AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಲಸಿಕಾ ಅಭಿಯಾನದ ಟಾರ್ಗೆಟ್​ ತಲುಪಬೇಕಾದರೆ ಬೃಹತ್ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸಬೇಕು: ಡಾ ಗುಲೇರಿಯಾ

ದೆಹಲಿ, ಪಂಜಾಬ್ ಮತ್ತು ಇನ್ನಿತರ ಕೆಲ ರಾಜ್ಯಗಳು ಲಸಿಕಗಳಿಗಾಗಿ ಜಾಗತಿಕ ಪಾರ್ಮಾಸ್ಯೂಟಿಕಲ್ ಕಂಪನಿಗಳಿಗೆ ಸಲ್ಲಿಸಿರುವ ಬೇಡಿಕೆಗಳನ್ನು ಮಾನ್ಯ ಮಾಡಲು ನಿರಾಕರಿಸಿದ ನಂತರ ಗುಲೇರಿಯಾ ಅವರು ಹೀಗೆ ಕಾಮೆಂಟ್ ಮಾಡಿದ್ದಾರೆ.

ಭಾರತ ಲಸಿಕಾ ಅಭಿಯಾನದ ಟಾರ್ಗೆಟ್​ ತಲುಪಬೇಕಾದರೆ ಬೃಹತ್ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸಬೇಕು: ಡಾ ಗುಲೇರಿಯಾ
ಏಮ್ಸ್ ಮುಖ್ಯಸ್ಥ ಡಾ ರಣದೀಪ್ ಗುಲೇರಿಯ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:May 30, 2021 | 1:13 AM

ನವದೆಹಲಿ: ಭಾರತವು ತಾನಂದುಕೊಂಡಿರುವ ಕೊವಿಡ್​ ಲಸಿಕೆಯ ಟಾರ್ಗೆಟ್​ ತಲುಪಬೇಕಾದರೆ, ಲಸಿಕೆ ಉತ್ಪಾದನೆ ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಬೇಕು ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯಸ್ಥ (ಎಐಐಎಮ್​ಎಸ್) ಡಾ ರಂದೀಪ್ ಗುಲೇರಿಯಾ ಅವರು ಶನಿವಾರ ಹೇಳಿದರು. ಅದರ ಜೊತೆಗೆ ಬೇರೆ ರಾಷ್ಟ್ರಗಳಿಂದ ಲಸಿಕೆಗಳನ್ನು ಆಮದು ಮಾಡಕೊಳ್ಳುವ ಬಗ್ಗೆಯೂ ಒಂದು ಸಮಗ್ರ ಯೋಜನೆಯನ್ನು ರೂಪಿಸಿಕೊಳ್ಳಬೇಕು ಅಂತ ಅಂತ ನವದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದರ ಜೊತೆ ಮಾತಾಡುವಾಗ ಅವರು ಹೇಳಿದರು.

‘ಜುಲೈ ಅಂತ್ಯದವರೆಗೆ ಭಾರತವು ಪ್ರತಿದಿನ ಒಂದು ಕೋಟಿ ಜನಕ್ಕೆ ಲಸಿಕೆ ನೀಡುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಅದು ಸಾಧ್ಯವಾಗಬೇಕಾದೆ ಲಸಿಕೆ ಉತ್ಪಾದನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಬೇಕು ಮತ್ತು ಸಾಧ್ಯವಿರುವಷ್ಟು ಪ್ರಮಾಣದಲ್ಲಿ ಅವುಗಳನ್ನು ಹೊರದೇಶಗಳಿಂದ ತರಿಸಿಕೊಳ್ಳಬೇಕು,’ ಎಂದು ಡಾ ಗುಲೇರಿಯಾ ಹೇಳಿದರು.

ಲಸಿಕೆಗಳನ್ನು ಸಂಗ್ರಹಿಸಲು ಒಂದು ಸಮಗ್ರವಾದ ಯೋಜನೆಯ ಅಗತ್ಯವಿದೆ ಎಂದು ಹೇಳಿದ ಗುಲೇರಿಯಾ ಅವರು ಯಾವುದಾದರೂ ಒಂದು ಸಂಸ್ಥೆಯಿಂದ ಅವುಗಳನ್ನು ಪಡಯುವ ಬದಲು ಹಲವಾರು ಕಂಪನಿಗಳಿಗೆ ಲಸಿಕಗಳನ್ನು ಪೂರೈಸಲು ಹೇಳಬೇಕು ಅಂದರು.

ದೆಹಲಿ, ಪಂಜಾಬ್ ಮತ್ತು ಇನ್ನಿತರ ಕೆಲ ರಾಜ್ಯಗಳು ಲಸಿಕಗಳಿಗಾಗಿ ಜಾಗತಿಕ ಪಾರ್ಮಾಸ್ಯೂಟಿಕಲ್ ಕಂಪನಿಗಳಿಗೆ ಸಲ್ಲಿಸಿರುವ ಬೇಡಿಕೆಗಳನ್ನು ಮಾನ್ಯ ಮಾಡಲು ನಿರಾಕರಿಸಿದ ನಂತರ ಗುಲೇರಿಯಾ ಅವರು ಹೀಗೆ ಕಾಮೆಂಟ್ ಮಾಡಿದ್ದಾರೆ. ಸದರಿ ಕಂಪನಿಗಳು ತಾವು ಕೇವಲ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸುವ ನೀತಿಗೆ ಬದ್ಧರಾಗಿರುವುದಾಗಿ ಹೇಳಿವೆ.

ಲಸಿಕೆಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಖಾಸಗಿ ಆಸ್ಪತ್ರೆಗಳು ಮತ್ತು ಪ್ರಾದೇಶಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ನೇರವಾಗಿ ಅವರಿಗೆ ಲಸಿಕೆಗಳನ್ನು ಸರಬರಾಜು ಮಾಡಲು ಅನುಮತಿ ನೀಡುವ ಹೊಸ ನೀತಿಯನ್ನು ಕೇಂದ್ರ ಸರ್ಕಾರವು ಇತ್ತೀಚಿಗೆ ಜಾರಿಗೊಳಿಸಿದ ನಂತರ ರಾಜ್ಯ ಸರ್ಕಾರಗಳಿಗೆ ಲಸಿಕೆಗಳಿಗಾಗಿ ಖಾಸಗಿ ಸಂಸ್ಥೆಗಳ ಮೊರೆ ಹೋಗುವ ಅನಿವಾರ್ಯತೆ ಎದುರಾಗಿದೆ.

ಗರ್ಭಿಣಿ ಮಹಿಳೆಯರಿಗೂ ಲಸಿಕೆ ನೀಡುವ ಅಗತ್ಯದ ಬಗ್ಗೆ ಮಾತಾಡಿದ ಡಾ ಗುಲೇರಿಯಾ, ‘ಗರ್ಭಿಣಿ ಮಹಿಳೆಯರಲ್ಲಿ ವ್ಯಾಧಿ ತಗಲುವ ಮತ್ತು ಮರಣದ ಪ್ರಮಾಣ ಜಾಸ್ತಿಯಿರುತ್ತದೆ, ಹಾಗಾಗಿ ಅವರಿಗೆ ಲಸಿಕೆ ಹಾಕುವುದನ್ನು ನಾವು ಆದಷ್ಟು ಬೇಗ ಪ್ರಾರಂಭಿಸಬೇಕು,’ ಎಂದರು. ಲಭ್ಯವಿರುವ ಜಾಗತಿಕ ಡಾಟಾದ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯರ ಮೇಲೆ ಲಸಿಕೆ ಬೀರಬಹುದಾದ ಋಣಾತ್ಮಕ ಅಂಶಗಳಿಗಂತ ಪ್ರಯೋಜನೆಗಳೇ ಜಾಸ್ತಿ ಎಂದು ಗುಲೇರಿಯಾ ಹೇಳಿದರು.

ಕೊವ್ಯಾಕ್ಸಿನ್ ಲಸಿಕೆಯು ನಿಷ್ಕ್ರಿಯಗೊಳಿಸಿದ ವೈರಸ್​ನಿಂದ ತಯಾರು ಮಾಡಿರುವ ವ್ಯಾಕ್ಸಿನ್ ಆಗಿರುವುದರಿಂದ ಮತ್ತು ಅದು ಫ್ಲು ಲಸಿಕೆಗಿಂತ ಭಿನ್ನವೇನೂ ಅಲ್ಲದಿರುವುದರಿಂದ ಗರ್ಭಿಣಿ ಮಹಿಳೆಯರಲ್ಲೂ ಸುರಕ್ಷಿತವಾಗಿದೆ ಎಂದು ಡಾ ಗುಲೇರಿಯಾ ಹೇಳಿದರು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಲ್ಟಿವಿಟಮಿನ್​ ಮತ್ತು ಜಿಂಕ್ ಅಂಶವನ್ನು ಜಾಸ್ತಿ ಹೊಂದಿರುವ ಪೂರಕ ಮಾತ್ರೆ ಅಥವಾ ಟಾನಿಕ್ ತೆಗೆದುಕೊಳ್ಳುವ ಬಗ್ಗೆ ಮಹತ್ತರವಾದ ಸ್ಪಷ್ಟನೆ ನೀಡಿದ ಡಾ ಗುಲೇರಿಯಾ ಅವರು, ಇವುಗಳನ್ನು ತೆಗೆದುಕೊಳ್ಳುವುದರಿಂದ ದೇಹಕ್ಕೆ ಯಾವುದೇ ಹಾನಿಯಿಲ್ಲವಾದರೂ ತೆಗೆದುಕೊಳ್ಳಬಾರದೆಮಂದು ಹೇಳಿದರು. ಅವುಗಳ ಬದಲಿಗೆ ಆರೋಗ್ಯಕರ ಆಹಾರ ಸೇವಿಸಿ ವಿಟಮಿನ್​ಗಳನ್ನು ಅವುಗಳ ನೈಸರ್ಗಿಕ ಮೂಲದಿಂದ ಪಡೆದುಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ: ಕೊರೊನಾ 3ನೇ ಅಲೆ ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್ ಅನಿವಾರ್ಯ, ಈ ಅಂಶಗಳತ್ತ ಗಮನಹರಿಸದಿದ್ದರೆ ಅಪಾಯ: ಏಮ್ಸ್ ನಿರ್ದೇಶಕ ಸೂಚನೆ

Published On - 11:10 pm, Sat, 29 May 21

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್