Bizarre Story: ವಿಮಾನದಲ್ಲಿ ಇರುವೆ ಕಾಣಿಸಿಕೊಂಡಿದ್ದರಿಂದ ದೆಹಲಿಯಿಂದ ಲಂಡನ್‌ಗೆ ಹೊರಟ್ಟಿದ್ದೇ 3 ಗಂಟೆ ತಡ
ದೆಹಲಿಯಿಂದ ಲಂಡನ್‌ಗೆ ತೆರಳಬೇಕಿದ್ದ ವಿಮಾನದ ಬಿಜೆನೆಸ್ ಕ್ಲಾಸ್ನಲ್ಲಿ ಇರುವೆಗಳು ಕಾಣಿಸಿಕೊಂಡಿದ್ದರಿಂದ 3 ಗಂಟೆ ತಡವಾಗಿ ಹೊರಟಿದೆ.
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (IGI)ದಿಂದ ಸೋಮವಾರ ಮಧ್ಯಾಹ್ನ 2 ಗಂಟೆಗೆ ಹೊರಡಬೇಕಿದ್ದ ಏರ್ ಇಂಡಿಯಾದ ದೆಹಲಿ-ಲಂಡನ್ ವಿಮಾನದ ಬಿಜಿನೆಸ್ ಕ್ಲಾಸ್ನಲ್ಲಿ ಇರುವೆಗಳ ಸಮೂಹ ಪತ್ತೆಯಾದ ನಂತರ ಮೂರು ಗಂಟೆಗೂ ಹೆಚ್ಚು ವಿಳಂಬವಾಯಿತು ಎಂದು ಮೂಲಗಳು ತಿಳಿಸಿವೆ. AI-111 ವಿಮಾನವು ದೆಹಲಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ಸಮಯಕ್ಕೆ ಬದಲಾಗಿ ಸಂಜೆ 5.20ಕ್ಕೆ ಹೊರಟಿತು ಎಂದು ಅವರು ಹೇಳಿದರು. ಮೂಲಗಳ ಪ್ರಕಾರ, ವಿಮಾನವು ಲಂಡನ್‌ಗೆ ಹೊರಡುವ ಮುನ್ನ ಬಿಜಿನೆಸ್ ಕ್ಲಾಸ್ನ ಒಂದು ವಿಭಾಗದಲ್ಲಿ ಇರುವೆಗಳು ಕಂಡುಬಂದವು. ಆ ನಂತರ ವಿಮಾನವನ್ನು ಮತ್ತೊಂದು ಬೋಯಿಂಗ್ 787-8 ವಿಮಾನದೊಂದಿಗೆ ಬದಲಿಸಲಾಯಿತು. ಈ ಕುರಿತು ಹೇಳಿಕೆಗಾಗಿ ಪಿಟಿಐ ಸುದ್ದಿ ಸಂಸ್ಥೆಯ ಕೋರಿಕೆಗೆ ಏರ್ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಇದೇ ರೀತಿಯ ಘಟನೆ ಮೇ 27ರಂದು ನಡೆದಿತ್ತು. ಏರ್ ಇಂಡಿಯಾ ವಿಮಾನವು ಅಮೆರಿಕದ ನೆವಾರ್ಕ್ಗೆ ತೆರಳಬೇಕಾಗಿದ್ದು ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಬೇಕಾಗಿ ಬಂದ ನಂತರ ಕ್ಯಾಬಿನ್ ಸಿಬ್ಬಂದಿ ವಿಮಾನದೊಳಗೆ ಬಾವುಲಿ ಹಾರುತ್ತಿರುವುದನ್ನು ಕಂಡರು. ನಂತರ ಪೈಲಟ್‌ಗಳು ಬಾವುಲಿ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲರ್(ATC)ಗೆ ಮಾಹಿತಿ ನೀಡಿದರು ಮತ್ತು ವಿಮಾನವನ್ನು ತಿರುಗಿಸಲಾಯಿತು.
ವಿಮಾನವು ಮೇ 27ರ ಸಂಜೆ ಇಳಿದ ನಂತರ ಮತ್ತು ಎಲ್ಲರೂ ವಿಮಾನದಿಂದ ಹೊರಬಂದಾಗ, ಬೋಯಿಂಗ್ B777-300ER ವಿಮಾನದೊಳಗೆ ಹೊಗೆ ಆಡಿಸಲಾಯಿತು ಮತ್ತು ಬಾವುಲಿ ಸತ್ತುಹೋಯಿತು. ಅದರ ನಂತರ ಅದರ ಕಳೇಬರವನ್ನು ಬಿಜಿನೆಸ್ ಕ್ಲಾಸ್ನ ಎಂಟನೇ ಸಾಲಿನಿಂದ ತೆಗೆಯಲಾಯಿತು.
ಇದನ್ನೂ ಓದಿ: Viral Video: ಎರಡು ಸುರಂಗಗಳ ಮೂಲಕ ವಿಮಾನ ಹಾರಿಸಿದ ಪೈಲಟ್; ದಿಗ್ಭ್ರಮೆಗೊಳಿಸುವ ವಿಡಿಯೋ ವೈರಲ್
(Delhi- London Flight Delayed After Ants Found In Business Class At Indira Gandhi International Airport)
Published On - 9:27 pm, Mon, 6 September 21