ದೆಹಲಿ ಫೆಬ್ರುವರಿ 13: ದೆಹಲಿಯತ್ತ (Delhi) ಸಾಗುತ್ತಿರುವ ಸಾವಿರಾರು ರೈತರು, ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುವುದನ್ನು ತಡೆಯಲು ಗಡಿಗಳನ್ನು ಮುಚ್ಚಿರುವುದರಿಂದ, ತಿಂಗಳುಗಳವರೆಗೆ ಸಾಕಾಗುವಷ್ಟು ಪಡಿತರ ಮತ್ತು ಡೀಸೆಲ್ ಅನ್ನು ಹೊತ್ತುಕೊಂಡು ದೀರ್ಘಕಾಲದ ಆಂದೋಲನಕ್ಕೆ ಸಜ್ಜಾಗಿ ಬಂದಿರುವುದಾಗಿ ಹೇಳುತ್ತಾರೆ. ರೈತರು (Farmer’s protest) ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಸೇರಿದಂತೆ ಹಲವಾರು ಬೇಡಿಕೆಗಳ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದಾಗ್ಯೂ, ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಸೂಜಿಯಿಂದ ಹಿಡಿದು ಸುತ್ತಿಗೆ, ಕಲ್ಲು ಒಡೆಯುವ ಉಪಕರಣಗಳು ಸೇರಿದಂತೆ ನಮ್ಮ ಟ್ರಾಲಿಗಳಲ್ಲಿ ನಮಗೆ ಬೇಕಾದ ಎಲ್ಲವನ್ನೂ ನಾವು ಹೊಂದಿದ್ದೇವೆ. ನಮ್ಮೊಂದಿಗೆ ಆರು ತಿಂಗಳ ಪಡಿತರದೊಂದಿಗೆ ನಾವು ನಮ್ಮ ಹಳ್ಳಿಯನ್ನು ತೊರೆದಿದ್ದೇವೆ. ನಮ್ಮ ಬಳಿ ಹರ್ಯಾಣದ ನಮ್ಮ ಸಹೋದರರಿಗೆ ಬೇಕಾದಷ್ಟು ಡೀಸೆಲ್ ಇದೆ” ಎಂದು ಪಂಜಾಬ್‌ನ ಗುರುದಾಸ್‌ಪುರದ ರೈತ ಹರ್ಭಜನ್ ಸಿಂಗ್ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಯಾತ್ರೆಯನ್ನು ವಿಫಲಗೊಳಿಸುವುದಕ್ಕಾಗಿ ಡೀಸೆಲ್ ನೀಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
2020 ರ ರೈತರ ಪ್ರತಿಭಟನೆಯ ಭಾಗವಾಗಿದ್ದೇನೆ ಎಂದು ಹೇಳಿದ ಸಿಂಗ್, ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಈ ಬಾರಿ ಹಿಂತಿರುಗಿ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಕಳೆದ ಬಾರಿ 13 ತಿಂಗಳುಗಳ ಕಾಲ ನಾವು ಬಗ್ಗಲಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರೂ ಸರ್ಕಾರ ಭರವಸೆ ಈಡೇರಿಸಿಲ್ಲ. ಈ ಬಾರಿ ನಮ್ಮ ಎಲ್ಲ ಬೇಡಿಕೆಗಳು ಈಡೇರಿದ ನಂತರವೇ ಹೊರಡುತ್ತೇವೆ ಎಂದು ಪಂಜಾಬ್-ಹರ್ಯಾಣ ಗಡಿಯಿಂದ ದೆಹಲಿಯತ್ತ ಟ್ರ್ಯಾಕ್ಟರ್ ಚಲಾಯಿಸಿದರು.
#WATCH | Protesting farmers vandalise flyover safety barriers at the Haryana-Punjab Shambhu border. pic.twitter.com/vPJZrFE0T0
— ANI (@ANI) February 13, 2024
ಚಂಡೀಗಢದಲ್ಲಿ ಸರ್ಕಾರಿ ನಿಯೋಗದೊಂದಿಗೆ ತಡರಾತ್ರಿ ನಡೆಸಿದ ಮಾತುಕತೆ ವಿಫಲವಾದ ನಂತರ ರೈತರು ಫತೇಘರ್ ಸಾಹಿಬ್‌ನಿಂದ ಇಂದು ಬೆಳಿಗ್ಗೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದರು. ‘ದಿಲ್ಲಿ ಚಲೋ’ ಮೆರವಣಿಗೆಯನ್ನು ತಡೆಯುವ ಕೊನೆಯ ಪ್ರಯತ್ನದಲ್ಲಿ ಇಬ್ಬರು ಕೇಂದ್ರ ಸಚಿವರು ರೈತ ಮುಖಂಡರನ್ನು ಭೇಟಿಯಾಗಿದ್ದರು, ಇದು ವಿದ್ಯುತ್ ಕಾಯ್ದೆ 2020 ರದ್ದತಿ, ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಸಾವಿಗೀಡಾದ ರೈತರಿಗೆ ಪರಿಹಾರ ಮತ್ತು ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಒಪ್ಪಂದಕ್ಕೆ ಕಾರಣವಾಯಿತು.
ಆದಾಗ್ಯೂ, ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಖಾತರಿಪಡಿಸುವ ಕಾನೂನು ಜಾರಿಗೊಳಿಸುವುದು, ರೈತರ ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ ಸೇರಿದಂತೆ ಮೂರು ಪ್ರಮುಖ ಬೇಡಿಕೆಗಳ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ರೈತರಿಗೆ ದೆಹಲಿ ಸರ್ಕಾರ ಬೆಂಬಲ; ಶಂಭು ಗಡಿಯಲ್ಲಿ ಹರ್ಯಾಣ ಪೊಲೀಸರಿಂದ ಅಶ್ರುವಾಯು ಪ್ರಯೋಗ
ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಅರ್ಜುನ್ ಮುಂಡಾ ಮಾತನಾಡಿ, ಸರ್ಕಾರವು ರೈತರ ಕಲ್ಯಾಣಕ್ಕೆ ಬದ್ಧವಾಗಿದೆ.ಆದರೆ ಅವರು ಕೆಲವು ವಿಷಯಗಳ ಬಗ್ಗೆ ರಾಜ್ಯಗಳೊಂದಿಗೆ ಸಮಾಲೋಚಿಸಬೇಕು. ರೈತರನ್ನು ನಗರಕ್ಕೆ ಪ್ರವೇಶಿಸದಂತೆ ತಡೆಯಲು ದೆಹಲಿಯಲ್ಲಿ, ಪ್ರಮುಖ ಗಡಿ ಬಿಂದುಗಳಾದ ಗಾಜಿಪುರ, ಟಿಕ್ರಿ ಮತ್ತು ಸಿಂಘು – ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಟ್ರ್ಯಾಕ್ಟರ್ ಮತ್ತು ಟ್ರಾಲಿಗಳು ನಗರಕ್ಕೆ ನುಗ್ಗದಂತೆ ರಸ್ತೆಗಳಲ್ಲಿ ಕಾಂಕ್ರೀಟ್ ಬ್ಲಾಕ್‌ಗಳು ಮತ್ತು ಮೊಳೆಗಳನ್ನು ಹಾಕಲಾಗಿದೆ. ಇಡೀ ನಗರದಲ್ಲಿ ಸಾರ್ವಜನಿಕ ಸಭೆಗಳಿಗೆ ಪೊಲೀಸರು ಒಂದು ತಿಂಗಳ ಕಾಲ ನಿಷೇಧವನ್ನು ವಿಧಿಸಿದ್ದಾರೆ. ಬಹು ತಿರುವುಗಳು ಮತ್ತು ಪೊಲೀಸ್ ಚೆಕ್‌ಪೋಸ್ಟ್‌ಗಳಿಂದಾಗಿ ಗಡಿ ಪ್ರದೇಶಗಳಿಂದ ಭಾರಿ ಟ್ರಾಫಿಕ್ ಜಾಮ್‌ಗಳು ವರದಿಯಾಗಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ