ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಕ್ಕೆ ಸೊಸೆ ಮನೆಯನ್ನೇ ನೆಲಸಮ ಮಾಡಿದ ಮಾವ
ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಕ್ಕೆ ಸೊಸೆಯ ಮನೆಯನ್ನೇ ಮಾವ ನೆಲಸಮ ಮಾಡಿರುವ ಘಟನೆ ಉತ್ತರ ಪ್ರದೇಶದ ಹಾಪುರ್ನಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಮಾನವ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದರು. ದೂರು ಹಿಂತೆಗೆದುಕೊಳ್ಳುವಂತೆ ಕೇಳಿದ್ದರೂ ಆಕೆ ಪ್ರತಿಕ್ರಿಯಿಸದ ಕಾರಣ ಕೋಪಗೊಂಡ ಮಾವ ಬುಲ್ಡೋಜರ್ ತರಿಸಿ ಆಕೆ ಇದ್ದ ಮನೆಯನ್ನು ಕೆಡವಿದ್ದಾರೆ.

ಲೈವ್ ಹಿಂದೂಸ್ತಾನ್ ವರದಿ ಪ್ರಕಾರ, ಈ ಘಟನೆ ಹಾಪುರ್ ಜಿಲ್ಲೆಯ ಗರ್ನಗರದ ಬಳಿ ನಡೆದಿದೆ. ಮಹಿಳೆ ದೂರು ದಾಖಲಿಸಿದ್ದು, ತನ್ನ ಪತಿ ಮದ್ಯವ್ಯಸನಿಯಾಗಿದ್ದ, ಜೂಜಾಡುತ್ತಿದ್ದ, ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡಿಕೊಮಡಿದ್ದೇನೆ. ಮಾವನಿಗೆ ಕೂಡ ಮದ್ಯದ ಚಟ ಇದೆ ಎಂದು ಮಹಿಳೆ ಹೇಳಿದ್ದಾಳೆ.
ಕಳೆದ ಗುರುವಾರ ಬೆಳಗ್ಗೆ ಮನೆಯಲ್ಲಿ ಒಬ್ಬಳೇ ಇರುವಾಗ ಆಕೆಯ ಮಾವ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದ, ಮಹಿಳೆ ಆತನನ್ನು ತಳ್ಳಿ ತಪ್ಪಿಸಿಕೊಂಡು ಸುರಕ್ಷತೆಗಾಗಿ ತನ್ನ ಅತ್ತಿಗೆಯ ಮನೆಗೆ ಓಡಿ ಹೋಗಿದ್ದಳು. ಆಕೆ ತಪ್ಪಿಸಿಕೊಂಡಿದ್ದರಿಂದ ಕೋಪಗೊಂಡ ಮಾವ ಬುಲ್ಡೋಜರ್ ವ್ಯವಸ್ಥೆ ಮಾಡಿ ಆಕೆಯ ಮನೆಯನ್ನು ಸಂಪೂರ್ಣವಾಗಿ ಕೆಡವಿದರು ಎಂದು ವರದಿಯಾಗಿದೆ.
ಮತ್ತಷ್ಟು ಓದಿ:ತಮಿಳುನಾಡು: ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಆಟೋದಲ್ಲಿ ಕಿಡ್ನ್ಯಾಪ್ ಮಾಡಿ ಲೈಂಗಿಕ ದೌರ್ಜನ್ಯ
ಪರಿಣಾಮವಾಗಿ, ಮಹಿಳೆ ಮತ್ತು ಆಕೆಯ ಕುಟುಂಬ ನಿರಾಶ್ರಿತರಾಗಿದ್ದಾರೆ. ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಡೀ ಘಟನೆಯ ವಿವರವಾದ ವರದಿಯನ್ನು ದಾಖಲಿಸಿದ್ದಾರೆ. ಇನ್ಸ್‌ಪೆಕ್ಟರ್ ನೀರಜ್ ಕುಮಾರ್ ಅವರು ತಮ್ಮ ದೂರಿನ ಆಧಾರದ ಮೇಲೆ ಆರೋಪಿ ಮಾವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೃಢಪಡಿಸಿದರು.
ಅಂದೇ ಅವರನ್ನು ನ್ಯಾಯಾಂಗ ಬಂಧನಕ್ಕೆ ತೆಗೆದುಕೊಂಡು ಜೈಲಿಗೆ ಕಳುಹಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು, ತನಿಖೆ ಪೂರ್ಣಗೊಂಡ ನಂತರ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ