ಸಿಎಎ ಒಪ್ಪಬೇಡಿ, ನಿಮ್ಮನ್ನು ಬಂಧನದಲ್ಲಿಡುತ್ತಾರೆ: ಹಿಂದೂ ಮತುವಾ ಸಮುದಾಯದವರಿಗೆ ಕರೆ ನೀಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

Mamata Banerjee Calls Matua Community to Reject CAA: ನೀವು ಸಿಎಎ ಅನ್ನು ಒಪ್ಪಬೇಡಿ. ಕೇಂದ್ರದ ಮಾತು ನಂಬಿ ಸಿಎಎ ಅಡಿಯಲ್ಲಿ ನೀವು ಅರ್ಜಿ ಹಾಕಿದರೆ ನಿಮ್ಮನ್ನು ವಿದೇಶಿಗರೆಂದು ಪರಿಗಣಿಸಿ ಡಿಟೆನ್ಷನ್ ಸೆಂಟರ್​ನಲ್ಲಿ ಇಡುತ್ತಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಿಂದೂ ಮತುವಾ ಸಮುದಾಯದವರಿಗೆ ಕರೆ ನೀಡಿದ್ದಾರೆ. ಕೃಷ್ಣಾನಗರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಮೊದಲ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ದೀದಿ, ತಾನು ಪಶ್ಚಿಮ ಬಂಗಾಳದಲ್ಲಿ ಸಿಎಎ ಮತ್ತು ಎನ್​ಆರ್​ಸಿ ಎರಡನ್ನೂ ಜಾರಿ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.

ಸಿಎಎ ಒಪ್ಪಬೇಡಿ, ನಿಮ್ಮನ್ನು ಬಂಧನದಲ್ಲಿಡುತ್ತಾರೆ: ಹಿಂದೂ ಮತುವಾ ಸಮುದಾಯದವರಿಗೆ ಕರೆ ನೀಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 01, 2024 | 9:41 AM

ಕೋಲ್ಕತಾ, ಮಾರ್ಚ್ 31: ಕೇಂದ್ರ ಸರ್ಕಾರ ಜಾರಿ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (CAA- Citizenship Amendment Act) ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಕಡು ವಿರೋಧ ಮುಂದುವರಿದಿದೆ. ಕೃಷ್ಣಾನಗರ ಲೋಕಸಭಾ ಕ್ಷೇತ್ರದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಮಮತಾ ಬ್ಯಾನರ್ಜಿ, ಸಿಎಎ ಅನ್ನು ಒಪ್ಪಬಾರದು ಎಂದು ಮತುವಾ ಸಮುದಾಯದ (Matua community) ಜನರಿಗೆ ಕರೆ ನೀಡಿದ್ದಾರೆ. ಮತುವಾ ಎಂಬುದು ಹಿಂದೂ ಧರ್ಮದ ದಲಿತರು ಸೇರಿ ಆಗಿರುವ ಒಂದು ಮತವಾಗಿದ್ದು, ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಸಮುದಾಯದವರು ಇದ್ದಾರೆ. ಭಾರತದ ವಿಭಜನೆ ಬಳಿಕ ಹಲವರು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿದ್ದಾರೆ. ಹಾಗೆಯೇ, ಧಾರ್ಮಿಕ ದೌರ್ಜನ್ಯಕ್ಕೊಳಗಾಗಿಯೂ ಬಾಂಗ್ಲಾದಿಂದ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದವರಿದ್ದಾರೆ. ಇವರನ್ನು ಉದ್ದೇಶಿಸಿ ಮಾತನಾಡಿರುವ ಮಮತಾ ಬ್ಯಾನರ್ಜಿ, ಸಿಎಎ ಹಿಂದಿರುವ ಪಿತೂರಿ ಬಗ್ಗೆ ಎಚ್ಚರಿಸಲು ಪ್ರಯತ್ನಿಸಿದ್ದಾರೆ.

‘ಮತುವನ್ನರೇ ನನ್ನ ಮೇಲೆ ನಂಬಿಕೆ ಇಡಿ. ನಿಮ್ಮ ಪೌರತ್ವವನ್ನು ಕಿತ್ತುಕೊಳ್ಳಲು ಯಾರಿಗೂ ಅವಕಾಶ ಕೊಡುವುದಿಲ್ಲ. ಕೇಂದ್ರ ಸರ್ಕಾರದ ಸುಳ್ಳು ಭರವಸೆಗಳಿಗೆ ಮಾರುಹೋಗಬೇಡಿ. ನೀವು ಪೌರತ್ವಕ್ಕೆ ಅರ್ಜಿ ಸಲ್ಲಿಸಿದರೆ ನಿಮ್ಮನ್ನು ಐದು ವರ್ಷ ವಿದೇಶಿಗ ಎಂದು ಪರಿಗಣಿಸುತ್ತಾರೆ. ನಿಮ್ಮಿಂದ ಎಲ್ಲವನ್ನೂ ಕಿತ್ತುಕೊಂಡು ಡಿಟೆಂಶನ್ ಕ್ಯಾಂಪ್​ನಲ್ಲಿ ಇರಿಸುತ್ತಾರೆ. ನಿಮಗೆ ಅದು ಬೇಕಾ? ಅಥವಾ ಶಾಂತಿಯಿಂದ ಬದುಕುವುದು ಬೇಕಾ?’ ಎಂದು ಮಮತಾ ಬ್ಯಾನರ್ಜಿ ತಮ್ಮ ಭಾಷಣದ ವೇಳೆ ಕೇಳಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಸಿಎಎ ಮಾತ್ರವಲ್ಲ, ಎನ್​ಆರ್​ಸಿಯನ್ನೂ ಜಾರಿ ಮಾಡಲು ಬಿಡುವುದಿಲ್ಲ’ ಎಂದು ತಮ್ಮ ಶಪಥವನ್ನು ದೀದಿ ಪುನರುಚ್ಚರಿಸಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆ ಆದ ಬಳಿಕ ಮಮತಾ ಬ್ಯಾನರ್ಜಿ ಅವರ ಮೊದಲ ಚುನಾವಣಾ ಪ್ರಚಾರ ಸಭೆ ಇದು. ಕೃಷ್ಣಾನಗರದಲ್ಲಿ ಬಿಜೆಪಿ ಪರವಾಗಿ ರಾಜಮಾತ ಅಮೃತಾ ರಾಯ್ ಸ್ಪರ್ಧಿಸಿದ್ದಾರೆ. ಅವರಿಗೆ ಎದುರಾಗಿ ಟಿಎಂಸಿಯಿಂದ ಮಹುವಾ ಮೊಯಿತ್ರಾ ನಿಂತಿದ್ದಾರೆ. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಹೈಪ್ರೊಫೈಲ್ ಕ್ಷೇತ್ರಗಳಲ್ಲಿ ಇದೂ ಒಂದಾಗಿದೆ.

ಇದನ್ನೂ ಓದಿ: ದೆಹಲಿ ಸಿಎಂ ನಿಜವಾದ ದೇಶಭಕ್ತ; ಅವರನ್ನು ಜೈಲಿಗೆ ಹಾಕಿದ್ದು ಸರಿಯೇ?: ಸುನೀತಾ ಕೇಜ್ರಿವಾಲ್

ಮತುವಾ ಸಮುದಾಯದವರ ಬಗ್ಗೆ….

ಕರ್ನಾಟಕದಲ್ಲಿ ಬಸವಣ್ಣನವರಿಂದ ಧಾರ್ಮಿಕ ಕ್ರಾಂತಿ ಮತ್ತು ಸುಧಾರಣೆಗಳು ಆದ ರೀತಿಯಲ್ಲಿ 19ನೇ ಶತಮಾನದಲ್ಲಿ ಬಂಗಾಳದಲ್ಲಿ ಆಯಿತು. ಹಿಂದೂ ಧರ್ಮದಲ್ಲಿ ಶೂದ್ರರಿಗಿಂತಲೂ ಕೀಳೆನ್ನಲಾದ, ಅಥವಾ ಅತಿಶೂದ್ರೆಂದು ಪರಿಗಣಿಸಲಾದ ನಾಮಶೂದ್ರರು ಹಿಂದೂ ಧರ್ಮದ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದ್ದರು. ಹರಿಚಂದ್ ಠಾಕೂರ್ ಎಂಬುವರು ಈ ಕ್ರಾಂತಿಯ ಹರಿಕಾರ. ಹರಿಚಂದ್ ಚಿಕ್ಕ ವಯಸ್ಸಿನಲ್ಲೇ ಆತ್ಮದರ್ಶನ ಪಡೆದರೆನ್ನಲಾಗಿದೆ. ತಾನು ದೇವರ ಅವತಾರ ಎಂದ ಇವರು ತುಳಿತಕ್ಕೊಳಗಾದವರಿಗೆ ಮುಕ್ತಿ ಕೊಡುವ ಮಾತುಗಳನ್ನಾಡುತ್ತಿದ್ದರು. ಧಾರ್ಮಿಕ ಸುಧಾರಣೆಗಳನ್ನು ಬೋಧಿಸಲು ಆರಂಭಿಸಿದರು. ಹರಿನಾಮ ಈ ಕ್ರಾಂತಿಯ ಮೂಲಮಂತ್ರವಾಯಿತು. ಹರಿನಾಮ ಒಪ್ಪಿದವರು ಹರಿಚಂದ್ ಅವರನ್ನು ದೇವರ ಅವತಾರ ಎಂದು ಒಪ್ಪಿದವರು ಮತುವಾ ಮತಕ್ಕೆ ಸೇರತೊಡಗಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Sun, 31 March 24

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು