AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇತನ್ ಕೊಲೆಗೂ ಮುನ್ನ ಲವರ್ ಜೊತೆ ಕೆಫೆಯಲ್ಲಿ ಕುಳಿತು ಪ್ಲಾನ್ ಮಾಡಿದ್ದಳು ಸಿಯಾ ಗೋಯಲ್!

ಮಹಾರಾಷ್ಟ್ರದ ಕೋಟೆಯೊಂದರಿಂದ ತನ್ನ ಭಾವಿ ಪತಿಯನ್ನು ಕೆಳಗೆ ತಳ್ಳಿ ಕೊಲ್ಲುವ ಕೆಲವೇ ಗಂಟೆಗಳ ಮುನ್ನ ಸಿಯಾ ಗೋಯಲ್ ಪುಣೆಯ ಕೆಫೆಯೊಂದರಲ್ಲಿ ತನ್ನ ಪ್ರೇಮಿ ಚೇತನ್ ಚೌಧರಿಯನ್ನು ಭೇಟಿಯಾಗಿದ್ದಳು. ಜೂನ್ 18ರಂದು ನಡೆದ 26 ವರ್ಷದ ಕೇತನ್ ಅಗರ್ವಾಲ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮತ್ತೊಂದು ಮಹತ್ವದ ಸಾಕ್ಷಿ ಸಿಕ್ಕಿದೆ. ಆ ಘಟನೆಯ ಹಿಂದಿನ ದಿನ ಸಿಯಾ ಮತ್ತು ಚೇತನ್ ಕೆಫೆಯೊಂದರಲ್ಲಿ ಗಂಟೆಗಟ್ಟಲೆ ಕುಳಿತು ಮಾತನಾಡುತ್ತಾ ಇರುವ ಸಿಸಿಟಿವಿ ವಿಡಿಯೋ ಪೊಲೀಸರಿಗೆ ಸಿಕ್ಕಿದೆ. ಅದೇ ಕೆಫೆಯಲ್ಲಿ ಕುಳಿತು ಅವರು ಮರುದಿನದ ಕೇತನ್ ಹತ್ಯೆಗೆ ಸಂಚು ರೂಪಿಸಿದ್ದರು.

ಕೇತನ್ ಕೊಲೆಗೂ ಮುನ್ನ ಲವರ್ ಜೊತೆ ಕೆಫೆಯಲ್ಲಿ ಕುಳಿತು ಪ್ಲಾನ್ ಮಾಡಿದ್ದಳು ಸಿಯಾ ಗೋಯಲ್!
Siya And Chetan In Cafe
ಸುಷ್ಮಾ ಚಕ್ರೆ
|

Updated on:Jun 25, 2026 | 5:27 PM

Share

ಮುಖ್ಯಾಂಶಗಳು

  • ಕೇತನ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಸುಳಿವು
  • ಲವರ್ ಜೊತೆ ಕುಳಿತು ಕೆಫೆಯಲ್ಲಿ ಪ್ಲಾನ್ ಮಾಡಿದ್ದಳು ಸಿಯಾ
  • ಸಿಸಿಟಿವಿ ವಿಡಿಯೋ ವೈರಲ್

ಪುಣೆ, ಜೂನ್ 25: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 25 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal Death) ಅವರ ಭೀಕರ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆಯಿಂದ ಅತ್ಯಂತ ಆಘಾತಕಾರಿ ಮತ್ತು ಸಿನಿಮೀಯ ಶೈಲಿಯ ವಿವರಗಳು ಹೊರಬಂದಿವೆ. ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ತನ್ನ ಪ್ರೇಮಿ ಚೇತನ್ ಚೌಧರಿ ಜೊತೆ ಸೇರಿ ಪುಣೆಯ ಕೆಫೆಯೊಂದರಲ್ಲಿ ಕಾಫಿ ಡೇಟ್ ಮಾಡುತ್ತಾ ಈ ಕೊಲೆಗೆ ಪಕ್ಕಾ ಪ್ಲಾನ್ ಮಾಡಿದ್ದಳು ಎಂಬುದು ಸಿಸಿಟಿವಿ ದೃಶ್ಯಾವಳಿ ಹಾಗೂ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.

ಕೇತನ್​ನ ಕೊಲೆಗೆ ಜೂನ್ 17ರಂದು ಪುಣೆಯ ಕೆಫೆಯೊಂದರಲ್ಲಿ ಇಬ್ಬರೂ ಒಟ್ಟಿಗೆ ಕುಳಿತು ಸಂಚು ರೂಪಿಸಿದ್ದರು. ಇದಾದ ಮರುದಿನವೇ (ಜೂನ್ 18) ಲೋಹಗಢ್ ಕೋಟೆಯ ಮೇಲೆ ಕರೆದುಕೊಂಡು ಹೋಗಿ, ಕಂದಕಕ್ಕೆ ತಳ್ಳಿ ಕೇತನ್ ಅವರನ್ನು ಕೊಲೆ ಮಾಡಲಾಗಿತ್ತು.

ಕೆಫೆ ಡೇಟ್‌ನಲ್ಲೇ ಕೊಲೆಗೆ ಸಂಚು:

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಜೂನ್ 17ರಂದು ಪುಣೆಯ ಪ್ರಸಿದ್ಧ ಕೆಫೆಯೊಂದರಲ್ಲಿ ಭೇಟಿಯಾಗಿದ್ದರು. ಇದು ಹೊರನೋಟಕ್ಕೆ ಸಾಮಾನ್ಯ ಪ್ರೇಮಿಗಳ ಕಾಫಿ ಡೇಟ್‌ನಂತೆ ಕಂಡರೂ, ಆ ಸಮಯದಲ್ಲಿ ಅವರಿಬ್ಬರೂ ಚರ್ಚಿಸುತ್ತಿದ್ದುದು ಕೇತನ್ ಅಗರ್ವಾಲ್ ಅವರನ್ನು ಹೇಗೆ ಕೊಲ್ಲಬೇಕು ಎಂಬುದರ ಬಗ್ಗೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇಬ್ಬರೂ ಕೆಫೆಯಲ್ಲಿ ಕುಳಿತು ಮಾತನಾಡುತ್ತಿರುವ ಸಿಸಿಟಿವಿ ವಿಡಿಯೋ ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಕೋಟೆಯಿಂದ ಕೇತನ್​ನ ತಳ್ಳುವ ಮುನ್ನ, ಕೊಲೆಯನ್ನು ಅಪಘಾತ ಎಂದು ಬಿಂಬಿಸುವುದು ಹೇಗೆ? ಎಂದು ಸರ್ಚ್​ ಮಾಡಿದ್ದ ಸಿಯಾ

ಯೂಟ್ಯೂಬ್ ನೋಡಿ ಸ್ಥಳ ಫೈನಲ್:

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಕೊಲೆ ಸಂಚಿನಲ್ಲಿ ಸಿಯಾ ಗೋಯಲ್ ಪ್ರಮುಖ ಪಾತ್ರ ವಹಿಸಿದ್ದಳು. ಸಿಯಾ ತನ್ನ ಪ್ರೇಮಿ ಚೇತನ್ ಜೊತೆ ಲೋಹಗಢ್ ಕೋಟೆಯ ಸಂಪೂರ್ಣ ಭೌಗೋಳಿಕ ಮಾಹಿತಿಯನ್ನು ಹಂಚಿಕೊಂಡಿದ್ದಳು. ಆ ಕೋಟೆಯ ಯಾವ ಭಾಗದಿಂದ ತಳ್ಳಿದರೆ ಮನುಷ್ಯ ಬದುಕುಳಿಯಲು ಸಾಧ್ಯವಿಲ್ಲ ಎಂಬುದನ್ನು ಪತ್ತೆಹಚ್ಚಲು ಅವರಿಬ್ಬರೂ ಕೆಫೆಯಲ್ಲೇ ಕುಳಿತು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಜಾಗವನ್ನು ಫೈನಲ್ ಮಾಡಿದ್ದರು.

ಇದನ್ನೂ ಓದಿ: ನನಗೆ ವಿಷಯ ತಿಳಿಸಿದ್ರೆ ಮದುವೆಯನ್ನೇ ಕ್ಯಾನ್ಸಲ್ ಮಾಡ್ತಿದ್ದೆ, ಆದ್ರೆ ನನ್ನ ಮಗನನ್ನು ಸಿಯಾ ಕೊಂದಿದ್ಯಾಕೆ? ಕೇತನ್ ತಂದೆ ಪ್ರಶ್ನೆ

ಮರುದಿನವೇ ಪ್ಲಾನ್ ಜಾರಿ:

ಕೆಫೆಯಲ್ಲಿ ಸ್ಕೆಚ್ ಹಾಕಿದ ಮರುದಿನವೇ, ಅವರ ಪ್ಲಾನ್ ಪ್ರಕಾರ ಕೇತನ್ ಅಗರ್ವಾಲ್ ಅವರನ್ನು ಲೋಹಗಢ್ ಕೋಟೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಕೇತನ್ ಅವರನ್ನು ಆಳವಾದ ಕಂದಕಕ್ಕೆ ತಳ್ಳಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈಗಾಗಲೇ ಪೊಲೀಸರು ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿಯನ್ನು ಬಂಧಿಸಿದ್ದು, ಕೆಫೆಯ ಸಿಸಿಟಿವಿ ದೃಶ್ಯಾವಳಿ ಹಾಗೂ ಅವರ ಮೊಬೈಲ್ ಹಿಸ್ಟರಿಯನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:22 pm, Thu, 25 June 26

Follow Us
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ
ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಸಾವು, ಆಪ್ತ ಗೆಳೆಯ ಹೇಳಿದ್ದೇನು?
ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಸಾವು, ಆಪ್ತ ಗೆಳೆಯ ಹೇಳಿದ್ದೇನು?
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ
ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ
‘11 ವರ್ಷಗಳಾದ್ರೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಇಲ್ಲ’
‘11 ವರ್ಷಗಳಾದ್ರೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಇಲ್ಲ’
ಐವರು ಜಲಸಮಾಧಿ ಕೇಸ್​: ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು?
ಐವರು ಜಲಸಮಾಧಿ ಕೇಸ್​: ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು?