Monkeypox ದೆಹಲಿಯಲ್ಲಿ ಮಂಕಿಪಾಕ್ಸ್ 4ನೇ ಪ್ರಕರಣ ಪತ್ತೆ; ದೇಶದಲ್ಲಿ 9ಕ್ಕೆ ಏರಿದ ಸೋಂಕಿತರ ಸಂಖ್ಯೆ

TV9 Digital Desk

| Edited By: Rashmi Kallakatta

Updated on:Aug 03, 2022 | 9:50 PM

ರೋಗಿಯು 31 ವರ್ಷದ ಮಹಿಳೆ ಎಂದು ಮೂಲಗಳು ಹೇಳಿವೆ. ಇದೀಗ ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿತರ ಒಟ್ಟು ಸಂಖ್ಯೆ  9 ಆಗಿದೆ.

Monkeypox ದೆಹಲಿಯಲ್ಲಿ ಮಂಕಿಪಾಕ್ಸ್ 4ನೇ ಪ್ರಕರಣ ಪತ್ತೆ; ದೇಶದಲ್ಲಿ 9ಕ್ಕೆ ಏರಿದ ಸೋಂಕಿತರ ಸಂಖ್ಯೆ
ಸಾಂದರ್ಭಿಕ ಚಿತ್ರ
Image Credit source: NDTV

ದೆಹಲಿ: ನೈಜೀರಿಯಾದ ಪ್ರಜೆಯೊಬ್ಬರಿಗೆ ಮಂಕಿಪಾಕ್ಸ್  (Monkeypox) ರೋಗವಿರುವುದು ಪತ್ತೆಯಾಗಿದ್ದು, ದೆಹಲಿಯಲ್ಲಿ(Delhi) ಮಂಕಿಪಾಕ್ಸ್ ನ 4ನೇ ಪ್ರಕರಣ ಬುಧವಾರ ವರದಿ ಆಗಿದೆ. ರೋಗಿಯು 31 ವರ್ಷದ ಮಹಿಳೆ ಎಂದು ಮೂಲಗಳು ಹೇಳಿವೆ. ಇದೀಗ ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿತರ ಒಟ್ಟು ಸಂಖ್ಯೆ  9 ಆಗಿದೆ. ಮಹಿಳೆಗೆ ಜ್ವರ ಮತ್ತು ಚರ್ಮದ ಮೇಲೆ  ಗಾಯಗಳಿದ್ದು, ಅವರನ್ನು ಲೋಕನಾಯಕ್ ಜೈ ಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆಕೆಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಬುಧವಾರ ಧನಾತ್ಮಕ ಫಲಿತಾಂಶ ಬಂದಿದೆ.

ನಿನ್ನೆ, ಯಾವುದೇ ಪ್ರಯಾಣದ ಇತಿಹಾಸವಿಲ್ಲದ 35 ವರ್ಷದ ವಿದೇಶಿ ವ್ಯಕ್ತಿ ದೆಹಲಿಯಲ್ಲಿ ಮಂಕಿಪಾಕ್ಸ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ. ವ್ಯಕ್ತಿಯನ್ನು ಸರ್ಕಾರಿ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕಿತ ಪ್ರಕರಣಗಳು ಮತ್ತು ರೋಗ ದೃಢಪಟ್ಟ ರೋಗಿಗಳಿಗೆ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಲು ಅರವಿಂದ್ ಕೇಜ್ರಿವಾಲ್ ಸರ್ಕಾರ ನಗರದ ಮೂರು ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶಿಸಿದೆ. ಸೋಮವಾರ ದೆಹಲಿಯ ಮೊದಲ ಮಂಕಿಪಾಕ್ಸ್ ರೋಗಿಯನ್ನು ಎಲ್ಎನ್​​ಜೆಪಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada