ದೆಹಲಿಯ ಸೂರ್ಯ ದೇವಾಲಯದಲ್ಲಿ ಕಾಣಿಸಿಕೊಂಡ ಬೆಂಕಿ, ಅರ್ಚಕ ಸಾವು

|

Updated on: Feb 23, 2025 | 10:21 AM

ದೆಹಲಿಯ ರೋಹಿಣಿ ಪ್ರದೇಶದ ಸೂರ್ಯ ದೇವಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅರ್ಚಕರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಅಪಘಾತದಲ್ಲಿ ದೇವಸ್ಥಾನದ ಅರ್ಚಕ ಸುಟ್ಟು ಕರಕಲಾಗಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದ ಅರ್ಚಕರನ್ನು 65 ವರ್ಷದ ಪಂಡಿತ್ ಬನ್ವಾರಿ ಲಾಲ್ ಶರ್ಮಾ ಎಂದು ಗುರುತಿಸಲಾಗಿದೆ. ಬೆಂಕಿ ಹೊತ್ತಿಕೊಂಡಾಗ ಪಂಡಿತ್ ಬನ್ವಾರಿ ಲಾಲ್ ಶರ್ಮಾ ದೇವಾಲಯದೊಳಗೆ ಸಿಲುಕಿಕೊಂಡಿದ್ದರು ಬಳಿಕ ಸಾವನ್ನಪ್ಪಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಅಗ್ನಿಶಾಮಕ ದಳದ ಜೊತೆಗೆ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿತು.

ದೆಹಲಿಯ ಸೂರ್ಯ ದೇವಾಲಯದಲ್ಲಿ ಕಾಣಿಸಿಕೊಂಡ ಬೆಂಕಿ, ಅರ್ಚಕ ಸಾವು
ಬೆಂಕಿ
Image Credit source: Business Standard
Follow us on

ನವದೆಹಲಿ, ಫೆಬ್ರವರಿ 23: ದೆಹಲಿಯ ರೋಹಿಣಿ ಪ್ರದೇಶದ ಸೂರ್ಯ ದೇವಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅರ್ಚಕರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಅಪಘಾತದಲ್ಲಿ ದೇವಸ್ಥಾನದ ಅರ್ಚಕ ಸುಟ್ಟು ಕರಕಲಾಗಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದ ಅರ್ಚಕರನ್ನು 65 ವರ್ಷದ ಪಂಡಿತ್ ಬನ್ವಾರಿ ಲಾಲ್ ಶರ್ಮಾ ಎಂದು ಗುರುತಿಸಲಾಗಿದೆ.

ಬೆಂಕಿ ಹೊತ್ತಿಕೊಂಡಾಗ ಪಂಡಿತ್ ಬನ್ವಾರಿ ಲಾಲ್ ಶರ್ಮಾ ದೇವಾಲಯದೊಳಗೆ ಸಿಲುಕಿಕೊಂಡಿದ್ದರು ಬಳಿಕ ಸಾವನ್ನಪ್ಪಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಅಗ್ನಿಶಾಮಕ ದಳದ ಜೊತೆಗೆ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿತು.

ಅಗ್ನಿಶಾಮಕ ದಳದವರು ಸ್ವಲ್ಪ ಸಮಯದಲ್ಲೇ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು, ಆದರೆ ಶರ್ಮಾ ಒಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶರ್ಮಾ ಅವರನ್ನು ತಕ್ಷಣವೇ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಆರಂಭಿಕ ತನಿಖೆಯಲ್ಲಿ, ಕೋಣೆಯೊಳಗೆ ಹೀಟರ್​ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗಿದೆ.

ಮತ್ತಷ್ಟು ಓದಿ: ಕೇರಳ: ಮನೆಗೆ ಬೆಂಕಿ, ವೃದ್ಧ ದಂಪತಿ ಸಾವು, ಮಗನ ಬಂಧನ

ವರದಿಗಳ ಪ್ರಕಾರ, ಅವರಲ್ಲಿ ಯಾರೂ ಘಟನೆಯ ಬಗ್ಗೆ ಯಾವುದೇ ಅನುಮಾನಗಳನ್ನು ಎತ್ತಲಿಲ್ಲ. ಬೆಂಕಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳದ ತನಿಖೆ ನಡೆಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾವು ಎಲ್ಲಾ ಸಂಭಾವ್ಯ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ, ಆದರೆ ಇಲ್ಲಿಯವರೆಗೆ ಯಾವುದೇ ಬಾಹ್ಯ ಒಳಗೊಳ್ಳುವಿಕೆಯ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದರು. ಈ ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ