Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ: ಮನೆಗೆ ಬೆಂಕಿ, ವೃದ್ಧ ದಂಪತಿ ಸಾವು, ಮಗನ ಬಂಧನ

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ಮೃತರನ್ನು ರಾಘವನ್ (96) ಮತ್ತು ಅವರ ಪತ್ನಿ ಭಾರತಿ (86) ಎಂದು ಗುರುತಿಸಲಾಗಿದ್ದು, ಚೆನ್ನಿತಲ ಗ್ರಾಮದಲ್ಲಿ ವಾಸವಿದ್ದರು. ಮನೆಗೆ ಬೆಂಕಿ ಹಚ್ಚಿದ ಶಂಕೆ ಮೇರೆಗೆ ಅವರ ಪುತ್ರ ವಿಜಯನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ವಿಜಯನ್ ಆಸ್ತಿ ವಿಚಾರದಲ್ಲಿ ಪೋಷಕರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ

ಕೇರಳ: ಮನೆಗೆ ಬೆಂಕಿ, ವೃದ್ಧ ದಂಪತಿ ಸಾವು, ಮಗನ ಬಂಧನ
ಬೆಂಕಿImage Credit source: RSC education
Follow us
ನಯನಾ ರಾಜೀವ್
|

Updated on:Feb 01, 2025 | 3:44 PM

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ಮೃತರನ್ನು ರಾಘವನ್ (96) ಮತ್ತು ಅವರ ಪತ್ನಿ ಭಾರತಿ (86) ಎಂದು ಗುರುತಿಸಲಾಗಿದ್ದು, ಚೆನ್ನಿತಲ ಗ್ರಾಮದಲ್ಲಿ ವಾಸವಿದ್ದರು.

ಮನೆಗೆ ಬೆಂಕಿ ಹಚ್ಚಿದ ಶಂಕೆ ಮೇರೆಗೆ ಅವರ ಪುತ್ರ ವಿಜಯನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ವಿಜಯನ್ ಆಸ್ತಿ ವಿಚಾರದಲ್ಲಿ ಪೋಷಕರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ಬೆಳಗಿನ ಜಾವ 3.30ರ ಸುಮಾರಿಗೆ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಚಾಲಕ ಗಮನಿಸಿದ್ದಾನೆ. ಕೂಡಲೇ ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳು, ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ಕೂಡಲೇ ಬೆಂಕಿ ನಂದಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ದಂಪತಿಯ ಸುಟ್ಟು ಕರಕಲಾದ ದೇಹಗಳು ಪತ್ತೆಯಾಗಿವೆ. ಮನ್ನಾರ್ ಪೊಲೀಸರು ವಿಜಯನ್ ಅವರನ್ನು ಸಮೀಪದ ಪ್ಲಾಟ್‌ನಿಂದ ಬಂಧಿಸಿದ್ದು, ಬೆಂಕಿಯ ಕಾರಣವನ್ನು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ಯಾದಗಿರಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯನ್ನೇ ಹತ್ಯೆಗೈದ ಪತ್ನಿ

ತನಿಖೆಯ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಆ ಸಮಯದಲ್ಲಿ ಮಗ ಮನೆಯಲ್ಲಿಲ್ಲದೆ ಯಾವುದೋ ಫ್ಲಾಟ್​ನಲ್ಲಿದ್ದುದು ಮತ್ತಷ್ಟು ಅನುಮಾನವನ್ನು ಹುಟ್ಟುಹಾಕಿದೆ. ಬೆಂಕಿ ಹೇಗೆ ಹೊತ್ತಿಕೊಂಡಿತ್ತು ಎಂಬುದರ ಕುರಿತು ಸಮರ್ಪಕ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:43 pm, Sat, 1 February 25

ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ
ಸತ್ತ ನಾಲ್ವರಲ್ಲಿ ಒಬ್ಬ 15-ವರ್ಷ ವಯಸ್ಸಿನ ಅಪ್ರಾಪ್ತ, ಸಾಲವೇ ಸಾವಿಗೆ ಕಾರಣ?
ಸತ್ತ ನಾಲ್ವರಲ್ಲಿ ಒಬ್ಬ 15-ವರ್ಷ ವಯಸ್ಸಿನ ಅಪ್ರಾಪ್ತ, ಸಾಲವೇ ಸಾವಿಗೆ ಕಾರಣ?
Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ
Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ
ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!
ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!