Maharashtra: ಕಟ್ಟಡದಿಂದ ಹಾರಿ ಮಹಿಳೆ ಆತ್ಮಹತ್ಯೆ, ಮನೆಯಲ್ಲಿ ಇಬ್ಬರು ಮಕ್ಕಳು ಶವವಾಗಿ ಪತ್ತೆ
ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪತಿಯ ಹಿಂಸೆ ತಡೆಯಲಾರದೆ ಇಬ್ಬರು ಮಕ್ಕಳಿಗೆ ವಿಷ ಹಾಕಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮಹಿಳೆಯೊಬ್ಬರು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ, ಆಕೆಯ ಇಬ್ಬರು ಮಕ್ಕಳು ಕೂಡ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಹಾರಾಷ್ಟ್ರದ ನಾಸಿಕ್ನಲ್ಲಿ ಘಟನೆ ನಡೆದಿದೆ. ಪತಿಯನ್ನು ದೂಷಿಸುವ ವಿಡಿಯೋ ಸಂದೇಶವನ್ನು ಬಿಟ್ಟು ಹೋಗಿದ್ದ ಅಶ್ವಿನಿ ನಿಕುಂಭ್ ತನ್ನ ಮಕ್ಕಳಾದ ಆರಾಧ್ಯ (8) ಮತ್ತು ಅಗಸ್ತ್ಯ (2) ಅವರ ಜೀವವನ್ನು ತೆಗೆದುಕೊಳ್ಳುವ ಮೊದಲು ವಿಷ ಕೊಟ್ಟಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಳಗ್ಗೆ 7 ಗಂಟೆ ಸುಮಾರಿಗೆ ಅಶ್ವಿನಿ ನಗರದ ಕೋನಾರ್ಕ್ ನಗರ ಪ್ರದೇಶದ ಹರಿ ವಂದನ್ ಅಪಾರ್ಟ್‌ಮೆಂಟ್‌ನ ಟೆರೇಸ್‌ನಿಂದ ಜಿಗಿದಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಆಕೆಯ ಇಬ್ಬರು ಮಕ್ಕಳು ಮನೆಯಲ್ಲಿ ಶವವಾಗಿ ಪತ್ತೆಯಾಗಿರುವುದನ್ನು ಕಂಡಿದ್ದಾರೆ. ಈ ವೇಳೆ ಆಕೆಯ ಪತಿ ದೂರದ ಊರಿಗೆ ಹೊರಗಿದ್ದರು.
ಪತಿ ಚಿತ್ರಹಿಂಸೆ ಕೊಡುತ್ತಿದ್ದರು ಎಂದು ದೂಷಿಸಿ ಬರೆದಿರುವ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಗೆಯೇ ವಿಡಿಯೋವನ್ನು ಕೂಡ ಮಾಡಿ ಆಕೆ ಸಾಯುವ ಮುನ್ನ ಆಕೆಯ ಸಂಬಂಧಿಕರಿಗೆ ವಿಡಿಯೋ ಕಳುಹಿಸಿದ್ದಳು. ಕೆಲಸದ ನಿಮಿತ್ತ ಪುಣೆಯಲ್ಲಿದ್ದ ಸ್ವಪ್ನಿಲ್ ಅವರನ್ನು ತನಿಖೆಗಾಗಿ ಕರೆಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಿಹಾರದ ಸೇತುವೆ ಕೆಳಗೆ ರುಂಡವಿಲ್ಲದ ಮಹಿಳೆ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆ ಬಿಹಾರ(Bihar)ದ ಜಮುಯಿ ಅಂಬಾ ಹಳ್ಳಿಯ ಪುಲಿಯಾ ಪ್ರದೇಶದ ಸೇತುವೆಯ ಕೆಳಗೆ ರುಂಡವಿಲ್ಲದ ಮಹಿಳೆ(Woman)ಯ ಶವ(Dead Body) ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ ಮತ್ತು ಸ್ಥಳದಿಂದ ಮದ್ಯ, ಸ್ಪ್ರೈಟ್ ಮತ್ತು ನೀರಿನ ಬಾಟಲಿಗಳು ಸಹ ಪತ್ತೆಯಾಗಿವೆ. ಮಹಿಳೆಯ ಶವ ಪತ್ತೆಯಾದ ನಂತರ ಸ್ಥಳದಲ್ಲಿ ಸಂಚಲನ ಉಂಟಾಗಿದೆ. ಮೃತದೇಹದಿಂದ ದುರ್ವಾಸನೆಯೂ ಬರುತ್ತಿತ್ತು.
ಸದ್ಯ ತಲೆ ಪತ್ತೆಯಾಗದ ಕಾರಣ ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಘಟನೆಗೆ ಕಾರಣಗಳು ಕೂಡ ತಿಳಿದುಬಂದಿಲ್ಲ. ಪೊಲೀಸರು ಮೃತದೇಹವನ್ನು ಗುರುತಿಸುವಲ್ಲಿ ನಿರತರಾಗಿದ್ದಾರೆ. ದುರ್ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಮಹಿಳೆಯ ಅರೆನಗ್ನ ಶವವನ್ನು ಮೋರಿಯೊಳಗೆ ಇರುವುದು ಪತ್ತೆ ಮಾಡಿದ್ದಾರೆ. ಬಳಿಕ ನಗರ ಠಾಣೆಗೆ ಮಾಹಿತಿ ನೀಡಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ