AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದು ಹಂತಗಳ ಮತದಾನ; ಸಂಪೂರ್ಣ ಮತದಾರರ ಸಂಖ್ಯೆ ಬಿಡುಗಡೆ ಮಾಡಿದ ಚುನಾವಣಾ ಆಯೋಗ

ಲೋಕಸಭಾ ಚುನಾವಣೆಯ ಸಮಯದಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ಮತಗಟ್ಟೆವಾರು ಮತದಾರರ ಅಂಕಿಅಂಶಗಳನ್ನು ಅಪ್‌ಲೋಡ್ ಮಾಡಲು ಎನ್‌ಜಿಒ ಮಾಡಿದ ಮನವಿಯ ಮೇಲೆ ಚುನಾವಣಾ ಸಂಸ್ಥೆಗೆ ನಿರ್ದೇಶನಗಳನ್ನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಒಂದು ದಿನದ ನಂತರ ಇಸಿಐ ಸಂಪೂರ್ಣ ಮತದಾನದ ಸಂಖ್ಯೆಯನ್ನು ಬಿಡುಗಡೆ ಮಾಡಿದೆ .

ಐದು ಹಂತಗಳ ಮತದಾನ; ಸಂಪೂರ್ಣ ಮತದಾರರ ಸಂಖ್ಯೆ ಬಿಡುಗಡೆ ಮಾಡಿದ ಚುನಾವಣಾ ಆಯೋಗ
ಚುನಾವಣಾ ಆಯೋಗ
ರಶ್ಮಿ ಕಲ್ಲಕಟ್ಟ
|

Updated on:May 25, 2024 | 6:56 PM

Share

ದೆಹಲಿ ಮೇ 25: ಭಾರತ ಚುನಾವಣಾ ಆಯೋಗ (ECI) ಇದೀಗ ನಡೆಯುತ್ತಿರುವ ಲೋಕಸಭೆ ಚುನಾವಣೆಯ (Lok Sabha Election) ಮೊದಲ ಐದು ಹಂತಗಳ ಮತದಾನ ನಂತರ ಸಂಪೂರ್ಣ ಮತದಾರರ ಸಂಖ್ಯೆಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಮತದಾನದ ಡೇಟಾವನ್ನು ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ಪಡೆಯಬಹುದು ಎಂದು ಹೇಳಿದೆ. “ಸುಳ್ಳು ನಿರೂಪಣೆಗಳ ಮಾದರಿ ಮತ್ತು ಚುನಾವಣಾ ಪ್ರಕ್ರಿಯೆಯನ್ನು ವಿನಾಶಗೊಳಿಸುವ ಚೇಷ್ಟೆಯ ಕಾರ್ಯ ಎಂಬ ಆರೋಪವನ್ನು ತಳ್ಳಿ ಹಾಕಿದ ಚುನಾವಣಾ ಆಯೋಗ ಪ್ರತಿ ಹಂತದ ಮತದಾನದ ದಿನದ ಬೆಳಿಗ್ಗೆ 9:30 ರಿಂದ ಮತದಾರರ ಮತದಾನದ ಡೇಟಾವನ್ನು ಯಾವಾಗಲೂ ತನ್ನ ಅಪ್ಲಿಕೇಶನ್ ಮೂಲಕ ತ್ವರಿತವಾಗಿ ಲಭ್ಯವಿರುತ್ತದೆ ಎಂದು ಸಮರ್ಥಿಸಿಕೊಂಡಿದೆ.

ಲೋಕಸಭಾ ಚುನಾವಣೆಯ ಸಮಯದಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ಮತಗಟ್ಟೆವಾರು ಮತದಾರರ ಅಂಕಿಅಂಶಗಳನ್ನು ಅಪ್‌ಲೋಡ್ ಮಾಡಲು ಎನ್‌ಜಿಒ ಮಾಡಿದ ಮನವಿಯ ಮೇಲೆ ಚುನಾವಣಾ ಸಂಸ್ಥೆಗೆ ನಿರ್ದೇಶನಗಳನ್ನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಒಂದು ದಿನದ ನಂತರ ಇಸಿಐ ಸಂಪೂರ್ಣ ಮತದಾನದ ಸಂಖ್ಯೆಯನ್ನು ಬಿಡುಗಡೆ ಮಾಡಿದೆ .

ಚುನಾವಣಾ ಸಮಿತಿಯು ಎನ್‌ಜಿಒದ ಬೇಡಿಕೆಯನ್ನು ವಿರೋಧಿಸಿದ್ದು, ಇದು ಚುನಾವಣಾ ರೀತಿಗೆ”ಹಾನಿ” ಮಾಡುತ್ತದೆ ಮತ್ತು ಸಾರ್ವತ್ರಿಕ ಚುನಾವಣೆಗಳ ಮಧ್ಯೆ ಚುನಾವಣಾ ಪ್ರಕ್ರಿಯೆಯಲ್ಲಿ “ಅವ್ಯವಸ್ಥೆ” ಉಂಟುಮಾಡುತ್ತದೆ ಎಂದು ವಾದಿಸಿತ್ತು.

ಭಾರತೀಯ ಚುನಾವಣಾ ಆಯೋಗವು ಮತದಾನದ ಅಂಕಿಅಂಶಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯ ಕುರಿತಾದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಅವಲೋಕನಗಳು ಮತ್ತು ತೀರ್ಪಿನ್ನು ಆಯೋಗವು ಸ್ವಾಗತಿಸಿದೆ ಎಂದು ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ. ತಾವು ಸ್ವೀಕರಿಸಿರುವ ಕಠಿಣ, ಪಾರದರ್ಶಕ ಮತ್ತು ಭಾಗವಹಿಸುವ ಪ್ರಕ್ರಿಯೆಯಿಂದಾಗಿ ಮತದಾನದ ಸಂಖ್ಯೆಯ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಒತ್ತಿಹೇಳಿದೆ.

ಎಲ್ಲಾ ಅಭ್ಯರ್ಥಿಗಳ ಅಧಿಕೃತ ಏಜೆಂಟರು ಫಾರ್ಮ್ 17C ಅನ್ನು ಹೊಂದಿದ್ದಾರೆ. ಇದು 543 ಸಂಸತ್ತಿನ ಕ್ಷೇತ್ರಗಳಾದ್ಯಂತ ಸುಮಾರು 10.5 ಲಕ್ಷ ಮತಗಟ್ಟೆಗಳಲ್ಲಿ ಪ್ರತಿಯೊಂದಕ್ಕೂ ಒಟ್ಟು ಮತದಾನವಾದ ಮತಗಳ ಸಂಖ್ಯೆಯನ್ನು ದಾಖಲಿಸುತ್ತದೆ. ನಮೂನೆ 17C ಯಲ್ಲಿ ದಾಖಲಾದ ಒಟ್ಟು ಮತಗಳ ಸಂಖ್ಯೆಯನ್ನು ಬದಲಾಯಿಸಲಾಗುವುದಿಲ್ಲ ಎಂದ ಆಯೋಗವು ಎಲ್ಲಾ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಇದು ಲಭ್ಯವಿರುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯವರ ಮುಜ್ರಾ ಹೇಳಿಕೆ ವಿವಾದ; ವಿಪಕ್ಷ ಕಿಡಿ

ಚುನಾವಣಾ ನಿಯಮಗಳು 1961 ರ ನಿಯಮ 49 ವಿ (2) ರ ಪ್ರಕಾರ ಚುನಾವಣಾ ಕೇಂದ್ರದಿಂದ ಸ್ಟ್ರಾಂಗ್ ರೂಮ್‌ನಲ್ಲಿ ಸಂಗ್ರಹಿಸುವವರೆಗೆ ಫಾರ್ಮ್ 17 ಸಿ ಸೇರಿದಂತೆ ಫಾರ್ಮ್ 17 ಸಿ ಸೇರಿದಂತೆ ಅಭ್ಯರ್ಥಿಗಳ ಏಜೆಂಟ್‌ಗಳಿಗೆ ಯಾವಾಗಲೂ ಇವಿಎಂ ಮತ್ತು ಶಾಸನಬದ್ಧ ಪೇಪರ್‌ಗಳೊಂದಿಗೆ ಹೋಗಲು ಅನುಮತಿಸಲಾಗಿದೆ” ಎಂದು ಇಸಿಐ ಗಮನಿಸಿದೆ. “ಅಭ್ಯರ್ಥಿ ಅಥವಾ ಅವರ ಏಜೆಂಟರು ಫಾರ್ಮ್ 17C ನ ಪ್ರತಿಯನ್ನು ಎಣಿಕೆ ಕೇಂದ್ರಕ್ಕೆ ತರುತ್ತಾರೆ ಮತ್ತು ಪ್ರತಿ ಸುತ್ತಿನ ಫಲಿತಾಂಶದೊಂದಿಗೆ ಹೋಲಿಕೆ ಮಾಡುತ್ತಾರೆ” ಎಂದು ಅದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Sat, 25 May 24

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ