Delhi Chalo | 42 ರೈತ ಸಂಘಟನೆಗಳು ಈಗ ಸುಪ್ರೀಂಕೋರ್ಟ್​ನಲ್ಲಿ ಪ್ರತಿವಾದಿಗಳು: ಇಲ್ಲಿದೆ ಪಟ್ಟಿ..

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಪ್ರತಿವಾದಿಗಳೆಂದು ಪರಿಗಣಿಸಲಾಗಿರುವ 42 ರೈತ ಸಂಘಟನೆಗಳಿಗೂ ಇದೀಗ ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸುವ ಮೂಲಕ ಇಡೀ ದೇಶಕ್ಕೆ ತಮ್ಮ ದನಿ ಕೇಳಿಸಲು ಅವಕಾಶ ಸಿಕ್ಕಂತೆ ಆಗಿದೆ.

Delhi Chalo | 42 ರೈತ ಸಂಘಟನೆಗಳು ಈಗ ಸುಪ್ರೀಂಕೋರ್ಟ್​ನಲ್ಲಿ ಪ್ರತಿವಾದಿಗಳು: ಇಲ್ಲಿದೆ ಪಟ್ಟಿ..
ಸುಪ್ರೀಂ ಕೋರ್ಟ್
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 24, 2020 | 7:29 PM

ದೆಹಲಿ: ಕೇಂದ್ರ ಸರ್ಕಾರವು ಜಾರಿ ಮಾಡಿರುವ ನೂತನ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಗಳಲ್ಲಿ ಪಂಜಾಬ್ ರೈತರು ನಡೆಸುತ್ತಿರುವ ದೆಹಲಿ ಚಲೋ ಚಳವಳಿಯನ್ನು ತೆರವುಗೊಳಿಸಲು ವಿನಂತಿಸಿ ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಮತ್ತೊಂದು ಮಹತ್ವದ ಬೆಳೆವಣಿಗೆ ನಡೆದಿದೆ. ಒಟ್ಟು 42 ರೈತ ಸಂಘಟನೆಗಳನ್ನು ಪ್ರತಿವಾದಿಗಳೆಂದು ಮೂಲ ಅರ್ಜಿದಾರರು ಹೆಸರಿಸಿದ್ದಾರೆ.

ಕೊರೊನಾ ಸೋಂಕು ಹೆಚ್ಚಳ ಮತ್ತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ದೂರಿ ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಚಳವಳಿಯನ್ನು ತೆರವುಗೊಳಿಸುವಂತೆ ವಕೀಲ ಓಂಪ್ರಕಾಶ್ ಪರಿಹಾರ್ ಅವರ ಮೂಲಕ ರಿಷಬ್ ಶರ್ಮಾ ಎಂಬ ಕಾನೂನು ವಿದ್ಯಾರ್ಥಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದರು. ಈ ಅರ್ಜಿಯನ್ನು ಡಿ.17ರಂದು ಆಲಿಸಿದ್ದ ನ್ಯಾಯಾಧೀಶ ಎಸ್.ಎ.ಬೋಬಡೆ ಅವರಿದ್ದ ನ್ಯಾಯಪೀಠ, ರೈತ ಒಕ್ಕೂಟಗಳ ಚಳವಳಿಗಳನ್ನು ನಡೆಸಲು ಅನುಮತಿ ನೀಡಿತ್ತು. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಪಂಜಾಬ್ ರೈತರಿಗೆ ಅಧಿಕಾರವಿದೆ, ಸರ್ಕಾರ ಚಳವಳಿಯನ್ನು ತಡೆಯುವಂತಿಲ್ಲ ಎಂದು ಹೇಳಿತ್ತು.

ಈ ಪ್ರಕರಣದಲ್ಲಿ ಚಳವಳಿ ನಡೆಸುತ್ತಿರುವ 42 ರೈತ ಸಂಘಟನೆಗಳನ್ನು ಅಧಿಕೃತ ಪ್ರತಿವಾದಿಗಳೆಂದು ಪರಿಗಣಿಸಲಾಗಿತ್ತು. ಅಲ್ಲದೇ ಸರ್ಕಾರ ಮತ್ತು ರೈತರ ನಡುವೆ ಮಧ್ಯಸ್ಥಿಕೆಗಾಗಿ ಸ್ವಾಯತ್ತ ಸಮಿತಿಯೊಂದನ್ನು ರಚಿಸಲು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಭಾರತೀಯ ಕಿಸಾನ್ ಯೂನಿಯನ್​ನ ಪಿ.ಸಾಯಿನಾಥ್​ರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಬಹುದು ಎಂದು ಸಲಹೆ ನೀಡಿತ್ತು. ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಲ್ಲಿ, ರೈತರ ಸಮಸ್ಯೆ ಪರಿಹರಿಸದೇ, ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಖಾತ್ರಿಪಡಿಸಬಹುದೇ ಎಂದು ನ್ಯಾಯಾಲಯ ಪ್ರಶ್ನಿಸಿತ್ತು. ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ರೈತರು ಚರ್ಚೆಗೆ ಸಿದ್ಧವಿಲ್ಲ ಎಂದು ಉತ್ತರಿಸಿದ್ದರು.

ದೆಹಲಿ ಗಡಿಗಳಿಂದ ರೈತರನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯವು ಚಳವಳಿಯನ್ನು ಗಂಭೀರವಾಗಿ ಪರಿಗಣಿಸಿದೆ ಎಂಬುದು ಸ್ಪಷ್ಟವಾಗಿತ್ತು. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಪ್ರತಿವಾದಿಗಳೆಂದು ಪರಿಗಣಿಸಲಾಗಿರುವ 42 ರೈತ ಸಂಘಟನೆಗಳಿಗೂ ಇದೀಗ ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸುವ ಮೂಲಕ ಇಡೀ ದೇಶಕ್ಕೆ ತಮ್ಮ ದನಿ ಕೇಳಿಸಲು ಅವಕಾಶ ಸಿಕ್ಕಂತೆ ಆಗಿದೆ.

ಸುಪ್ರೀಂಕೋರ್ಟ್​ನಲ್ಲಿ ಪ್ರತಿವಾದಿಗಳೆಂದು ಪರಿಗಣಿತವಾಗಿರುವ ರೈತ ಸಂಘಟನೆಗಳ ಪಟ್ಟಿಯನ್ನು ಟಿವಿ9 ಕನ್ನಡ ಡಿಜಿಟಲ್ ಇಲ್ಲಿ ನೀಡಿದೆ.

ದೆಹಲಿ ಚಲೋ ಚಳವಳಿ ಆಯೋಜಿಸಿದ ಸಂಘಟನೆಗಳಲ್ಲಿ ಭಾರತೀಯ ಕಿಸಾನ್ ಯೂನಿಯನ್​ ಮೊದಲ ಸಾಲಲ್ಲಿ ನಿಲ್ಲುತ್ತದೆ. ಬಿಕೆಯುವಿನ ಸಿಧುಪುರ್, ರಹೇವಾಲ್, ಲಕೋವಾಲ್, ದಕೌಂದಾ, ಭಾನು, ಟಿಕಾಯತ್, ದೌಬಾ, ಕಡಿಯನ್, ಮನ್ಸಾ, ಮಾನ್, ಚಧುನಿ, ಜತ್ತನ್, ಮುದಾರ್ಕ್​ಪುರ್ ಮತ್ತು ಅಂಬಾವ್ತಾ ಶಾಖೆಗಳನ್ನು ಪ್ರತಿವಾದಿಗಳೆಂದು ಪರಿಗಣಿಸಲಾಗಿತ್ತು. ಅಲ್ಲದೇ ಭಾರತೀಯ ಕಿಸಾನ್ ಯೂನಿಯನ್​ನ ಏಕ್ತಾ ಉಗ್ರಹನ್, ಕ್ರಾಂತಿಕಾರಿ VPO ಫುಲ್ ಬಣಗಳನ್ನು ಪ್ರತಿವಾದಿಗಳನ್ನಾಗಿ ಸರ್ವೋಚ್ಚ ನ್ಯಾಯಾಲಯ ಪರಿಗಣಿಸಿತ್ತು.

ಇತರ ಸಂಘಟನೆಗಳು ಜಮ್ಹೂರಿ ಕಿಸಾನ್ ಸಭಾ, ಕುಲ್ ಹಿಂದ್ ಕಿಸಾನ್ ಪೆಡರೇಶನ್, ಕ್ರಾಂತಿಕಾರಿ ಕಿಸಾನ್ ಯೂನಿಯನ್, ಕುಲ್ ಹಿಂದ ಕಿಸಾನ್ ಸಭಾ, ಕಿರ್ತಿ ಕಿಸಾನ್ ಯೂನಿಯನ್, ಪಂಜಾಬ್ ಕಿಸಾನ್ ಯೂನಿಯನ್, ಕಿಸಾನ್ ಸಂಘರ್ಷ್ ಕಮಿಟಿ, ಆಝಾದ್ ಕಿಸಾನ್ ಸಂಘರ್ಷ್, ಜೈ ಕಿಸಾನ್ ಆಂದೋಲನ್, ಕಿಸಾನ್ ಮಜ್ದೂರ್ ಸಂಘರ್ಷ್, ಮಝಾ ಕಿಸಾನ್ ಕಮೀಟಿ, ಇಂಡಿಯನ್ ಫಾರ್ಮರ್ ಅಸೋಸಿಯೇಷನ್ , ಆಫ್ ಇಂಡಿಯಾ, ಭಾರತೀಯ ಕಿಸಾನ್ ಮಂಚ್, ಲೋಕ್ ಭಾಲೈ ಇನ್ಸಾಫ್ ವೆಲ್​ಫೇರ್ ಸೊಸೈಟಿ, ದೋಬಾ ಕಿಸಾನ್ ಸಮಿತಿ, ಗನ್ನಾ ಕಿಸಾನ್ ಕಮಿಟಿ, ಆಝಾದ್ ಕಿಸಾನ್ ಕಮಿಟಿ, ದೋಬಾ, ಕಿಸಾನ್ ಬಚಾರಚ್ ಮೋರ್ಚಾ, ಕುಲ್ ಹಿಂದ್ ಕಿಸಾನ್ ಸಂಘರ್ಷ್ ತಲ್ಮೆಲ್ ಕಮಿಟಿ, ಸರ್ವ ಹಿಂದ್ ರಾಷ್ಟ್ರೀಯ ಕಿಸಾನ್, ಮಹಿಳಾ ಕಿಸಾನ್ ಅಧಿಕಾರ್ ಮಂಚ್, ರಾಷ್ಟ್ರೀಯ ಕಿಸಾನ್ ಮಹಾಸಂಘ್.

ರೈತ ಸಂಘಟನೆಗಳಿಗೆ ಪತ್ರ

ದೆಹಲಿ ಚಲೋ ಚಳವಳಿ ಆರಂಭವಾಗಿ ಡಿ.24ಕ್ಕೆ 29 ದಿನವಾಗಿದೆ. ಕೇಂದ್ರ ಸರ್ಕಾರವು ಮಾತುಕತೆ ನಡೆಸೋಣವೆಂದು ರೈತ ಒಕ್ಕೂಟಗಳಿಗೆ ಪತ್ರವನ್ನೇನೋ ಬರೆಯುತ್ತಿದೆ. ಆದರೆ, ಮೊದಲ ಪತ್ರದಲ್ಲಿ ಬರೆದ ‘ಕೃಷಿ ಕಾಯ್ದೆಯ ಸಂಪೂರ್ಣ ರದ್ದತಿಯೊಂದನ್ನು ಬಿಟ್ಟು ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸಿದ್ಧವಿದ್ದೇವೆ’ ಎಂದೇ ಇಂದು ಬರೆದ ಪತ್ರದಲ್ಲೂ ಸರ್ಕಾರ ಸ್ಪಷ್ಟವಾಗಿ ಸೂಚಿಸಿದೆ. ರೈತ ಒಕ್ಕೂಟಗಳು ‘ಕೃಷಿ ಕಾಯ್ದೆಯ ಸಂಪೂರ್ಣ ರದ್ದತಿ ಮಾಡದೇ ಚಳವಳಿ ಅಂತ್ಯಗೊಳಿಸುವುದಿಲ್ಲ’ ಎಂದು ಮೊದಲಿಂದಲೂ ಹೇಳುತ್ತಿದೆ. ಬೇಡಿಕೆ ಈಡೇರಿಸಲು ಸಿದ್ಧವಿದೆ ಎಂದು ಸಂದೇಶ ರವಾನಿಸಿ, ಮತ್ತೆ ಮತ್ತೆ ಸಭೆಗಳನ್ನು ಆಯೋಜಿಸುವ ಮೂಲಕ ಸರ್ಕಾರ ಚಳವಳಿಯ ತೀವ್ರತೆಯನ್ನು ತಣ್ಣಗಾಗಿಸಲು ಕಾಲಕ್ಷೇಪ ಮಾಡುತ್ತಿದೆ. ಅಲ್ಲದೇ, ದೇಶದ ಇತರ ರೈತ ಸಂಘಟನೆಗಳ ಬೆಂಬಲ ಪಡೆಯುವ ತಂತ್ರ ಹೂಡುತ್ತಿದೆ ಎಂಬ ಮಾತುಗಳು ಮುನ್ನೆಲೆಗೆ ಬರುತ್ತಿವೆ.

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು