ವಿಗ್ ಧರಿಸಿದ್ದರಿಂದಲೇ ಕೇತನ್​ನನ್ನು ಕೊಂದಳಾ ಸಿಯಾ?; ಮಹಾರಾಷ್ಟ್ರ ಸಿಎಂ ಭೇಟಿ ಬಳಿಕ ತಂದೆಯ ಶಾಕಿಂಗ್ ಹೇಳಿಕೆ

ಮಹಾರಾಷ್ಟ್ರದಲ್ಲಿ ತಲ್ಲಣ ಮೂಡಿಸಿರುವ ಕೇತನ್ ಅಗರ್​ವಾಲ್ ಕೊಲೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊಸ ವಿಷಯಗಳು ಬಯಲಾಗುತ್ತಿವೆ. ಲೋಹಗಢ್ ಕೋಟೆಯಿಂದ ಕೆಳಗೆ ತಳ್ಳಿ ಕೊಲೆ ಮಾಡಲಾದ ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಅವರ ತಂದೆ ಈ ಕೊಲೆಯ ಹಿಂದಿರಬಹುದಾದ ಕಾರಣದ ಕುರಿತು ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಮೃತ ಕೇತನ್ ಅವರ ತಂದೆ ವಿಶಾಲ್ ಅಗರ್ವಾಲ್ ತನ್ನ ಮಗ ತಲೆಗೆ ಸಣ್ಣ ಹೇರ್ ಪ್ಯಾಚ್ (ವಿಗ್) ಧರಿಸುತ್ತಿದ್ದ ಕಾರಣಕ್ಕಾಗಿ ಆತನನ್ನು ಗುರಿಯಾಗಿಸಿಕೊಂಡು ಕೊಂದಿರಬಹುದು ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ವಹಿಸುವ ಹಾಗೂ ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಗ್ ಧರಿಸಿದ್ದರಿಂದಲೇ ಕೇತನ್​ನನ್ನು ಕೊಂದಳಾ ಸಿಯಾ?; ಮಹಾರಾಷ್ಟ್ರ ಸಿಎಂ ಭೇಟಿ ಬಳಿಕ ತಂದೆಯ ಶಾಕಿಂಗ್ ಹೇಳಿಕೆ
Ketan And Siya Goyal
Image Credit source: x

Updated on: Jun 26, 2026 | 6:29 PM

ಮುಂಬೈ, ಜೂನ್ 26: ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೇತನ್ ಅಗರ್​ವಾಲ್ (Ketan Agarwal) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೊಸದೊಂದು ಆಘಾತಕಾರಿ ತಿರುವು ಸಿಕ್ಕಿದೆ. ಮೃತ ಕೇತನ್ ಅಗರ್​ವಾಲ್ ಅವರ ತಂದೆ ಮಹಾರಾಷ್ಟ್ರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳ ಎದುರು ಅತ್ಯಂತ ಭಯಾನಕ ಮತ್ತು ಆತಂಕಕಾರಿ ಆರೋಪ ಮಾಡಿದ್ದಾರೆ. “ಆರೋಪಿ ಸಿಯಾ ಗೋಯಲ್, ನನ್ನ ಮಗ ಕೇತನ್ ತಲೆಗೆ ವಿಗ್ ಧರಿಸುತ್ತಿದ್ದ ಎಂಬ ಕಾರಣಕ್ಕಾಗಿಯೇ ಆತನನ್ನು ಹತ್ಯೆ ಮಾಡಿದಳೇ?” ಎಂಬ ಸಂಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣವು ಕೇವಲ ವೈಯಕ್ತಿಕ ದ್ವೇಷವೋ ಅಥವಾ ಇದರ ಹಿಂದೆ ಬೇರೆ ಏನಾದರೂ ಆಳವಾದ ಕಾರಣವಿದೆಯೇ ಎಂಬ ತನಿಖೆ ನಡೆಯುತ್ತಿರುವಾಗಲೇ ತಂದೆಯ ಈ ಹೇಳಿಕೆ ತಲ್ಲಣ ಮೂಡಿಸಿದೆ. ಕೇತನ್ ಅವರ ತಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಪ್ರಕರಣದ ತುರ್ತು ಮತ್ತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದರು. ಮುಖ್ಯಮಂತ್ರಿಗಳನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೆಲವು ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೇತನ್ ಕೊಲೆಗೂ ಮುನ್ನ ಲವರ್ ಜೊತೆ ಕೆಫೆಯಲ್ಲಿ ಕುಳಿತು ಪ್ಲಾನ್ ಮಾಡಿದ್ದಳು ಸಿಯಾ ಗೋಯಲ್!

“ನನ್ನ ಮಗ ಕೇತನ್ ತಲೆಕೂದಲಿನ ಸಮಸ್ಯೆಯಿಂದಾಗಿ ಸಣ್ಣ ಹೇರ್ ಪ್ಯಾಚ್ (ವಿಗ್) ಧರಿಸುತ್ತಿದ್ದ. ಈ ವಿಷಯ ಆರೋಪಿ ಸಿಯಾ ಗೋಯಲ್‌ಗೆ ತಿಳಿದ ತಕ್ಷಣ ಆಕೆ ತೀವ್ರ ಅಸಮಾಧಾನಗೊಂಡಿದ್ದಳು. ಇದೇ ಒಂದು ಸಣ್ಣ ಕಾರಣಕ್ಕಾಗಿ ಆಕೆ ನನ್ನ ಮಗನ ಜೀವ ತೆಗೆಯುವಷ್ಟು ಕ್ರೂರಿಯಾದಳೇ ಎಂಬ ಸಂಶಯ ನಮಗೆ ಕಾಡುತ್ತಿದೆ” ಎಂದು ಕೇತನ್​ನ ತಂದೆ ಕಣ್ಣೀರು ಹಾಕಿದ್ದಾರೆ.


ಈ ಕೊಲೆಯ ಹಿಂದೆ ಕೇವಲ ಸಿಯಾ ಮಾತ್ರವಲ್ಲದೆ ಇನ್ನೂ ಕೆಲವರ ಕೈವಾಡ ಇರುವ ಸಾಧ್ಯತೆ ಇದೆ. ಇದು ವ್ಯವಸ್ಥಿತವಾಗಿ ನಡೆದ ಪಿತೂರಿಯಾಗಿದ್ದು, ಪೊಲೀಸರು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತಪ್ಪಿತಸ್ಥಳೆಂದು ಸಾಬೀತಾದರೆ ಮಗಳನ್ನು ಕೂಡ ಅದೇ ಕೋಟೆಯಿಂದ ತಳ್ಳಿ, ಸಿಯಾ ಬಗ್ಗೆ ತಂದೆಯ ಭಾವುಕ ಮಾತು

ಸಿಎಂ ಫಡ್ನವೀಸ್ ಭರವಸೆ:

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ವಹಿಸುವ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us