Ram Nath Kovind: ಐಷಾರಾಮಿ ಬಂಗಲೆ, 1.5 ಲಕ್ಷ ರೂ. ಪೆನ್ಷನ್; ನಿವೃತ್ತರಾದ ರಾಷ್ಟ್ರಪತಿಗೆ ಏನೆಲ್ಲ ಸೌಲಭ್ಯ ಸಿಗುತ್ತೆ ಗೊತ್ತಾ?

ನಿವೃತ್ತರಾಗುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಹೊಸ ನಿವಾಸವು ಟೈಪ್-8 ಬಂಗಲೆಯಾಗಿದ್ದು, 7 ಕೊಠಡಿಗಳಿವೆ. ಇದರಲ್ಲಿ ಮನೆಕೆಲಸದವರಿಗೆ 1 ಪ್ರತ್ಯೇಕ ಕ್ವಾರ್ಟರ್ ಕೂಡ ಇರಲಿದೆ.

Ram Nath Kovind: ಐಷಾರಾಮಿ ಬಂಗಲೆ, 1.5 ಲಕ್ಷ ರೂ. ಪೆನ್ಷನ್; ನಿವೃತ್ತರಾದ ರಾಷ್ಟ್ರಪತಿಗೆ ಏನೆಲ್ಲ ಸೌಲಭ್ಯ ಸಿಗುತ್ತೆ ಗೊತ್ತಾ?
ರಾಮನಾಥ್ ಕೋವಿಂದ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 22, 2022 | 2:30 PM

ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ (Ram Nath Kovind) ಜುಲೈ 24ರಂದು ನಿವೃತ್ತರಾಗಲಿದ್ದಾರೆ. ಈಗಾಗಲೇ ಅವರ ಸ್ಥಾನಕ್ಕೆ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು (Droupadi Murmu) ಆಯ್ಕೆಯಾಗಿದ್ದಾರೆ. ನಿವೃತ್ತರಾಗಲಿರುವ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi)  ಔತಣಕೂಟ ನೀಡಲಿದ್ದಾರೆ. ಭಾರತ ದೇಶದ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಉಚಿತ ವೈದ್ಯಕೀಯ, ವಸತಿ ಮತ್ತು ಪ್ರಯಾಣದ ಸೌಲಭ್ಯಗಳ ಜೊತೆಗೆ ತಿಂಗಳಿಗೆ 5 ಲಕ್ಷ ರೂ. ಸಂಬಳ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಪಡೆದಿದ್ದರು. ಇವುಗಳಲ್ಲಿ ಅನೇಕ ಸವಲತ್ತುಗಳು ರಾಮನಾಥ್ ಕೋವಿಂದ್ ಅವರ ನಿವೃತ್ತಿಯ ನಂತರವೂ ಮುಂದುವರಿಯುತ್ತವೆ.

ನಿವೃತ್ತಿಯ ನಂತರ ಮಾಜಿ ರಾಷ್ಟ್ರಪತಿಗಳಿಗೆ ನೀಡಲಾಗುವ ಸೌಲಭ್ಯಗಳ ಪಟ್ಟಿ ಇಲ್ಲಿದೆ: ಬಂಗಲೆ: ನಿವೃತ್ತಿಯ ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 12 ಜನಪಥ್‌ನಲ್ಲಿ ವಾಸವಾಗಲಿದ್ದಾರೆ. ಇದು ಲುಟ್ಯೆನ್ಸ್ ದೆಹಲಿಯ ಅತಿದೊಡ್ಡ ಬಂಗಲೆಗಳಲ್ಲಿ ಒಂದಾಗಿದೆ. ಈ ಬಂಗಲೆಯು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿವಾಸವಾದ 10 ಜನಪಥ್ ಪಕ್ಕದಲ್ಲಿಯೇ ಇದೆ. ಜುಲೈ 25ರಂದು ರಾಮನಾಥ್ ಕೋವಿಂದ್ ಈ ಬಂಗಲೆಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿದೆ.

ನಿವೃತ್ತರಾಗುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಹೊಸ ನಿವಾಸವು ಟೈಪ್-8 ಬಂಗಲೆಯಾಗಿದ್ದು, 7 ಕೊಠಡಿಗಳಿವೆ. ಇದರಲ್ಲಿ ಮನೆಕೆಲಸದವರಿಗೆ 1 ಪ್ರತ್ಯೇಕ ಕ್ವಾರ್ಟರ್ ಕೂಡ ಇರಲಿದೆ. ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸಾಯುವವರೆಗೂ ಈ ಬಂಗಲೆಯಲ್ಲಿ ವಾಸಿಸುತ್ತಿದ್ದರು. ನಂತರ ಅದನ್ನು ಅವರ ಮಗ ಚಿರಾಗ್ ಪಾಸ್ವಾನ್ ಆಕ್ರಮಿಸಿಕೊಂಡಿದ್ದರು. ಆದರೆ ಕಳೆದ ಮಾರ್ಚ್ ತಿಂಗಳಲ್ಲಿ ನ್ಯಾಯಾಲಯದ ಹಸ್ತಕ್ಷೇಪದ ಬಳಿಕ ಅವರು ಆ ಬಂಗಲೆಯನ್ನು ತೆರವುಗೊಳಿಸಬೇಕಾಯಿತು. ನಂತರ ಅದನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನೀಡಲಾಯಿತು. ಆದರೆ ಅವರು ಆ ಬಂಗಲೆಗೆ ಶಿಫ್ಟ್​ ಆಗಲಿಲ್ಲ.

ಇದನ್ನೂ ಓದಿ: ರಾಷ್ಟ್ರಪತಿ ಹುದ್ದೆಯನ್ನಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು

ಪಿಂಚಣಿ: ರಾಷ್ಟ್ರಪತಿಗಳ ವೇತನ ಮತ್ತು ಪಿಂಚಣಿ (ತಿದ್ದುಪಡಿ) ಕಾಯಿದೆ, 2008ರ ಪ್ರಕಾರ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಿವೃತ್ತಿಯ ನಂತರ 1.5 ಲಕ್ಷ ರೂ. ಪೆನ್ಷನ್ ಪಡೆಯುತ್ತಾರೆ. 2008ರ ತಿದ್ದುಪಡಿಗೂ ಮುನ್ನ ಪಿಂಚಣಿ ಮೊತ್ತ 50,000 ರೂ. ಇತ್ತು. ಈಗ ಇನ್ನೂ 1 ಲಕ್ಷ ಪಿಂಚಣಿ ಮೊತ್ತವನ್ನು ಹೆಚ್ಚಿಸಲಾಗಿದೆ.

ಇತರೆ ಸೌಲಭ್ಯಗಳು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಎರಡು ಲ್ಯಾಂಡ್​​ಲೈನ್​ಗಳು, ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸಂಪರ್ಕ, ಉಚಿತ ವಿದ್ಯುತ್ ಮತ್ತು ನೀರು ಒದಗಿಸಲಾಗುವುದು. ಕಾರು ಮತ್ತು ಕಾರಿನ ಚಾಲಕನ ಸೇವೆಯನ್ನು ಅವರಿಗೆ ಒದಗಿಸಲಾಗುವುದು. ಅವರಿಗೆ ಇಬ್ಬರು ಕಾರ್ಯದರ್ಶಿಗಳು ಮತ್ತು ದೆಹಲಿ ಪೊಲೀಸರ ಭದ್ರತೆಯೂ ಸಿಗಲಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಿವೃತ್ತಿಯ ನಂತರವೂ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಾರೆ. ಅವರ ಪ್ರಯಾಣಕ್ಕಾಗಿ ಉಚಿತ ಪ್ರಥಮ ದರ್ಜೆ ರೈಲು ಟಿಕೆಟ್ ಮತ್ತು ವಿಮಾನ ಟಿಕೆಟ್ ಅನ್ನು ಸಹ ಪಡೆಯಬಹುದು.

Published On - 2:30 pm, Fri, 22 July 22

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ