ ಚಂಡಮಾರುತದ ಅಬ್ಬರದಿಂದ ಸೋಮವಾರದವರೆಗೆ ಈ ರಾಜ್ಯಗಳಲ್ಲಿ ಭಾರೀ ಮಳೆ
Published On - 5:05 pm, Mon, 21 March 22