ಬೆಂಗಳೂರು: ಕೊವಿಡ್ ಲಸಿಕೆ ಹಾಕಿಸಿಕೊಂಡವರಿಗೆ ನೀಡುವ ಪ್ರಮಾಣಪತ್ರದ (ಸರ್ಟಿಫಿಕೇಟ್) ಮೇಲೆ ಡಿಜಿಟಲ್ ಹೆಲ್ತ್ ಸಂಖ್ಯೆಯನ್ನು ಜನರೇಟ್ ಮಾಡಿ ನಮೂದಿಸಲಾಗುತ್ತಿದೆ. ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆಯಡಿ ಈ ಐಡಿಗಳನ್ನು ಜನರೇಟ್ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಆಧಾರ್ ಸಂಖ್ಯೆ ನೀಡಿ ಲಸಿಕೆ ಪಡೆದವರಿಗೆ ನೀಡುವ ಸರ್ಟಿಫಿಕೆಟ್ಗಳಲ್ಲಿ ಮಾತ್ರ ಡಿಜಿಟಲ್ ಹೆಲ್ತ್ ಐಡಿ ಸಿಗುತ್ತದೆ. ಇಂಥ ಐಡಿ ಜನರೇಟ್ ಮಾಡಲು ಲಸಿಕೆ ಪಡೆದವರು ಸಮ್ಮತಿ ನೀಡುವುದು ಅಗತ್ಯ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಕೆಲವರು ತಮ್ಮ ಅನುಮತಿ ಇಲ್ಲದೆ ಡಿಜಿಟಲ್ ಹೆಲ್ತ್ ಐಡಿ ಜನರೇಟ್ ಮಾಡಲಾಗಿದೆ ಎಂದು ಕೆಲವು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಈವರೆಗೆ 19 ಕೋಟಿಗೂ ಹೆಚ್ಚು ಜನರಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. ಮೊದಲ ಬಾರಿಗೆ ಲಸಿಕೆ ಹಾಕಿಸಿಕೊಂಡ ಹಲವರಿಗೆ ನೀಡಿರುವ ಪ್ರಮಾಣ ಪತ್ರದ ಮೇಲೆ ಯೂನಿಕ್ ಹೆಲ್ತ್ ಐಡಿ (Unique Health ID – UHID) ಅಥವಾ ಹೆಲ್ತ್ ಐಡಿ ಗಮನಿಸಿದ್ದಾರೆ. ಈ ಸಂಖ್ಯೆಯ ಬಗ್ಗೆ ಹಲವರು ಮಾಹಿತಿ ಇಲ್ಲದೆ ಗೊಂದಲಕ್ಕೆ ಒಳಗಾಗಿದ್ದಾರೆ.
ಭಾರತದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಡಿಜಿಟಲ್ ಮಾಡುವ ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಿದು. ಆರೋಗ್ಯ ಸೌಲಭ್ಯ ಒದಗಿಸುವ ವಿವಿಧ ವ್ಯವಸ್ಥೆಗಳಲ್ಲಿ (ಆಸ್ಪತ್ರೆ) ವ್ಯಕ್ತಿಯೊಬ್ಬರ ಆರೋಗ್ಯದ ಸಮಗ್ರ ಮಾಹಿತಿ ಒದಗಿಸುವ ಉದ್ದೇಶದಿಂದ ಡಿಜಿಟಲ್ ಐಡಿ ಜನರೇಟ್ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿತ್ತು.
(Digital Health ID in Vaccination Certificate Without Consent from People Many Questions Govt Action)
ಇದನ್ನೂ ಓದಿ: CoWIN vaccine certificate ಕೊವಿನ್ ಲಸಿಕೆ ಪ್ರಮಾಣ ಪತ್ರದಲ್ಲಿ ತಪ್ಪು ಇದ್ದರೆ ಸರಿ ಮಾಡುವುದು ಹೇಗೆ?
ಇದನ್ನೂ ಓದಿ: ರಾಜ್ಯಾದ್ಯಂತ 10 ಸಾವಿರ ಕ್ರೀಡಾಪಟುಗಳಿಗೆ ಉಚಿತ ಕೋವಿಡ್ -19 ಲಸಿಕೆ ಅಭಿಯಾನ; ದಿನಾಂಕಗಳು ಇಂತಿವೆ
Published On - 9:29 pm, Wed, 9 June 21