AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶ: ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲಾ’ ಸಾವು

ಏಷ್ಯಾದ ಅತ್ಯಂತ ಹಿರಿಯ ಆನೆ ವತ್ಸಲಾ ಮಂಗಳವಾರ ಮಧ್ಯಾಹ್ನ ಸಾವನ್ನಪ್ಪಿದೆ. ಮಧ್ಯಪ್ರದೇಶದ ಪನ್ನಾ ಹುಲಿ ಅಭಯಾರಣ್ಯದ ಹಿನೌಟಾ ಶ್ರೇಣಿಯಲ್ಲಿರುವ ಆನೆ ಶಿಬಿರದಲ್ಲಿ ಅದು ಕೊನೆಯುಸಿರೆಳೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ವತ್ಸಲಾ 100 ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿದ್ದು, ದೀರ್ಘಕಾಲದವರೆಗೆ ಪನ್ನಾ ಕಾಡಿನಲ್ಲಿಯೇ ವಾಸವಿತ್ತು. ಇತ್ತೀಚಿನ ದಿನಗಳಲ್ಲಿ, ವತ್ಸಲಾಳ ಮುಂಭಾಗದ ಕಾಲ್ಬೆರಳ ಉಗುರುಗಳು ಗಾಯಗೊಂಡಿದ್ದವು.

ನಯನಾ ರಾಜೀವ್
|

Updated on: Jul 09, 2025 | 8:10 AM

Share

ಭೋಪಾಲ್, ಜುಲೈ 09: ಏಷ್ಯಾದ ಅತ್ಯಂತ ಹಿರಿಯ ಆನೆ ವತ್ಸಲಾ ಮಂಗಳವಾರ ಮಧ್ಯಾಹ್ನ ಸಾವನ್ನಪ್ಪಿದೆ. ಮಧ್ಯಪ್ರದೇಶದ ಪನ್ನಾ ಹುಲಿ ಅಭಯಾರಣ್ಯದ ಹಿನೌಟಾ ಶ್ರೇಣಿಯಲ್ಲಿರುವ ಆನೆ ಶಿಬಿರದಲ್ಲಿ ಅದು ಕೊನೆಯುಸಿರೆಳೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ವತ್ಸಲಾ 100 ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿದ್ದು, ದೀರ್ಘಕಾಲದವರೆಗೆ ಪನ್ನಾ ಕಾಡಿನಲ್ಲಿಯೇ ವಾಸವಿತ್ತು.

ಇತ್ತೀಚಿನ ದಿನಗಳಲ್ಲಿ, ವತ್ಸಲಾಳ ಮುಂಭಾಗದ ಕಾಲ್ಬೆರಳ ಉಗುರುಗಳು ಗಾಯಗೊಂಡಿದ್ದವು. ಹಿನೌಟಾ ಪ್ರದೇಶದ ಖೈರೈಯಾನ್ ನಾಲಾ ಬಳಿ ಮಲಗಿತ್ತು. ಎಷ್ಟೇ ಪ್ರಯತ್ನ ಮಾಡಿದರೂ ಎದ್ದೇಳಲು ಸಾಧ್ಯವಾಗಿಲ್ಲ. ಮಧ್ಯಾಹ್ನ 1.30 ರ ಸುಮಾರಿಗೆ ಮೃತಪಟ್ಟಿದೆ.

ಕೇರಳದಿಂದ ಮಧ್ಯಪ್ರದೇಶಕ್ಕೆ ತರಲಾಗಿತ್ತು 1971ರಲ್ಲಿ ಕೇರಳದ ನೀಲಂಬೂರು ಕಾಡಿನಿಂದ ವತ್ಸಲಾಳನ್ನು ಮಧ್ಯಪ್ರದೇಶಕ್ಕೆ ಕರೆತರಲಾಗಿತ್ತು. ಮೊದಲು ಅವಳನ್ನು ನರ್ಮದಾಪುರಂನಲ್ಲಿ ಇರಿಸಲಾಯಿತು ಮತ್ತು ನಂತರ ಪನ್ನಾ ಹುಲಿ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಯಿತು. ಖೈರೈಯಾನ್ ನಾಲಾದಲ್ಲಿ ಪ್ರತಿದಿನ ಅವಳಿಗೆ ಸ್ನಾನ ಮಾಡಿಸಿ ಗಂಜಿ ಮುಂತಾದ ಮೃದುವಾದ ಆಹಾರವನ್ನು ನೀಡಲಾಗುತ್ತಿತ್ತು. ವಯಸ್ಸಾಗಿದ್ದ ಕಾರಣ ತುಂಬಾ ದೂರ ನಡೆಯಲು ಸಾಧ್ಯವಾಗುತ್ತಿರಲಿಲ್ಲ.

ವತ್ಸಲಾವನ್ನು ಏಷ್ಯಾದ ಅತ್ಯಂತ ಹಿರಿಯ ಆನೆ ಎಂದು ಪರಿಗಣಿಸಲಾಗಿತ್ತು. ಆಕೆಯ ಅಂತ್ಯಕ್ರಿಯೆಯನ್ನು ಪನ್ನಾ ಹುಲಿ ಅಭಯಾರಣ್ಯದ ಅಧಿಕಾರಿಗಳು ಮತ್ತು ಸಿಬ್ಬಂದಿ ನೆರವೇರಿಸಿದರು. ವರ್ಷಗಳ ಕಾಲ, ವತ್ಸಲಾ ಪ್ರವಾಸಿ ಆಕರ್ಷಣೆಯಾಗಿತ್ತು ಮತ್ತು ಅತ್ಯಂತ ಹಿರಿಯಳಾಗಿದ್ದರಿಂದ, ಅವಳು ಅಭಯಾರಣ್ಯದಲ್ಲಿರುವ ಸಂಪೂರ್ಣ ಆನೆಗಳ ಗುಂಪನ್ನು ಮುನ್ನಡೆಸುತ್ತಿದ್ದಳು ಎಂದು ಹೇಳಿಕೆ ತಿಳಿಸಿದೆ.

ಆನೆಗೆ ಹೆಚ್ಚು ವಯಸ್ಸಾಗಿದ್ದರಿಂದ ದೃಷ್ಟಿ ಕಳೆದುಕೊಂಡಿತ್ತು. ಪನ್ನಾ ಜಿಲ್ಲೆಯ ಹುಲಿ ಅಭಯಾರಣ್ಯದಲ್ಲಿ ಪಶುವೈದ್ಯರು ಮತ್ತು ವನ್ಯಜೀವಿ ತಜ್ಞರು ವತ್ಸಲಾಳ ಆರೋಗ್ಯವನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದರು. ಸರಿಯಾದ ಆರೈಕೆಯಿಂದಾಗಿ, ಅಭಯಾರಣ್ಯದ ವಿರಳ ಮತ್ತು ಒಣ ಅರಣ್ಯ ಪ್ರದೇಶದಲ್ಲಿ ವತ್ಸಲಾ ದೀರ್ಘಕಾಲ ಬದುಕಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಜಸ್ಥಾನದ ಕೆಮಿಕಲ್ ಫ್ಯಾಕ್ಟರಿಯಲ್ಲಿ ನಡೆದ ಸ್ಫೋಟದ ಹೊಸ ವಿಡಿಯೋ ವೈರಲ್
ರಾಜಸ್ಥಾನದ ಕೆಮಿಕಲ್ ಫ್ಯಾಕ್ಟರಿಯಲ್ಲಿ ನಡೆದ ಸ್ಫೋಟದ ಹೊಸ ವಿಡಿಯೋ ವೈರಲ್
ದಾರಿ ಬಿಡುವ ವಿಚಾರಕ್ಕೆ ಬಸ್- ಆಟೋ ಚಾಲಕ ಹೊಡೆದಾಟ, ವಿಡಿಯೋ ನೋಡಿ
ದಾರಿ ಬಿಡುವ ವಿಚಾರಕ್ಕೆ ಬಸ್- ಆಟೋ ಚಾಲಕ ಹೊಡೆದಾಟ, ವಿಡಿಯೋ ನೋಡಿ
ನಾಳೆ ವರ್ಷದ ಮೊದಲ ಸೂರ್ಯಗ್ರಹಣ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ?
ನಾಳೆ ವರ್ಷದ ಮೊದಲ ಸೂರ್ಯಗ್ರಹಣ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ?
‘ಬಿಲ್ಲ ರಂಗ ಬಾಷ’ ತಡ ಆಗ್ತಿರೋದಕ್ಕೆ ರಿಯಲ್ ಕಾರಣ ತಿಳಿಸಿದ ಕಿಚ್ಚ ಸುದೀಪ್
‘ಬಿಲ್ಲ ರಂಗ ಬಾಷ’ ತಡ ಆಗ್ತಿರೋದಕ್ಕೆ ರಿಯಲ್ ಕಾರಣ ತಿಳಿಸಿದ ಕಿಚ್ಚ ಸುದೀಪ್
ಜೈಲಿನಲ್ಲಿ ದರ್ಶನ್ ನೋಡಿ ಖುಷಿಯಿಂದ ವಾಪಸ್ ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ನೋಡಿ ಖುಷಿಯಿಂದ ವಾಪಸ್ ಹೊರಟ ವಿಜಯಲಕ್ಷ್ಮಿ
ಮಗಳ ಮದುವೆ ಸಾಲ ತೀರಿಸೋಕೆ ದುಡಿಯುತ್ತಿದ್ದ ಅಪ್ಪ-ಮಗ ಒಟ್ಟಿಗೆ ಸಾವು
ಮಗಳ ಮದುವೆ ಸಾಲ ತೀರಿಸೋಕೆ ದುಡಿಯುತ್ತಿದ್ದ ಅಪ್ಪ-ಮಗ ಒಟ್ಟಿಗೆ ಸಾವು
ಸಚಿವ ಸ್ಥಾನಕ್ಕೆ ರಾಜೀನಾಮೆ: ಸ್ಪಷ್ಟನೆ ಕೊಟ್ಟ SS ಮಲ್ಲಿಕಾರ್ಜುನ್
ಸಚಿವ ಸ್ಥಾನಕ್ಕೆ ರಾಜೀನಾಮೆ: ಸ್ಪಷ್ಟನೆ ಕೊಟ್ಟ SS ಮಲ್ಲಿಕಾರ್ಜುನ್
ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ
ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ
ಜೈಲಿನಲ್ಲೇ ದರ್ಶನ್ ಹುಟ್ಟುಹಬ್ಬ: ವಿಶ್ ಮಾಡಲು ಬಂದ ವಿಜಯಲಕ್ಷ್ಮಿ, ಧನ್ವೀರ್
ಜೈಲಿನಲ್ಲೇ ದರ್ಶನ್ ಹುಟ್ಟುಹಬ್ಬ: ವಿಶ್ ಮಾಡಲು ಬಂದ ವಿಜಯಲಕ್ಷ್ಮಿ, ಧನ್ವೀರ್
ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು