AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ: ನದಿ ನೀರಲ್ಲಿ ಸಿಲುಕಿದ ಆನೆಯನ್ನು ರಕ್ಷಿಸುವ ವೇಳೆ ಪತ್ರಕರ್ತ ಸಾವು, ರಕ್ಷಣಾ ಸಿಬ್ಬಂದಿ ನಾಪತ್ತೆ

Elephant: ಅರಣ್ಯ ಅಧಿಕಾರಿಗಳ ಪ್ರಕಾರ ಈ ಆನೆ,17 ಆನೆಗಳ ಹಿಂಡಿನ ಒಂದು ಭಾಗವಾಗಿದ್ದು ಗುರುವಾರ ತಡರಾತ್ರಿ ಮಹಾನದಿ ನದಿಯನ್ನು ಚಂಡಕ ಕಡೆಯಿಂದ ಬಂಕಿಗೆ ದಾಟಲು ಪ್ರಯತ್ನಿಸುತ್ತಿತ್ತು. ನೀರಿನ ಪ್ರವಾಹದಿಂದಾಗಿ ಸುಮಾರು 10 ಆನೆಗಳು ಸಿಲುಕಿಕೊಂಡಿದ್ದವು.

ಒಡಿಶಾ: ನದಿ ನೀರಲ್ಲಿ ಸಿಲುಕಿದ ಆನೆಯನ್ನು ರಕ್ಷಿಸುವ ವೇಳೆ ಪತ್ರಕರ್ತ ಸಾವು, ರಕ್ಷಣಾ ಸಿಬ್ಬಂದಿ ನಾಪತ್ತೆ
ಆನೆ (ಸಂಗ್ರಹ ಚಿತ್ರ)
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 24, 2021 | 5:56 PM

Share

ಭುವನೇಶ್ವರ್: ಕಟಕ್ ಜಿಲ್ಲೆಯ ಮುಂಡಾಲಿ ಸೇತುವೆಯ ಬಳಿ ಮಹಾನದಿ ನದಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದ  ಆನೆಯನ್ನು ರಕ್ಷಿಸಲು ಜನರ ತಂಡ ಪ್ರಯತ್ನಿಸಿದ್ದು, ಈ ವೇಳೆ ಸ್ಥಳೀಯ ಸುದ್ದಿ ವಾಹಿನಿಯ ಪತ್ರಕರ್ತ ಸಾವಿಗೀಡಾಗಿದ್ದು, ರಕ್ಷಣಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಸಿಲುಕಿಕೊಂಡಿರುವ ಆನೆಗೆ ಸಹಾಯ ಮಾಡಲು ನದಿಗಿಳಿದ ರಕ್ಷಣಾ ತಂಡದ ದೋಣಿ, ನದಿಯಲ್ಲಿ ಭಾರೀ ಹರಿವಿನಿಂದಾಗಿ ಮಗಚಿದೆ. ಒಡಿಶಾದ ಎರಡು ವಿಭಾಗಗಳ 80 ಅರಣ್ಯ ಅಧಿಕಾರಿಗಳು ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾ ಪಡೆ (ODRAF) ನ ಸದಸ್ಯರು ಆನೆಯನ್ನು ರಕ್ಷಿಸಲು ಕಾರ್ಯಾಚರಣೆಯನ್ನು ಆರಂಭಿಸಿದ ನಂತರ ಈ ಘಟನೆ ನಡೆದಿದೆ ಎಂದು ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.

ಒಡಿಆರ್‌ಎಎಫ್ ಸಿಬ್ಬಂದಿ ನಾಪತ್ತೆಯಾಗಿದ್ದೂ ಇನ್ನೂ ಪತ್ತೆಯಾಗಿಲ್ಲ. ದೋಣಿಯಲ್ಲಿ ತಂಡದ ಜೊತೆಗಿದ್ದ ಪ್ರಾದೇಶಿಕ ಸುದ್ದಿ ವಾಹಿನಿಯ ವರದಿಗಾರ ಅರಿಂದಮ್ ದಾಸ್ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಆತನ ಸಹೋದ್ಯೋಗಿ ಪ್ರಭಾತ್ ಸಿನ್ಹಾ, ವಿಡಿಯೋ ಪತ್ರಕರ್ತ ಆಸ್ಪತ್ರೆಗೆ ದಾಖಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ದಾಸ್ ಅವರು ಪತ್ನಿ ಮತ್ತು ಎರಡು ವರ್ಷದ ಮಗನನ್ನು ಅಗಲಿದ್ದಾರೆ.

ಅರಣ್ಯ ಅಧಿಕಾರಿಗಳ ಪ್ರಕಾರ ಈ ಆನೆ,17 ಆನೆಗಳ ಹಿಂಡಿನ ಒಂದು ಭಾಗವಾಗಿದ್ದು ಗುರುವಾರ ತಡರಾತ್ರಿ ಮಹಾನದಿ ನದಿಯನ್ನು ಚಂಡಕ ಕಡೆಯಿಂದ ಬಂಕಿಗೆ ದಾಟಲು ಪ್ರಯತ್ನಿಸುತ್ತಿತ್ತು. ನೀರಿನ ಪ್ರವಾಹದಿಂದಾಗಿ ಸುಮಾರು 10 ಆನೆಗಳು ಸಿಲುಕಿಕೊಂಡಿದ್ದವು. ಸ್ಥಳೀಯರ ಪ್ರಕಾರ, ಶುಕ್ರವಾರ ಬೆಳಗ್ಗೆ ನದಿಯಲ್ಲಿ ಮೂರು ಆನೆಗಳಿದ್ದವು. ಅದರಲ್ಲಿ ಎರಡು ಆನೆಗಳು ಹೇಗೋ ಹೆಣಗಾಡಿ ನದಿ ದಾಟಿದವು. ಆದರೆ ಈ ಒಂಟಿ ಆನೆಸೇತುವೆಯ ಹತ್ತಿರ ಸಿಲುಕಿಕೊಂಡಿತ್ತು. ಆನೆಯು ಆರು ಗಂಟೆಗಳಿಗೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಸಿಲುಕಿಕೊಂಡಿದೆ ಮತ್ತು ನದಿ ತೀರವನ್ನು ತಲುಪಲು 20 ಮೀಟರ್ ದೂರವನ್ನು ಕ್ರಮಿಸಬೇಕಿದೆ.

ಇತರ ಆನೆಗಳು ಸುರಕ್ಷಿತವಾಗಿ ನದಿಯನ್ನು ದಾಟಿದವು ಆದರೆ ಈ ಒಂದು ಆನೆ ಇನ್ನೂ ಸಿಲುಕಿಕೊಂಡಿದೆ. ಆನೆ ದಣಿದಿದೆ, ಅಲ್ಲಿ ನೀರಿನ ಹರಿವು ತುಂಬಾ ಜೋರಾಗಿಯೇ ಇದೆ. ಆನೆಗಳು ಇಲ್ಲದಿದ್ದರೆ ಉತ್ತಮ ಈಜುಗಾರರು. ಒಡಿಆರ್‌ಎಎಫ್ ಅಗ್ನಿಶಾಮಕ ಇಲಾಖೆ ಮತ್ತು ಅರಣ್ಯ ಇಲಾಖೆಯ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ಒತ್ತಾಯಿಸಲಾಗಿದೆ ಎಂದು ಚಂದಕ ವಿಭಾಗದ ಅರಣ್ಯ ಸಹಾಯಕ ಸಂಗ್ರಾಮ್ ಮೊಹಂತಿ ಹೇಳಿದರು.

” ಆನೆ ನೀರಿನಲ್ಲಿ ಕೊಚ್ಚಿ ಹೋಗದಂತೆ ಅದರ ಸುತ್ತಲೂ ಬಲೆ ಹಾಕಿದ್ದೆವು. ಸ್ವಲ್ಪ ಸುಧಾರಿಸಿಕೊಂಡ ನಂತರರ, ಆನೆಯು ತನ್ನಷ್ಟಕ್ಕೆ ನಡೆದು ನದಿ ದಾಟಲು ಪ್ರಯತ್ನಿಸಿತು. ಅದಕ್ಕೆ ತಿನ್ನುವುದಕ್ಕಾಗಿ ನಾವು ಮರದ ಕೊಂಬೆಗಳನ್ನು ಎಸೆಯುತ್ತಿದ್ದೆವು “ಎಂದು ಮೊಹಾಂತಿ ಹೇಳಿದರು.

ಹಿರಾಕುಡ್ ಅಣೆಕಟ್ಟಿನಿಂದ ನಿರಂತರ ಮಳೆ ಮತ್ತು ನೀರನ್ನು ಬಿಡುಗಡೆ ಮಾಡಿದ ನಂತರ, ಮಹಾನದಿ ನದಿ ಉಕ್ಕಿ ಹರಿಯುತ್ತಿದೆ.

ಇದನ್ನೂ ಓದಿ: ಮಕ್ಕಳನ್ನು ರೇಪ್ ಮಾಡುವ ಅರ್ಚಕ ದೇವರಿಗೆ ಸಮರ್ಪಿಸಿದ್ದನ್ನು ಯಾವ ದೇವರು ಸ್ವೀಕರಿಸುತ್ತಾರೆ?: ಕೇರಳ ಹೈಕೋರ್ಟ್

ಇದನ್ನೂ ಓದಿ: ಕುಳಿತುಕೊಳ್ಳುವ ಹಕ್ಕುಗಳಿಗಾಗಿ ದನಿಯೆತ್ತಿದ ಕೇರಳ, ತಮಿಳುನಾಡಿನ ಕಾರ್ಮಿಕರು; ಏನಿದು ಕುಳಿತುಕೊಳ್ಳುವ ಹಕ್ಕು?

(Elephant rescue attempt which stuck in middle of Mahanadi river Odisha A journalist dies rescue personnel goes missing)