Delhi Crime: ದೆಹಲಿಯಲ್ಲಿ ವೃದ್ಧ ದಂಪತಿಯ ಬರ್ಬರ ಹತ್ಯೆ

ದೆಹಲಿಯ ಕೊಹತ್ ಎನ್​ಕ್ಲೇವ್​ನಲ್ಲಿರುವ ಮನೆಯೊಂದರಲ್ಲಿ ವೃದ್ಧ ದಂಪತಿಯ ಶವಗಳು ಪತ್ತೆಯಾಗಿವೆ. ಈ ಅಪರಾಧದ ಹಿಂದೆ ಅವರ ಮನೆ ಕೆಲಸದಾಕೆಯ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯ ಪೊಲೀಸರ ಪ್ರಕಾರ, ದಂಪತಿಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಹೇಳಲಾಗಿದ್ದು, ಅವರ ಶವಗಳು ಮಂಗಳವಾರ (ಮಾರ್ಚ್ 18) ಪತ್ತೆಯಾಗಿವೆ.

Delhi Crime: ದೆಹಲಿಯಲ್ಲಿ ವೃದ್ಧ ದಂಪತಿಯ ಬರ್ಬರ ಹತ್ಯೆ
ಕ್ರೈಂ
Image Credit source: ICE Cleaning

Updated on: Mar 20, 2025 | 7:45 AM

ನವದೆಹಲಿ, ಮಾರ್ಚ್​ 20: ದೆಹಲಿಯ ಕೊಹತ್ ಎನ್​ಕ್ಲೇವ್​ನಲ್ಲಿರುವ ಮನೆಯೊಂದರಲ್ಲಿ ವೃದ್ಧ ದಂಪತಿಯ ಶವಗಳು ಪತ್ತೆಯಾಗಿವೆ. ಈ ಅಪರಾಧದ ಹಿಂದೆ ಅವರ ಮನೆ ಕೆಲಸದಾಕೆಯ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯ ಪೊಲೀಸರ ಪ್ರಕಾರ, ದಂಪತಿಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಹೇಳಲಾಗಿದ್ದು, ಅವರ ಶವಗಳು ಮಂಗಳವಾರ (ಮಾರ್ಚ್ 18) ಪತ್ತೆಯಾಗಿವೆ.

ದೆಹಲಿ ಪೊಲೀಸರು ಪ್ರಮುಖ ಶಂಕಿತನನ್ನು ಬಂಧಿಸಿದ್ದು, ಆತನ ಸಹಚರನನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ. ಕೊಲೆ ಎರಡು ಮೂರು ದಿನಗಳ ಹಿಂದೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ನಂಬಿದ್ದಾರೆ ಆದರೆ ಅದೇ ಪ್ರದೇಶದಲ್ಲಿ ವಾಸಿಸುವ ದಂಪತಿಯ ಮಗ ಅವರ ಮನೆಗೆ ಭೇಟಿ ನೀಡಿದಾಗ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು, ಅವರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಹೆಚ್ಚಿನ ವಿಚಾರಣೆಯ ನಂತರ ಕೊಲೆಗಳ ಹಿಂದಿನ ನಿಖರವಾದ ಉದ್ದೇಶ ದೃಢಪಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಘಟನೆ
ಕ್ರಿಕೆಟ್ ಬೆಟ್ಟಿಂಗ್ ಸಾಲ ತೀರಿಸಲು ವೃದ್ಧೆ ಹತ್ಯೆ
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವೃದ್ಧೆ ಕಮಲಾ (82) ಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಶೋಕ, ಪ್ಲಂಬರ್ ಆಗಿದ್ದ. ಆಟೊ ಚಾಲಕ ಅಂಜನ್‌ಮೂರ್ತಿ ಹಾಗೂ ಕಾರ್ಮಿಕ ಸಿದ್ದರಾಜು ಸ್ನೇಹಿತರಾಗಿದ್ದರು. ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಾವಳಿ ವೇಳೆ ಮೂವರು ವಿಪರೀತ ಬೆಟ್ಟಿಂಗ್ ಕಟ್ಟುತ್ತಿದ್ದರು. ಇದಕ್ಕಾಗಿ ಹಲವರ ಬಳಿ ಸಾಲ ಮಾಡಿದ್ದರು ಎಂದು ಪೊಲೀಸರು ಹೇಳಿದರು.

ಮತ್ತಷ್ಟು ಓದಿ: ಅಮ್ಮನಿಗೆ ಬೈದಿದ್ದಕ್ಕೆ ಮಾವನನ್ನೇ ಕೊಂದ ಪುತ್ರ: ಅಳಿಯನ ಕೈಯಲ್ಲೇ ಹೆಣವಾದ ಪಂಚನಹಳ್ಳಿ ಸಾಹುಕಾರ

ಕ್ರಿಕೆಟ್ ಪಂದ್ಯಗಳ ಸೋಲು–ಗೆಲುವು ಲೆಕ್ಕಾಚಾರದಲ್ಲಿ ಬೆಟ್ಟಿಂಗ್ ಕಟ್ಟಿ ಹಣ ಕಳೆದುಕೊಂಡಿದ್ದರು. ಸಾಲ ನೀಡಿದ್ದ ಜನ, ಹಣ ವಾಪಸು ನೀಡುವಂತೆ ಒತ್ತಾಯಿಸುತ್ತಿದ್ದರು. ಕೆಲಸದಿಂದ ಬರುವ ಹಣದಲ್ಲಿ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಅದೇ ಕಾರಣಕ್ಕೆ ಆರೋಪಿಗಳು, ಚಿನ್ನಾಭರಣ ಕಳ್ಳತನ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಪಶ್ಚಿಮ ಕಾರ್ಡ್ ರಸ್ತೆಗೆ ಹೊಂದಿಕೊಂಡಿರುವ 2ನೇ ಹಂತದ 12ನೇ ಅಡ್ಡರಸ್ತೆಯ ಮನೆಯಲ್ಲಿ ವೃದ್ಧೆ ಕಮಲಾ ನೆಲೆಸಿದ್ದರು. ಪತಿ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಮಕ್ಕಳು ಪ್ರತ್ಯೇಕವಾಗಿ ಬೇರೆಡೆ ವಾಸವಿದ್ದರು. ಅಶೋಕ, ತಿಂಗಳ ಹಿಂದೆಯಷ್ಟೇ ಕಮಲಾ ಮನೆಗೆ ಪ್ಲಂಬರ್ ಕೆಲಸಕ್ಕೆ ಹೋಗಿದ್ದ. ಇಡೀ ದಿನ ಮನೆಯಲ್ಲಿ ಅಶೋಕ, ವೃದ್ಧೆ ಧರಿಸಿದ್ದ ಚಿನ್ನಾಭರಣ ಗಮನಿಸಿದ್ದ ಎಂದು ಪೊಲೀಸರು ಹೇಳಿದರು.

ಲಗ್ಗೆರೆ ಎಲ್‌.ಜಿ. ರಾಮಣ್ಣ ಬಡಾವಣೆಯ ಆರ್‌. ಅಶೋಕ (40), ಲಗ್ಗೆರೆ ಕೆಂಪೇಗೌಡ ನಗರದ ಸಿ.ಎಂ. ಸಿದ್ದರಾಜು (34) ಹಾಗೂ ಕಾಮಾಕ್ಷಿಪಾಳ್ಯದ ಸಣ್ಣಕಿ ಬಯಲು ನಿವಾಸಿ ಅಂಜನಮೂರ್ತಿ (33) ಬಂಧಿತರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us