AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jammu-Kashmir: ವೈಷ್ಣೋದೇವಿಯಿಂದ ಹಿಂದಿರುಗುವಾಗ ಕಂದಕಕ್ಕೆ ಉರುಳಿದ ಬಸ್, ಚಾಲಕ ಸಾವು, 17 ಮಂದಿಗೆ ಗಂಭೀರ ಗಾಯ

ಜಮ್ಮು-ಕಾಶ್ಮೀರದ ಮಾಂದಾದಲ್ಲಿರುವ ಮಾತಾ ವೈಷ್ಣೋದೇವಿ ಮಂದಿರದಿಂದ ಹಿಂದಿರುಗುವಾಗ ಯಾತ್ರಿಕರಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿದ್ದು, 17 ಯಾತ್ರಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಬಸ್ ದೆಹಲಿಗೆ ಹಿಂತಿರುಗುತ್ತಿತ್ತು.

Jammu-Kashmir: ವೈಷ್ಣೋದೇವಿಯಿಂದ ಹಿಂದಿರುಗುವಾಗ ಕಂದಕಕ್ಕೆ ಉರುಳಿದ ಬಸ್, ಚಾಲಕ ಸಾವು, 17 ಮಂದಿಗೆ ಗಂಭೀರ ಗಾಯ
ಬಸ್ Image Credit source: PTI
ನಯನಾ ರಾಜೀವ್
|

Updated on: Feb 23, 2025 | 9:01 AM

Share

ಶ್ರೀನಗರ, ಫೆಬ್ರವರಿ 23: ಜಮ್ಮು-ಕಾಶ್ಮೀರದ ಮಾಂದಾದಲ್ಲಿರುವ ಮಾತಾ ವೈಷ್ಣೋದೇವಿ ಮಂದಿರದಿಂದ ಹಿಂದಿರುಗುವಾಗ ಯಾತ್ರಿಕರಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿದ್ದು, 17 ಯಾತ್ರಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಬಸ್ ದೆಹಲಿಗೆ ಹಿಂತಿರುಗುತ್ತಿತ್ತು. ಗಾಯಗೊಂಡವರಲ್ಲಿ 7 ಮಹಿಳೆಯರು ಮತ್ತು 10 ಪುರುಷರು ಸೇರಿದ್ದು, ಅಂಜಲಿ (58), ನಿತೇಶ್ (35), ಸುಧೀರ್ ಮಹೇಶ್ವರಿ (65), ಸುಭಾಷ್ (55), ವೃಂದಾ (24), ಶುರ್ತಿ (25), ಧುರುವ್ (18), ಪ್ರಾಚಿ ಶರ್ಮಾ (24), ವಿನೋದ್ ಕುಮಾರ್ (32), ಕಾರ್ತಿಕಯ್ ತ್ರಿಪಾಠಿ (28), ಕಲ್ಯಾಣಿ ಶರ್ಮಾ (25), ಕಲ್ಯಾಣಿ ಶರ್ಮಾ (25), ಕಲ್ಯಾಣಿ ಶರ್ಮಾ (25), ಸಂಧ್ಯಾ (50), ಅಕ್ಷಯ್ (29), ಆತಿಶ್ (24) ಮತ್ತು ಆಕಾಂಶಾ (27) ಎಂದು ಗುರುತಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಕತ್ರಾದಿಂದ ದೆಹಲಿಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತದಿಂದ ದುಃಖವಾಗಿದೆ. ಪ್ರಾಣ ಕಳೆದುಕೊಂಡ ಚಾಲಕನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ. ಅದೃಷ್ಟವಶಾತ್, ಎಲ್ಲಾ ಗಾಯಗೊಂಡ ಪ್ರಯಾಣಿಕರು ಸ್ಥಿರವಾಗಿದ್ದು, ವೈದ್ಯಕೀಯ ಆರೈಕೆ ಪಡೆಯುತ್ತಿದ್ದಾರೆ. ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಅಪಘಾತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ. ಗಾಯಗೊಂಡ ಯಾತ್ರಾರ್ಥಿಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ