Droupadi Murmu: ಕೋಟ್ಯಂತರ ಮಹಿಳೆಯರ ಕನಸು, ಸಾಮರ್ಥ್ಯದ ಪ್ರತಿಬಿಂಬವಾಗಿ ನಾನು ರಾಷ್ಟ್ರಪತಿಯಾಗಿದ್ದೇನೆ; ದ್ರೌಪದಿ ಮುರ್ಮು
ರಾಷ್ಟ್ರಪತಿ ಹುದ್ದೆಗೇರಿದ್ದು ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ಕೋಟಿಗಟ್ಟಲೆ ಮಹಿಳೆಯರ ಕನಸುಗಳು ಮತ್ತು ಸಾಮರ್ಥ್ಯಗಳ ಪ್ರತಿಬಿಂಬವಾಗಿ ನಾನು ಈ ಹುದ್ದೆಗೆ ಏರಿದ್ದೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ನವದೆಹಲಿ: ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು (Droupadi Murmu) ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಮಾತನಾಡಿರುವ ದ್ರೌಪದಿ ಮುರ್ಮು, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಜನಿಸಿದ ದೇಶದ ಮೊದಲ ರಾಷ್ಟ್ರಪತಿ ನಾನು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಭಾರತದ ಬಗ್ಗೆ ಹೊಂದಿದ್ದ ನಿರೀಕ್ಷೆಗಳನ್ನು ಪೂರೈಸಲು ನಾವು ಇನ್ನಷ್ಟು ಪ್ರಯತ್ನ ಪಡಬೇಕಾಗಿದೆ. ಈ ದೇಶದ ಜನರು ಹಲವು ದಶಕಗಳಿಂದ ಅಭಿವೃದ್ಧಿ ಕಾಣದ ಜನರು, ದಲಿತರು, ಹಿಂದುಳಿದವರು, ಗಿರಿಜನರು ನನ್ನನ್ನು ತಮ್ಮ ಪ್ರತಿಬಿಂಬವಾಗಿ ನೋಡುತ್ತಾರೆ ಎಂಬ ತೃಪ್ತಿ ನನಗಿದೆ. ನಾನು ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿದ್ದರ ಹಿಂದೆ ಬಡವರ ಆಶೀರ್ವಾದವಿದೆ. ಕೋಟಿಗಟ್ಟಲೆ ಮಹಿಳೆಯರ ಕನಸುಗಳು ಮತ್ತು ಸಾಮರ್ಥ್ಯಗಳ ಪ್ರತಿಬಿಂಬವಾಗಿ ನಾನು ಈ ಹುದ್ದೆಗೆ ಏರಿದ್ದೇನೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಹುದ್ದೆಯನ್ನು ತಲುಪಿದ್ದು ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರು ಕನಸು ಕಾಣುವುದು ಮಾತ್ರವಲ್ಲದೆ ಆ ಕನಸುಗಳನ್ನು ನನಸಾಗಿಸಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
Reaching the Presidential post is not my personal achievement, it is the achievement of every poor in India. My nomination is evidence that the poor in India can not only dream but also fulfill those dreams: President Droupadi Murmu
(Source: Sansad TV) pic.twitter.com/eYn6stmgWe
— ANI (@ANI) July 25, 2022
64 ವರ್ಷದ ದ್ರೌಪದಿ ಮುರ್ಮು ಇಂದು ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಎಸ್ ಜೈಶಂಕರ್, ಅಮಿತ್ ಶಾ ಸೇರಿದಂತೆ ಇತರರ ಸಮ್ಮುಖದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರು ದ್ರೌಪದಿ ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಇದನ್ನೂ ಓದಿ: Draupadi Murmu: ಇಂದು ಜುಲೈ 25, ಪ್ರತಿಬಾರಿ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ನಡೆಯುವುದು ಇದೇ ದಿನಾಂಕದಲ್ಲಿ, ಏಕೆ ಹೀಗೆ?
ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದೇಶವನ್ನು ಉದ್ದೇಶಿಸಿ ಮೊದಲ ಬಾರಿಗೆ ಭಾಷಣ ಮಾಡಿದ ದ್ರೌಪದಿ ಮುರ್ಮು, ದೇಶವು ಸ್ವಾತಂತ್ರ್ಯ ಪಡೆದು 75 ವರ್ಷವಾದ ಪವಿತ್ರ ಸಂದರ್ಭದಲ್ಲಿ ನಾನು ರಾಷ್ಟ್ರಪತಿಯಾಗಿ ಜವಾಬ್ದಾರಿ ಸ್ವೀಕರಿಸಿದ್ದೇನೆ. ಇದು ಐತಿಹಾಸಿಕ ಸಂದರ್ಭವಾಗಿದೆ. ದೇಶದ ಎಲ್ಲ ಜನರ ಪ್ರೀತಿಯೇ ನನ್ನ ಶಕ್ತಿಯಾಗಿದೆ ಎಂದು ಹೇಳಿದರು.
Satisfying to me that the people who were devoid of development for years -the poor, Dalits, backward, the tribals- can see me as their reflection. My nomination has blessings of the poor behind it, it’s a reflection of the dreams &capabilities of crores of women: President Murmu pic.twitter.com/b2IJ8lcLOC
— ANI (@ANI) July 25, 2022
ಪೂರ್ವ ಭಾರತದ ಒಂದು ಸಣ್ಣ ಆದಿವಾಸಿ ಹಳ್ಳಿಯಿಂದ ನನ್ನ ಬದುಕಿನ ಯಾತ್ರೆ ಆರಂಭವಾಯಿತು. ಇದು ನಮ್ಮ ಪ್ರಜಾಪ್ರಭುತ್ವದ ಶಕ್ತಿ. ಸಾಮಾನ್ಯ ಆದಿವಾಸಿ ಮಹಿಳೆ ಇಂದು ದೇಶದ ರಾಷ್ಟ್ರಪತಿ ಸ್ಥಾನಕ್ಕೆ ಬಂದಿದ್ದಾಳೆ. ಇದು ನನಗೆ ಸಿಕ್ಕಿದ್ದು ಎಂದು ನಾನು ಅಂದುಕೊಂಡಿಲ್ಲ. ಇದು ಭಾರತದ ಎಲ್ಲ ಬಡವರಿಗೆ ಸಿಕ್ಕ ಗೌರವ. ನಮ್ಮ ದೇಶದ ಬಡವರು ರಾಷ್ಟ್ರಪತಿಯಾಗುವ ಕನಸು ಕಾಣಬಹುದು, ಅದನ್ನು ನನಸು ಮಾಡಿಕೊಳ್ಳಬಹುದು ಎಂದು ಹೇಳಿದರು.
ಇದನ್ನೂ ಓದಿ: Draupadi Murmu Swearing-in LIVE: ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕಾರ
President Droupadi Murmu greets PM Narendra Modi, Union Ministers, Congress interim president Sonia Gandhi and other dignitaries who attended her swearing-in ceremony at the Central Hall of the Parliament.
(Source: Sansad TV) pic.twitter.com/5TXzE1Zmvn
— ANI (@ANI) July 25, 2022
ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ರಿಂದ ನಿಕಟಪೂರ್ವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರವರೆಗೆ ಹಲವರು ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಂವಿಧಾನಾತ್ಮಕ ಜವಾಬ್ದಾರಿಯನ್ನು ನಾನೂ ಇದೇ ರೀತಿ ನಿರ್ವಹಿಸಲು ಇಚ್ಛಿಸುತ್ತೇನೆ. ಪೂಜ್ಯ ಬಾಪು ನಮಗೆ ಸ್ವರಾಜ್ಯ, ಸ್ವಚ್ಛತೆಯ ಮಾರ್ಗ ತೋರಿಸಿದ್ದರು. ನೇತಾಜಿ, ನೆಹರು, ಚಂದ್ರಶೇಖರ್ ಆಚಾಜ್, ಭಗತ್ಸಿಂಗ್ ಸೇರಿದಂತೆ ಹಲವು ಹೋರಾಟಗಾರರು ಭಾರತದ ಸ್ವಾಭಿಮಾನ ಹೆಚ್ಚಿಸಲು ಹೋರಾಡಿದರು. ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಸೇರಿದಂತೆ ಹಲವು ವೀರ ವನಿತೆಯರು ದೇಶಕ್ಕಾಗಿ ಹೋರಾಡಿದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ನೆನಪಿಸಿಕೊಂಡರು.
Published On - 10:45 am, Mon, 25 July 22