ದೆಹಲಿ ಮೇ 08: ರಾಜ್ಯದಲ್ಲಿ ಕಾಡ್ಗಿಚ್ಚಿಗೆ (Forest fires) ಮಳೆ ದೇವರನ್ನು ಅವಲಂಬಿಸಿರುವುದು ಪರಿಹಾರವಲ್ಲ ಎಂದು ಸುಪ್ರೀಂಕೋರ್ಟ್ (Supreme Court) ಬುಧವಾರ ಉತ್ತರಾಖಂಡ(Uttarakhand) ಸರ್ಕಾರಕ್ಕೆ ಹೇಳಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಅಧಿಕಾರಿಗಳು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಕಳೆದ ನವೆಂಬರ್‌ನಿಂದ ರಾಜ್ಯದಲ್ಲಿ 398 ಕಾಡ್ಗಿಚ್ಚುಗಳು ವರದಿಯಾಗಿವೆ ಎಂದು ಉತ್ತರಾಖಂಡ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಉತ್ತರಾಖಂಡದ ಡೆಪ್ಯುಟಿ ಅಡ್ವೊಕೇಟ್ ಜನರಲ್ ಜತೀಂದರ್ ಕುಮಾರ್ ಸೇಥಿ ಅವರು, ಕಾಡ್ಗಿಚ್ಚು ಮಾನವ ನಿರ್ಮಿತವಾಗಿದ್ದು, 388 ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಮತ್ತು ನಿಯಮಗಳ ಉಲ್ಲಂಘನೆಗಾಗಿ 60 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. 0.1 ರಷ್ಟು ಮಾತ್ರ ವನ್ಯಜೀವಿ ರಕ್ಷಿತ ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ವಕೀಲರು ಹೇಳಿದ್ದಾರೆ. ಈ ಬೆಂಕಿಗೆ ಮಾನವ ನಿರ್ಮಿತ ಕಾರಣಗಳನ್ನು ದೂಷಿಸಿದರು.
“ಮೋಡ ಬಿತ್ತನೆ ಅಥವಾ ಮಳೆ ದೇವರನ್ನು ಅವಲಂಬಿಸಿರುವುದು ಉತ್ತರವಲ್ಲ. ಅವರು (ಅರ್ಜಿದಾರರು) ನೀವು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳುವುದು ಸರಿ” ಎಂದು ಪೀಠ ಹೇಳಿದೆ. ಬೆಂಕಿಯಲ್ಲಿ ಜನರು ಹೇಗೆ ಸತ್ತರು ಎಂದು ನ್ಯಾಯಪೀಠವು ವಕೀಲರನ್ನು ಕೇಳಿದಾಗ, ಅವರು ಐದು ಉತ್ತರಗಳನ್ನು ನೀಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಪರ ವಾದಿಸಿದ ವಕೀಲರು, ಮಾಧ್ಯಮ ವರದಿಗಳು ಕಾಡ್ಗಿಚ್ಚುಗಳನ್ನು ನಿಭಾಯಿಸುವಲ್ಲಿ ತೊಡಗಿರುವ ಅಧಿಕಾರಿಗಳು ಚುನಾವಣಾ ಸಂಬಂಧಿತ ಕೆಲಸದಲ್ಲಿ ನಿರತವಾಗಿವೆ ಎಂದು ಹೇಳುತ್ತಿವೆ. ಪರಿಸ್ಥಿತಿ ದಯನೀಯವಾಗಿದೆ, ಬೆಂಕಿ ನಂದಿಸಲು ಹೋಗುವವರಿಗೆ ಸರಿಯಾದ ಸಲಕರಣೆಗಳೂ ಇಲ್ಲ,” ಎಂದಿದ್ದಾರೆ. ಪೀಠವು ಪ್ರಸ್ತುತ ಪ್ರಕರಣವನ್ನು ಮೇ 15ಕ್ಕೆ ವಿಚಾರಣೆಗೆ ಮುಂದೂಡಿತು.
ಈ ತಿಂಗಳ ಆರಂಭದಲ್ಲಿ, ಉತ್ತರಾಖಂಡದ ನೈನಿತಾಲ್‌ನ ವಸತಿ ಪ್ರದೇಶಕ್ಕೆ ಕಾಡ್ಗಿಚ್ಚು ಅಪಾಯಕಾರಿಯಾಗಿ ತಲುಪಿತ್ತು. ಅಗ್ನಿಶಾಮಕ ಕಾರ್ಯಾಚರಣೆಗಾಗಿ ಬೋಟಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಮತ್ತು ಸೇನೆಯ ಸಿಬ್ಬಂದಿಯನ್ನು ಕಾರ್ಯಾಚರಣೆಗಾಗಿ ಕರೆ ತರಲಾಗಿತ್ತು. ನೈನಿತಾಲ್ ದೇಶದಾದ್ಯಂತ ಅತ್ಯಂತ ಪ್ರಸಿದ್ಧವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ನೈನಿ ಸರೋವರಕ್ಕೆ ಹೆಸರುವಾಸಿಯಾಗಿದೆ. ಉತ್ತರಾಖಂಡದ ಹಲವೆಡೆ ಕಾಡ್ಗಿಚ್ಚು ಇನ್ನೂ ಅಬ್ಬರಿಸಿದ್ದು, ಬೆಂಕಿ ನಂದಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಉತ್ತರಾಖಂಡದಲ್ಲಿ ಏಪ್ರಿಲ್‌ನಿಂದ ಕಾಡ್ಗಿಚ್ಚು ಇದೆ. ಇಲ್ಲಿ ಮಳೆಯಿಲ್ಲದೆ ತಾಪಮಾನವು ಗಗನಕ್ಕೇರುತ್ತಿದೆ. ನಾವು ಕಳೆದ ಒಂದು ತಿಂಗಳಿನಿಂದ, ನಾವು ಹಲವಾರು ಸಂದರ್ಭಗಳಲ್ಲಿ ಬೆಳಿಗ್ಗೆ ಹೊಗೆ, ಧೂಳು ಮತ್ತು ಮಬ್ಬುಗಳಿಂದ ಎಚ್ಚರಗೊಳ್ಳುತ್ತಿದ್ದೇವೆ ಅಂತಾರೆ ನೈನಿತಾಲ್ ನಿವಾಸಿಗಳು.
ಇದನ್ನೂ ಓದಿ: Sam Pitroda resigns: ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ
ಭೋವಾಲಿ (ನೈನಿತಾಲ್‌ನಿಂದ 13 ಕಿಮೀ), ಖುರ್ಪತಾಲ್ (ನೈನಿತಾಲ್‌ನಿಂದ 11 ಕಿಮೀ), ಮತ್ತು ಭೀಮತಾಲ್ (ನೈನಿತಾಲ್‌ನಿಂದ 24 ಕಿಮೀ)ನಲ್ಲಿಯೂ ಕಾಡ್ಗಿಚ್ಚು ಇದೆ. ಬೆಂಕಿ ಎಷ್ಟು ತೀವ್ರವಾಗಿದೆ ಎಂದರೆ, ಏಪ್ರಿಲ್ 27 ರಂದು ಭೀಮತಾಲ್ ಸುತ್ತಮುತ್ತಲಿನ ಬೆಂಕಿಯನ್ನು ನಂದಿಸಲು ಭಾರತೀಯ ವಾಯುಪಡೆಯನ್ನು ಕರೆಸಲಾಯಿತು. ಕುಮಾವೂನ್ ಪ್ರದೇಶ ಮತ್ತು ಪೌರಿ ಗರ್ವಾಲ್ ಜಿಲ್ಲೆಗಳು ಕಾಡ್ಗಿಚ್ಚಿನ ತೀವ್ರತೆಗೆ ಸಾಕ್ಷಿಯಾಗುತ್ತಿವೆ. ಮೇ 6 ರಂದು, ಭಾರತೀಯ ವಾಯುಪಡೆಯು ಮತ್ತೊಮ್ಮೆ ತನ್ನ Mi17 V5 ಹೆಲಿಕಾಪ್ಟರ್‌ಗಳನ್ನು ಶ್ರೀಕೋಟ್‌ನ ಹಳ್ಳಿಗಳಲ್ಲಿ ಕಾಡ್ಗಿಚ್ಚುಗಳನ್ನು ನಿಯಂತ್ರಿಸವಲು ನಿಯೋಜಿಸಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:45 pm, Wed, 8 May 24