AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಟವನ್ನು ಕಿತ್ತು ಕಸದ ಬುಟ್ಟಿಗೆ ಎಸೆದಿದ್ರು, ಅಮೆರಿಕದಲ್ಲಿ ತಮಗಾದ ಅನುಭವ ಹಂಚಿಕೊಂಡ ವ್ಯಕ್ತಿ

ಒಂದೆಡೆ ಅಮೆರಿಕದಲ್ಲಿ ಭಾರತೀಯ ಅಕ್ರಮ ವಲಸಿಗರನ್ನು ನಡೆಸಿಕೊಳ್ಳುತ್ತಿರುವ ರೀತಿ ಹಾಗೂ ಭಾರತಕ್ಕೆ ಅವರನ್ನು ಕರೆತರುವ ರೀತಿ ಬಗ್ಗೆ ವಿರೋಧ ಪಕ್ಷಗಳು ಹಲವು ಬಾರಿ ಪ್ರಶ್ನೆಗಳನ್ನು ಎತ್ತಿದ್ದವು. ಆದರೂ ಅಮೆರಿಕದ ರೀತಿ ಬದಲಾಗಿಲ್ಲ. ಇತ್ತೀಚೆಗಷ್ಟೇ ಭಾರತೀಯರನ್ನು ವಿಮಾನದಲ್ಲಿ ಕರೆತರುವ ವೇಳೆ ಅವರ ಕೈಗಳಿಗೆ ಕೋಳ ತೊಡಿಸಲಾಗಿತ್ತು ಎಂದು ವ್ಯಕ್ತಿಯೊಬ್ಬರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದರು.

ಪೇಟವನ್ನು ಕಿತ್ತು ಕಸದ ಬುಟ್ಟಿಗೆ ಎಸೆದಿದ್ರು, ಅಮೆರಿಕದಲ್ಲಿ ತಮಗಾದ ಅನುಭವ ಹಂಚಿಕೊಂಡ ವ್ಯಕ್ತಿ
ಜತಿಂದರ್ Image Credit source: India Today
ನಯನಾ ರಾಜೀವ್
|

Updated on: Feb 17, 2025 | 11:39 AM

Share

ಒಂದೆಡೆ ಅಮೆರಿಕದಲ್ಲಿ ಭಾರತೀಯ ಅಕ್ರಮ ವಲಸಿಗರನ್ನು ನಡೆಸಿಕೊಳ್ಳುತ್ತಿರುವ ರೀತಿ ಹಾಗೂ ಭಾರತಕ್ಕೆ ಅವರನ್ನು ಕರೆತರುವ ರೀತಿ ಬಗ್ಗೆ ವಿರೋಧ ಪಕ್ಷಗಳು ಹಲವು ಬಾರಿ ಪ್ರಶ್ನೆಗಳನ್ನು ಎತ್ತಿದ್ದವು. ಆದರೂ ಅಮೆರಿಕದ ರೀತಿ ಬದಲಾಗಿಲ್ಲ. ಇತ್ತೀಚೆಗಷ್ಟೇ ಭಾರತೀಯರನ್ನು ವಿಮಾನದಲ್ಲಿ ಕರೆತರುವ ವೇಳೆ ಅವರ ಕೈಗಳಿಗೆ ಕೋಳ ತೊಡಿಸಲಾಗಿತ್ತು ಎಂದು ವ್ಯಕ್ತಿಯೊಬ್ಬರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದರು. ಇದೀಗ ಅಂಥದ್ದೇ ಘಟನೆಯೊಂದು ಮುನ್ನಲೆಗೆ ಬಂದಿದ್ದು, ಶಿಬಿರದಲ್ಲಿ ನಮ್ಮ ಪೇಟವನ್ನು ಕಸದ ಬುಟ್ಟಿಗೆ ಎಸೆದಿದ್ದರು, ಜತೆಗೆ ಚಿತ್ರಹಿಂಸೆ ಕೊಟ್ಟಿದ್ದರು ಎಂದು ವ್ಯಕ್ತಿಯೊಬ್ಬರು ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಭಾನುವಾರ ಅಮೆರಿಕದಿಂದ ಅಮೃತಸರಕ್ಕೆ ಗಡೀಪಾರು ಮಾಡಲಾದ 112 ಅಕ್ರಮ ಭಾರತೀಯ ವಲಸಿಗರಲ್ಲಿ ಒಬ್ಬರಾದ ಜತೀಂದರ್ ಸಿಂಗ್, ಅಲ್ಲಿನ ಬಂಧನ ಶಿಬಿರದಲ್ಲಿ ಎರಡು ವಾರಗಳ ಕಾಲ ತಂಗಿದ್ದ ಅನುಭವವನ್ನು ವಿವರಿಸಿದ್ದಾರೆ. ತನಗೆ ಚಿತ್ರಹಿಂಸೆ ನೀಡಲಾಯಿತು ಮತ್ತು ಸರಿಯಾದ ಆಹಾರ ಸಿಗಲಿಲ್ಲ, ಅಮೆರಿಕ ಸೇನೆಯು ತನ್ನ ಪೇಟವನ್ನು ತೆಗೆಯಲು ಒತ್ತಾಯಿಸಿದರು, ಬಳಿಕ ಅದನ್ನು ಕಸದ ಬುಟ್ಟಿಗೆ ಎಸೆದಿದ್ದರು. ಅಮೃತಸರದಲ್ಲಿ ಸರಿಯಾದ ಉದ್ಯೋಗ ಸಿಗದ ಕಾರಣ ತನ್ನ ಕುಟುಂಬವನ್ನು ಪೋಷಿಸಲು ವಿದೇಶದಲ್ಲಿ ಉದ್ಯೋಗ ಅರಸಿ ಹೋಗಿದ್ದೆ. ಅಮೆರಿಕದ ಮಿಲಿಟರಿ ವಿಮಾನದಲ್ಲಿ ಸುಮಾರು 36 ಗಂಟೆಗಳ ಕಾಲ ಬಂಧನದಲ್ಲಿದ್ದೆ ಎಂದರು.

ಕಳೆದ ವರ್ಷ ನವೆಂಬರ್ 27 ರಂದು ನಾನು ಅಮೆರಿಕದ ಗಡಿಯನ್ನು ಪ್ರವೇಶಿಸುವಾಗ ಸಿಕ್ಕಿಬಿದ್ದ ನಂತರ ನನ್ನನ್ನು ಎರಡು ವಾರಗಳ ಕಾಲ ಬಂಧನ ಶಿಬಿರಕ್ಕೆ ಕಳುಹಿಸಲಾಯಿತು. ಕಳೆದ ವರ್ಷ ಸೆಪ್ಟೆಂಬರ್ 12 ರಂದು ನಾನು ಮನೆಯಿಂದ ಹೊರಟೆ. ಬಂಧನ ಶಿಬಿರದಲ್ಲಿ, ನನ್ನ ವಿರೋಧದ ಹೊರತಾಗಿಯೂ ಅವರು ನನ್ನ ಪೇಟವನ್ನು ತೆಗೆಯುವಂತೆ ಒತ್ತಾಯಿಸಿದರು.

ಮತ್ತಷ್ಟು ಓದಿ: ಅಮೆರಿಕದಿಂದ ಭಾರತೀಯರ ಗಡಿಪಾರು: ಪ್ರಧಾನಿ ಮೋದಿಯನ್ನು ಭೇಟಿಯಾದ ಜೈಶಂಕರ್

2024 ರ ನವೆಂಬರ್‌ನಲ್ಲಿ ತನ್ನ ಸ್ನೇಹಿತರ ಸಲಹೆಯ ಮೇರೆಗೆ ಏಜೆಂಟ್‌ ಜೊತೆ ಸಂಪರ್ಕಕ್ಕೆ ಬಂದ ಜತೀಂದರ್ ಸಿಂಗ್, ಅವರನ್ನು ಅಮೆರಿಕಕ್ಕೆ ಕರೆದೊಯ್ಯುವ ಭರವಸೆ ನೀಡಿದ ನಂತರ ಅವರಿಗೆ 50 ಲಕ್ಷ ರೂ.ಗಳನ್ನು ಪಾವತಿಸಿದ್ದರು. ನನ್ನ ಇಬ್ಬರು ವಿವಾಹಿತ ಸಹೋದರಿಯರ ಆಭರಣಗಳನ್ನು ಸಹ ನಾನು ಮಾರಿ ಉಳಿದ ಮೊತ್ತವನ್ನು ಏಜೆಂಟ್‌ಗೆ ಪಾವತಿಸಿದ್ದೆ, ಜತೆಗೆ 1.3 ಎಕರೆಯಷ್ಟು ಜಮೀನು ಮಾಡಿದ್ದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ