ವಯಸ್ಕ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ; ಗಡ್ಡ ಕತ್ತರಿಸಿ, ಫೊನ್ ಕಸಿದುಕೊಂಡು ಬೆದರಿಕೆ

ಲೋನಿಯ ಹಿರಿಯ ಪೊಲೀಸ್ ಅಧಿಕಾರಿ ಅತುಲ್ ಕುಮಾರ್ ಸೋಂಕರ್, ತನಿಖೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. ಈಗ ಠಾಣೆಯಲ್ಲಿ ಇರುವ ಆರೋಪಿ ತನ್ನ ಹೇಳಿಕೆಗಳನ್ನು ದಾಖಲಿಸಬೇಕಿದೆ.

ವಯಸ್ಕ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ; ಗಡ್ಡ ಕತ್ತರಿಸಿ, ಫೊನ್ ಕಸಿದುಕೊಂಡು ಬೆದರಿಕೆ
ಹಲ್ಲೆಗೊಳಗಾದ ಮುಸ್ಲಿಂ ವ್ಯಕ್ತಿ

ದೆಹಲಿ: ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ತೆರಳುತ್ತಿದ್ದ ವೇಳೆ ಹಿರಿಯ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ, ಘಾಜಿಯಾಬಾದ್ ಜಿಲ್ಲೆಯ ಲೋನಿ ಎಂಬಲ್ಲಿ ಜೂನ್ 5ರಂದು ನಡೆದಿದೆ. ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ಅಬ್ದುಲ್ ಸಮದ್ ಎಂಬವರನ್ನು ಹೊರಗೆ ಎಳೆದು ಸಮೀಪದ ಕಾಡಿನಂಥ ಪ್ರದೇಶಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ ಅವರ ಮೇಲೆ ಹಲ್ಲೆ ಮಾಡಲಾಗಿದೆ.

ವಯಸ್ಕ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸುವಾಗ ದುಷ್ಕರ್ಮಿಗಳು ಜೈ ಶ್ರೀರಾಮ್ ಹಾಗೂ ವಂದೇ ಮಾತರಂ ಎಂದು ಘೋಷಣೆ ಕೂಗಿದ್ದಾರೆ ಎಂದೂ ವರದಿಯಾಗಿದೆ. ಮುಸ್ಲಿಂ ವ್ಯಕ್ತಿಗೂ ಹಾಗೇ ಘೋಷಣೆ ಕೂಗಲು ಒತ್ತಾಯಿಸಿದ್ದಾರೆ. ಬಳಿಕ, ಮರದ ಕೋಲಿನಲ್ಲಿ ಹೊಡೆದು, ಗುದ್ದಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆ ನಡೆಸಿದವರು ಅಬ್ದುಲ್ ಸಮದ್​ರನ್ನು ಪಾಕಿಸ್ತಾನದ ಗೂಢಚಾರಿ ಎಂಬ ನೆಲೆಯಲ್ಲಿಯೂ ಅನುಮಾನಿಸಿದ್ದಾರೆ ಎಂದು ಮಾಹಿತಿ ದೊರಕಿದೆ.

ಹಲ್ಲೆ ನಡೆಸಿದವರಲ್ಲಿ ಒಬ್ಬಾತ ಬಿಳಿ ಬಣ್ಣದ, ಉದ್ದ ಕೈಯ ಟೀಶರ್ಟ್ ಹಾಗೂ ನೀಲಿ ಪ್ಯಾಂಟ್ ಧರಿಸಿದ್ದ. ಅಷ್ಟೇ ಅಲ್ಲದೆ, ಆತ ಚಾಕುವಿನಿಂದ ಮುಸ್ಲಿಂ ವ್ಯಕ್ತಿಯ ಗಡ್ಡ ಕೀಳುವುದಾಗಿ ಬೆದರಿಕೆಯನ್ನೂ ಹಾಕಿ, ದುಷ್ಕೃತ್ಯ ಎಸಗಿದ್ದಾನೆ. ಹಲ್ಲೆ ನಡೆದ ವೇಳೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಅದರಲ್ಲಿ ಅಬ್ದುಲ್ ಸಮದ್ ಹಲ್ಲೆ ಮಾಡದಂತೆ ಕೇಳಿಕೊಳ್ಳುತ್ತಿರುವುದು ಕಂಡುಬಂದಿದೆ.

ವಿಡಿಯೋದಲ್ಲಿ ಇಬ್ಬರು ಇತರೆ ಯುವಕರು ಸಮದ್ ಮೇಲೆ ಹಲ್ಲೆ ಮಾಡುವುದು ಕಂಡುಬಂದಿದೆ. ಒಬ್ಬಾತ ಕಪ್ಪು ಟೀಶರ್ಟ್ ಹಾಗೂ ಕೆಂಪು ಮೇಲಂಗಿ, ಮತ್ತೊಬ್ಬ ತಿಳಿನೀಲಿ ಟೀಶರ್ಟ್ ಹಾಗೂ ಬೂದು ಬಣ್ಣದ ಪ್ಯಾಂಟ್ ಹಾಕಿರುವುದು ಕಂಡುಬಂದಿದೆ.

ನಾನು ರಿಕ್ಷಾದಲ್ಲಿ ಹೋಗುತ್ತಿರುವಾಗ ಲಿಫ್ಟ್ ಕೇಳಿದ್ದಾರೆ. ಬಳಿಕ, ಮತ್ತಿಬಬ್ರು ವ್ಯಕ್ತಿಗಳು ಜೊತೆಯಾಗಿದ್ದಾರೆ. ಬಳಿಕ, ಸಮೀಪದ ಕಡಿಮೆ ಜನವಸತಿ ಇರುವಂಥಾ ಪ್ರದೇಶದ ಕೋಣೆಯೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಹಲ್ಲೆ ಮಾಡಿದ್ದಾರೆ. ಕೆಲವು ಘೋಷಣೆಗಳನ್ನು ಕೂಗಲು ಒತ್ತಾಯಿಸಿದ್ದಾರೆ. ನನ್ನ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ. ಗಡ್ಡ ಕತ್ತರಿಸಿದ್ದಾರೆ ಎಂದು ಸಮದ್ ಘಟನೆಯನ್ನು ವಿವರಿಸಿದ್ದಾರೆ.

ದುಷ್ಕರ್ಮಿಗಳು ಮತ್ತೊಬ್ಬ ಮುಸ್ಲಿಂನ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ನನಗೆ ತೋರಿಸಿದ್ದಾರೆ. ಅಲ್ಲದೆ, ತುಂಬಾ ಜನ ಮುಸ್ಲಿಂರಿಗೆ ಹೀಗೇ ಮಾಡಿರುವುದಾಗಿ ಅವರು ಹೇಳಿದ್ದಾರೆ ಎಂದೂ ಸಮದ್ ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ, ಘಟನೆಯ ಮುಖ್ಯ ಆರೋಪಿ ಎಂದು ಕಂಡಿರುವ ಪ್ರವೇಶ್ ಗುಜ್ಜರ್​ನನ್ನು ಬಂಧಿಸಿದ್ದಾರೆ.

ಲೋನಿಯ ಹಿರಿಯ ಪೊಲೀಸ್ ಅಧಿಕಾರಿ ಅತುಲ್ ಕುಮಾರ್ ಸೋಂಕರ್, ತನಿಖೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. ಈಗ ಠಾಣೆಯಲ್ಲಿ ಇರುವ ಆರೋಪಿ ತನ್ನ ಹೇಳಿಕೆಗಳನ್ನು ದಾಖಲಿಸಬೇಕಿದೆ.

ಇದನ್ನೂ ಓದಿ: ದೇಶಕ್ಕೆ ಮಾದರಿ ಈ ಮುಸ್ಲಿಂ ವ್ಯಕ್ತಿಯ ಸೇವೆ!

ಮಹಿಳೆಯ ಅಂತ್ಯಕ್ರಿಯೆಗೆ ಬಾರದ ಕುಟುಂಬಸ್ಥರು; ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಯುವಕರು

Click on your DTH Provider to Add TV9 Kannada