
ಪುಣೆ, ಡಿಸೆಂಬರ್ 28: ಪ್ರೀತಿಸಿ ಮದುವೆ(Marriage)ಯಾಗಿ 24 ಗಂಟೆಯೊಳಗೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮದುವೆಯಾದ 24 ಗಂಟೆಗಳಲ್ಲಿ ದಂಪತಿಗಳು ವಿಚ್ಛೇದನ ಪಡೆದಿದ್ದಾರೆ. ಮದುವೆಯ ಬಳಿಕ ಒಂದೇ ದಿನದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಪೂಡಿತ್ತು. ಇಬ್ಬರು ಜತೆಗಿರಲು ಸಾಧ್ಯವೇ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಪರಸ್ಪರ ಒಪ್ಪಿಗೆ ನೀಡಿ ಬೇರೆಯಾಗಲು ಒಪ್ಪಿಕೊಂಡ ನಂತರ ವಿಚ್ಛೇದನ ನಡೆಯಿತು.
ಇಬ್ಬರೂ ನಾಲ್ಕು ವರ್ಷಗಳಿಂದ ಪರಿಚಿತರು, ಪರಸ್ಪರ ಪ್ರೀತಿಸಿದ ನಂತರ ವಿವಾಹವಾದರು ಎಂದು ಅವರ ವಕೀಲರು ತಿಳಿಸಿದ್ದಾರೆ. ಆಧುನಿಕ ಕಾಲದಲ್ಲಿ ಮದುವೆಗಳ ಬಗ್ಗೆ ತ್ವರಿತ ವಿಚ್ಛೇದನವು ಚರ್ಚೆಯನ್ನು ಹುಟ್ಟುಹಾಕಿದೆ. ಈ ದಂಪತಿ ಎರಡು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದರು.
ವಾಸ್ತವವಾಗಿ, ಈ ವಿವಾಹವು ಪ್ರೇಮ ವಿವಾಹವಾಗಿತ್ತು. ಇಬ್ಬರೂ ಎರಡು ಮೂರು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು ಮತ್ತು ದೀರ್ಘಕಾಲದ ಸಂಬಂಧದ ನಂತರ ಮದುವೆಯಾಗಲು ನಿರ್ಧರಿಸಿದರು. ಪತ್ನಿ ವೃತ್ತಿಯಲ್ಲಿ ವೈದ್ಯೆ, ಗಂಡ ಎಂಜಿನಿಯರ್.
ಮತ್ತಷ್ಟು ಓದಿ: ತಂಗಿ ಮೇಲೆ ಅತ್ಯಾಚಾರ, ಮದುವೆಯಾಗೋದಾಗಿ ಅಕ್ಕನಿಗೆ ಮೋಸ: ಸಹೋದರಿಯರನ್ನು ಕಾಡಿದ್ದ ಆರೋಪಿ ಅರೆಸ್ಟ್
ಮದುವೆಯಾದ ಕೂಡಲೇ, ಮುಂದಿನ ಜೀವನದ ಬಗ್ಗೆ ಹಲವು ಗೊಂದಲಗಳು ಹುಟ್ಟಿಕೊಂಡಿದ್ದವು. ಪತಿ ಮತ್ತು ಪತ್ನಿಯರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ತುಂಬಾ ಆಳವಾಗಿದ್ದವು, ಅವರು ಯಾವುದೇ ಘರ್ಷಣೆಯಿಲ್ಲದೆ ಬೇರ್ಪಡಲು ನಿರ್ಧರಿಸಿದರು ಎಂದು ವಕೀಲರು ವಿವರಿಸಿದರು. ಈ ಇಡೀ ಪ್ರಕರಣದಲ್ಲಿ ಹಿಂಸೆ ಅಥವಾ ಕ್ರಿಮಿನಲ್ ಆರೋಪಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಅವರು ಶಾಂತಿಯುತವಾಗಿ ಕಾನೂನು ಪ್ರಕ್ರಿಯೆಯನ್ನು ಮುಂದುವರಿಸಿದರು ಮತ್ತು ಪರಸ್ಪರ ಒಪ್ಪಿಗೆಯ ಮೂಲಕ ತಮ್ಮ ಮದುವೆಯನ್ನು ಕೊನೆಗೊಳಿಸಿದರು.ಭಾರತದಲ್ಲಿ ವಿಚ್ಛೇದನ ಪ್ರಕರಣಗಳು ಸಾಮಾನ್ಯವಾಗಿ ನ್ಯಾಯಾಲಯದಲ್ಲಿ ದೀರ್ಘಕಾಲ ವಿಳಂಬವಾಗುತ್ತವೆ, ಆದರೆ ಈ ಪ್ರಕರಣವು ಬಹಳ ಬೇಗನೆ ಇತ್ಯರ್ಥವಾಯಿತು ಎಂದು ವಕೀಲೆ ರಾಣಿ ಸೋನಾವಾನೆ ವಿವರಿಸಿದರು.
ಮದುವೆಯಾದ ಮರುದಿನವೇ ದಂಪತಿಗಳು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು ಮತ್ತು ನ್ಯಾಯಾಲಯವು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ತನ್ನ ನಿರ್ಧಾರವನ್ನು ಪ್ರಕಟಿಸಿತ್ತು.
ಹಾಗಾದರೆ ಘರ್ಷಣೆಗೆ ಕಾರಣವಾಗಿದ್ದೇನು?
ಅಂದು ಮದುವೆಯ ವಿಧಿ ವಿಧಾನಗಳೆಲ್ಲವೂ ನೆರವೇರಿತ್ತು. ಆತ ತಾನೂ ಕೂಡ ವೈದ್ಯನೆಂದು ಹೇಳಿದ್ದ, ಆದರೆ ಮದುವೆಯ ದಿನ ಆತ ವೈದ್ಯನಲ್ಲ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಂಜಿನಿಯರ್ ಎಂದು ತಿಳಿದುಬಂದಿತ್ತು.ಆಗಾಗ ಐದಾರು ತಿಂಗಳುಗಳ ಕಾಲ ಮನೆಯಿಂದ ಹೊರಗಿರಬೇಕಾಗುತ್ತದೆ ಎಂದು ವಿವರಿಸಿದಾಗ ಆಕೆಗೆ ಆಘಾತವಾಗಿತ್ತು. ತಕ್ಷಣವೇ ಪತಿಯಿಂದ ಬೇರ್ಪಟುವ ನಿರ್ಧಾರ ಮಾಡಿದ್ದಾಳೆ. ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳಲು 18 ಗಂಟೆಗಳನ್ನು ತೆಗೆದುಕೊಂಡಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ