2025 ರ ವೇಳೆಗೆ ದೇಶಾದ್ಯಂತ 20% ಎಥೆನಾಲ್ ಮಿಶ್ರಿತ ಪೆಟ್ರೋಲ್, E20 ಲಭ್ಯವಾಗಲಿದೆ -ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

20 ಪ್ರತಿಶತ ಎಥೆನಾಲ್ ಮಿಶ್ರಿತ ಪೆಟ್ರೋಲ್, E20, 2025 ರ ವೇಳೆಗೆ ಭಾರತದಾದ್ಯಂತ ಲಭ್ಯವಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

2025 ರ ವೇಳೆಗೆ ದೇಶಾದ್ಯಂತ 20% ಎಥೆನಾಲ್ ಮಿಶ್ರಿತ ಪೆಟ್ರೋಲ್, E20 ಲಭ್ಯವಾಗಲಿದೆ -ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
ಹರ್ದೀಪ್ ಸಿಂಗ್ ಪುರಿ
Follow us
| Updated By: ಆಯೇಷಾ ಬಾನು

Updated on:Jul 08, 2023 | 12:19 PM

ಭಾರತವು ಮುಂದಿನ ವರ್ಷದ ಏಪ್ರಿಲ್‌ನಿಂದ ಆಯ್ದ ಪೆಟ್ರೋಲ್ ಪಂಪ್‌ಗಳಲ್ಲಿ ಶೇಕಡಾ 20 ರಷ್ಟು ಎಥೆನಾಲ್‌ನೊಂದಿಗೆ ಪೆಟ್ರೋಲ್ ಪೂರೈಸಲು ಪ್ರಾರಂಭಿಸಲಿದೆ(20 % Ethanol Blended Petrol). ತೈಲ ಆಮದು ಅವಲಂಬನೆಯನ್ನು ಕಡಿತಗೊಳಿಸಲು ಮತ್ತು ಪರಿಸರ ಸಮಸ್ಯೆಗಳನ್ನು ಬಗೆಹರಿಸಲು ಸರಬರಾಜನ್ನು ಮತ್ತಷ್ಟು ಹೆಚ್ಚಿಸಲಾಗುತ್ತೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ(Hardeep Singh Puri) ತಿಳಿಸಿದ್ದಾರೆ.

20 ಪ್ರತಿಶತ ಎಥೆನಾಲ್ ಮಿಶ್ರಿತ ಪೆಟ್ರೋಲ್, E20, 2025 ರ ವೇಳೆಗೆ ಭಾರತದಾದ್ಯಂತ ಲಭ್ಯವಿರುತ್ತದೆ. ನಿನ್ನೆ ನಡೆದ ಭಾರತೀಯ ಮರ್ಚೆಂಟ್ಸ್ ಚೇಂಬರ್‌ಗಳ ವರ್ಚುವಲ್ ಸಭೆಯ ನಂತರ ಮಾತನಾಡಿದ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಮೊದಲ E20 ವಿಶೇಷ ಇಂಧನ ಔಟ್ಲೆಟ್ ಅನ್ನು ಈ ವರ್ಷದ ಫೆಬ್ರವರಿಯಲ್ಲಿ ತೆರೆಯಲಾಗಿತ್ತು, ನಂತರ ಇದರ ಸಂಖ್ಯೆ ಈಗಾಗಲೇ 600 ದಾಟಿದೆ. 2025 ರ ವೇಳೆಗೆ ದೇಶಾದ್ಯಂತ E20 ವಿಶೇಷ ಇಂಧನ ಔಟ್ಲೆಟ್​ಗಳು ಲಭ್ಯವಿರಲಿವೆ ಎಂದರು.

ಇದನ್ನೂ ಓದಿ:DRDO Scientist: ಪಾಕ್ ಮಹಿಳೆಯ ಮೋಹಕ್ಕೆ ಬಿದ್ದು, ಭಾರತ ಕ್ಷಿಪಣಿ ರಹಸ್ಯಗಳನ್ನು ಬಹಿರಂಗಪಡಿಸಿದ DRDO ವಿಜ್ಞಾನಿ: ಎಟಿಎಸ್ ವರದಿ 

2013-14ರಲ್ಲಿ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ 38 ಕೋಟಿ ಲೀಟರ್‌ನಿಂದ 2021-22ರಲ್ಲಿ 433 ಕೋಟಿ ಲೀಟರ್‌ಗೆ ಏರಿಕೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. 2016-17ರಲ್ಲಿ ಜೈವಿಕ ಇಂಧನವನ್ನು ಮಾರಾಟ ಮಾಡುವ ಇಂಧನ ಕೇಂದ್ರಗಳ ಸಂಖ್ಯೆ 30 ಸಾವಿರದಿಂದ 67,640 ಕ್ಕೆ ಹೆಚ್ಚಿದೆ.

ಕಳೆದ ಒಂಬತ್ತು ವರ್ಷಗಳಲ್ಲಿ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಬೆಳವಣಿಗೆಯನ್ನು ಕಂಡಿದೆ. ದೇಶವು ಈಗ ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ, ಮೂರನೇ ಅತಿದೊಡ್ಡ ತೈಲ ಗ್ರಾಹಕ ಮತ್ತು ಮೂರನೇ ಅತಿದೊಡ್ಡ ಎಲ್‌ಪಿಜಿ ಗ್ರಾಹಕನಾಗಿ ನಿಂತಿರುವುದರಿಂದ ಬೆಳವಣಿಗೆ ಮತ್ತು ಶಕ್ತಿಯ ಪರಸ್ಪರ ಸಂಬಂಧವು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಹೇಳಿದರು. ದೇಶವು ನಾಲ್ಕನೇ ಅತಿದೊಡ್ಡ ಎಲ್‌ಎನ್‌ಜಿ ಆಮದುದಾರ, ನಾಲ್ಕನೇ ಅತಿದೊಡ್ಡ ರಿಫೈನರ್ ಮತ್ತು ವಿಶ್ವದ ನಾಲ್ಕನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ನಿಂತಿದೆ. ಭಾರತದ ಬೆಳವಣಿಗೆಯು ಜಗತ್ತಿನಾದ್ಯಂತ ವಿಸ್ಮಯ ಮತ್ತು ವಿಶ್ವಾಸವನ್ನು ಹುಟ್ಟುಹಾಕಿದೆ. ಮತ್ತು ಪ್ರತಿಯೊಬ್ಬ ಭಾರತೀಯನ ಭರವಸೆ ಮತ್ತು ಹೆಮ್ಮೆಯ ಮೂಲವಾಗಿದೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.

ದೇಶದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:17 pm, Sat, 8 July 23

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು