ಆಟೋದಿಂದ ಶಿಕ್ಷಕಿಯನ್ನು ಹೊರದಬ್ಬಿ ಐಫೋನ್ ಕದ್ದು ಪರಾರಿಯಾದ ದುಷ್ಕರ್ಮಿಗಳು
ಶಿಕ್ಷಕಿಯೊಬ್ಬರು ಆಟೋದಲ್ಲಿ ತೆರಳುತ್ತಿದ್ದಾಗ ಮುಸುಕುಧಾರಿಗಳು ಅವರಿಂದ ಐಫೋನ್ ಕಸಿದುಕೊಳ್ಳಲು ಪ್ರಯತ್ನಿಸಿ ಆಟೋದಿಂದ ಹೊರದಬ್ಬಿರುವ ಘಟನೆ ದೆಹಲಿಯಲ್ಲಿ ನಡೆದಿದೆ, ಶಿಕ್ಷಕಿಗೆ ಗಂಭೀರ ಗಾಯಗಳಾಗಿವೆ. ಮುಸುಕುಧಾರಿಗಳು ಶಿಕ್ಷಕಿಯ ಮೊಬೈಲ್ ಕಸಿಯಲು ಪ್ರಯತ್ನಿಸಿದರು ಅದು ಸಾಧ್ಯವಾಗದಿದ್ದಾಗ ಆಟೋದಿಂದ ಅವರನ್ನು ಎಳೆದು ರಸ್ತೆಗೆ ಹಾಕಿದ್ದಾರೆ.
ಶಿಕ್ಷಕಿಯೊಬ್ಬರು ಆಟೋದಲ್ಲಿ ತೆರಳುತ್ತಿದ್ದಾಗ ಮುಸುಕುಧಾರಿಗಳು ಅವರಿಂದ ಐಫೋನ್ ಕಸಿದುಕೊಳ್ಳಲು ಪ್ರಯತ್ನಿಸಿ ಆಟೋದಿಂದ ಹೊರದಬ್ಬಿರುವ ಘಟನೆ ದೆಹಲಿಯಲ್ಲಿ ನಡೆದಿದೆ, ಶಿಕ್ಷಕಿಗೆ ಗಂಭೀರ ಗಾಯಗಳಾಗಿವೆ. ಮುಸುಕುಧಾರಿಗಳು ಶಿಕ್ಷಕಿಯ ಮೊಬೈಲ್ ಕಸಿಯಲು ಪ್ರಯತ್ನಿಸಿದರು ಅದು ಸಾಧ್ಯವಾಗದಿದ್ದಾಗ ಆಟೋದಿಂದ ಅವರನ್ನು ಎಳೆದು ರಸ್ತೆಗೆ ಹಾಕಿದ್ದಾರೆ. ಶಿಕ್ಷಕಿ ಪ್ರಜ್ಞೆ ತಪ್ಪಿ ಬಿದ್ದಾಗ ಮೊಬೈಲ್ ಕದ್ದು ಪರಾರಿಯಾಗಿದ್ದಾರೆ. ಶಿಕ್ಷಕಿಯ ಮೂಗು ಮುರಿದಿದ್ದು, ಹಲವೆಡೆ ಗಂಭೀರ ಗಾಯಗಳಾಗಿವೆ.
ಶಿಕ್ಷಕಿ ಯೋವಿಕಾ ಡಿಯೋಲಿ ರಸ್ತೆಯಲ್ಲಿ ಕುಟುಂಬದವರೊಂದಿಗೆ ವಾಸವಿದ್ದಾರೆ. ಶುಕ್ರವಾರ ಶಾಲೆ ಮುಗಿದು ಮಧ್ಯಾಹ್ನ 2.10ಕ್ಕೆ ಆಟೋದಲ್ಲಿ ಮನೆಗೆ ಮರಳುತ್ತಿದ್ದರು, ಮಂದಿರ ಮಾರ್ಗದ ಖೋಖಾ ಮಾರುಕಟ್ಟೆ ತಲುಪಿದಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ.
ಮತ್ತಷ್ಟು ಓದಿ: ಚಿನ್ನಾಭರಣ ಲೂಟಿ ಮಾಡಿದ್ದ ಕಳ್ಳ, ತಿಂಗಳ ಬಳಿಕ ಟ್ರಾವೆಲ್ ವ್ಲಾಗ್ಸ್ನಿಂದ ಸಿಕ್ಕಿಬಿದ್ದ
ದುಷ್ಕರ್ಮಿಗಳು ಅವರನ್ನು ಸ್ವಲ್ಪ ದೂರ ಎಳೆದೊಯ್ದು ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ. ಶಿಕ್ಷಕಿಯ ಮೂಗು ಮುರಿದಿದೆ. ಜೊತೆಗೆ, ಹಣೆಯ ತಲೆ, ಭುಜ ಸೇರಿದಂತೆ ಹಲವೆಡೆ ಗಾಯಗಳಾಗಿವೆ. ಸಾಕೇತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ದುಷ್ಕರ್ಮಿಗಳು ಮುಖ ಮುಚ್ಚಿಕೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ