AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋರಖ್​ನಾಥ ದೇಗುಲಕ್ಕೆ ನುಗ್ಗಲು ಯತ್ನಿಸಿದ್ದ ಮುಸ್ಲಿಂ ಯುವಕನ ಮಾನಸಿಕ ಆರೋಗ್ಯದ ಬಗ್ಗೆ ವೈದ್ಯರು ಮೌನ; ತಂದೆಯ ಮಾತುಗಳಿಗೆ ಇಲ್ಲ ಪುರಾವೆ

ಅಹ್ಮದ್​ ಮುರ್ತಾಜಾ ಕೈ ಮೇಲೆ ಗಾಯವಾಗಿದ್ದು ಬಿಟ್ಟರೆ, ಬೇರೆನೂ ಸಮಸ್ಯೆ ಆಗಿಲ್ಲ. ಆ ಗಾಯಕ್ಕೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ.  ಅದರ ಹೊರತಾಗಿ ಬೇರೇನೂ ಸಮಸ್ಯೆ ಆತನಿಗೆ ಆಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಗೋರಖ್​ನಾಥ ದೇಗುಲಕ್ಕೆ ನುಗ್ಗಲು ಯತ್ನಿಸಿದ್ದ ಮುಸ್ಲಿಂ ಯುವಕನ ಮಾನಸಿಕ ಆರೋಗ್ಯದ ಬಗ್ಗೆ ವೈದ್ಯರು ಮೌನ; ತಂದೆಯ ಮಾತುಗಳಿಗೆ ಇಲ್ಲ ಪುರಾವೆ
ಗೋರಖ್​ಪುರದಲ್ಲಿ ನಡೆದ ಘಟನೆ
TV9 Web
| Edited By: |

Updated on: Apr 13, 2022 | 4:38 PM

Share

ಕೈಯಲ್ಲಿ ಹರಿತವಾದ ಆಯುಧ ಹಿಡಿದು, ಸ್ವಧರ್ಮದ ಘೋಷಣೆ ಕೂಗುತ್ತ ಗೋರಖಪುರದ ದೇಗುಲಕ್ಕೆ ನುಗ್ಗಲು ಯತ್ನಿಸಿದ್ದ ಅಹ್ಮದ್​ ಮುರ್ತಾಜಾನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆತನನ್ನು ವಿಚಾರಣೆ ನಡೆಸುತ್ತಿರುವ ಆ್ಯಂಟಿ ಟೆರರಿಸಂ ಸ್ಕ್ವಾಡ್​  ಮಂಗಳವಾರ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಗೋರಖ್​ಪುರದ ಸಾದರ್​ ಆಸ್ಪತ್ರೆಗೆ ಕರೆದೊಯ್ದಿತ್ತು. ಆತನ ತಪಾಸಣೆಯನ್ನು ಡಾ. ಜೆ.ಎಸ್​. ಪಿ.ಸಿಂಗ್​ ಮಾಡಿದ್ದಾರೆ. ಆದರೆ ಆರೋಪಿಯ ಮಾನಸಿಕ ಆರೋಗ್ಯದ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡಲು ಅವರು ನಿರಾಕರಿಸಿದ್ದಾರೆ. 

ಅಹ್ಮದ್​ ಮುರ್ತಾಜಾ ಕೈ ಮೇಲೆ ಗಾಯವಾಗಿದ್ದು ಬಿಟ್ಟರೆ, ಬೇರೆನೂ ಸಮಸ್ಯೆ ಆಗಿಲ್ಲ. ಆ ಗಾಯಕ್ಕೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ.  ಅದರ ಹೊರತಾಗಿ ಬೇರೇನೂ ಸಮಸ್ಯೆ ಆತನಿಗೆ ಆಗಿಲ್ಲ. ಕೈಗೆ ಎಕ್ಸ್​ರೇಯನ್ನೂ ಮಾಡಲಾಗಿದೆ. ಆತನಿಗೆ ಆಗಿದ್ದು ಅಂಥ ದೊಡ್ಡ ಗಾಯವಲ್ಲ ಎಂದು ಹೇಳಿರುವ ವೈದ್ಯರು ಮುರ್ತಾಜಾ ಮಾನಸಿ ಆರೋಗ್ಯದ ಬಗ್ಗೆ ಜಾಸ್ತಿ ಏನೂ ಹೇಳಲಿಲ್ಲ.  ಈ  ಅಹ್ಮದ್​ ಮುರ್ತಾಜಾ  29ವರ್ಷದವ. ಏಪ್ರಿಲ್​ 3ರ ಸಂಜೆ 7ಗಂಟೆ ಹೊತ್ತಿಗೆ ಗೋರಖ್​​ಪುರ ದೇವಾಲಯದ ಒಳಗೆ ನುಗ್ಗುವಾಗ ತನ್ನ ಧರ್ಮಕ್ಕೆ ಸಂಬಂಧಪಟ್ಟ ಘೋಷಣೆಗಳನ್ನು ಕೂಗಿದ್ದ. ಬಳಿಕ ಸುತ್ತಲೂ ಇದ್ದ ಜನರೇ ಆತನನ್ನು ತಡೆದು, ಓಡಿಸಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು.. ಈತ ಕೈಯಲ್ಲಿ ಕತ್ತಿಯಂಥ ಹರಿತವಾದ ಆಯುಧ ಹಿಡಿದು, ದೊಡ್ಡದಾಗಿ ಕೂಗುತ್ತ ದೇಗುಲದೆಡೆಗೆ ಬರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಹಾಗೇ ಅಡ್ಡ ಬಂದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದ.

ಆತನನ್ನು ಪೊಲೀಸರು ಬಂಧಿಸಿದ್ದ ಬೆನ್ನಲ್ಲೇ  ತಂದೆ ಪ್ರತಿಕ್ರಿಯೆ ನೀಡಿ, ಮುರ್ತಾಜಾ ಮಾನಸಿಕವಾಗಿ ಅಸ್ವಸ್ಥ. ಹೀಗಾಗಿ ಅಪರಾಧ ಮಾಡುವ ಉದ್ದೇಶದಿಂದ ಆತ ಹೀಗೆ ಮಾಡಿದ್ದಲ್ಲ. ಆತನೇನು ಮಾಡುತ್ತಿದ್ದಾನೆ ಎಂಬುದು ಅವನಿಗೇ ಗೊತ್ತಿಲ್ಲ. ಹಾಗಾಗಿ ಇದನ್ನು ಅಪರಾಧವೆಂದು ಪರಿಗಣಿಸಬಾರದು ಎಂದು ಹೇಳಿದ್ದರು. ಆದರೆ ತಾಪಸಣೆ ಮಾಡಿದ ವೈದ್ಯ, ಜೆ.ಎಸ್​.ಪಿ.ಸಿಂಗ್​, ಮುರ್ತಾಜಾ ಮಾನಸಿ ಅಸ್ವಸ್ಥ ಎಂಬುದನ್ನು ನಿಶ್ಚಯವಾಗಿ ಹೇಳಲು ನಮಗೆ ಪುರಾವೆಗಳು ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಅಷ್ಟು ಬಿಟ್ಟರೆ ಹೆಚ್ಚೇನೂ ವಿವರಣೆ ಕೊಟ್ಟಿಲ್ಲ.

ಏಪ್ರಿಲ್ 3ರಂದು ಸಂಜೆ ಈತ ಇಷ್ಟೆಲ್ಲ ಗಲಭೆ ಸೃಷ್ಟಿಸಿದ ಬೆನ್ನಲ್ಲೇ ಪೊಲೀಸರು ಇವನನ್ನ ಬಂಧಿಸಿದ್ದರು. ಇದು ಉಗ್ರಕೃತ್ಯ ಎಂಬುದನ್ನು ಅಲ್ಲಗಳೆಯಲಾಗದು ಎಂದು ಹೇಳಲಾಗಿತ್ತು. ಹಾಗಾಗಿ ಏಪ್ರಿಲ್ 6ರಂದು ಮುರ್ತಾಜಾನನ್ನು ಭಯೋತ್ಪಾದಕ ವಿರೋಧಿ ಸ್ಕ್ವಾಡ್​ಗೆ ವರ್ಗಾಯಿಸಲಾಗಿತ್ತು.

ಇದನ್ನೂ ಓದಿ: IPL 2022: 5 ಇನ್ನಿಂಗ್ಸ್, ಕೇವಲ 107 ರನ್! ನಾಯಕತ್ವದಿಂದ ಕೆಳಗಿಳಿದರೂ ಬದಲಾಗಲಿಲ್ಲ ಕೊಹ್ಲಿ ಹಣೆಬರಹ

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ