AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲೆಗಾಂವ್ ಸ್ಫೋಟ, ಮೋಹನ್​ ಭಾಗವತ್​​ರನ್ನು ಸಿಲುಕಿಸಲು ಪಿತೂರಿ ನಡೆದಿತ್ತು: ಮಾಜಿ ಎಟಿಎಸ್ ಅಧಿಕಾರಿ

ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿದ್ದ ಎಟಿಎಸ್ ತಂಡದ ಭಾಗವಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ಮೆಹಬೂಬ್ ಮುಜಾವರ್, ಆ ತಂಡದಲ್ಲಿದ್ದಾಗ, ಮಾಲೆಗಾಂವ್ ಪ್ರಕರಣಕ್ಕೆ ಸಂಬಂಧಿಸದ ಕೆಲವು ಕೆಲಸಗಳನ್ನು ಮಾಡಲು ತಮ್ಮನ್ನು ಕೇಳಲಾಗಿತ್ತು ಎಂದು ಎನ್‌ಐಎ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಂತಹ ಒಂದು ಕೃತ್ಯವೆಂದರೆ ಆಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೊಸ ಸರಸಂಘಚಾಲಕ ಆಗಿದ್ದ ಮೋಹನ್ ಭಾಗವತ್ ಅವರನ್ನು ಬಂಧಿಸುವುದು. ತಮ್ಮ ಪ್ರಕರಣದ ತನಿಖೆಯ ಸಮಯದಲ್ಲಿ, ಮಾಲೆಗಾಂವ್ ಪ್ರಕರಣದಲ್ಲಿ ನಡೆಯುತ್ತಿರುವ ನಕಲಿ ತನಿಖೆಯ ದಾಖಲೆಗಳನ್ನು ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿದ್ದೆ ಎಂದು ಅವರು ಹೇಳಿದರು. ಈಗ ಅವರು ತಮ್ಮ ದಾಖಲೆಗಳ ಕುರಿತು ನ್ಯಾಯಾಲಯದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.

ಮಾಲೆಗಾಂವ್ ಸ್ಫೋಟ, ಮೋಹನ್​ ಭಾಗವತ್​​ರನ್ನು ಸಿಲುಕಿಸಲು ಪಿತೂರಿ ನಡೆದಿತ್ತು: ಮಾಜಿ ಎಟಿಎಸ್ ಅಧಿಕಾರಿ
ಮೋಹನ್ ಭಾಗವತ್
ನಯನಾ ರಾಜೀವ್
|

Updated on: Aug 01, 2025 | 12:00 PM

Share

ಮುಂಬೈ, ಆಗಸ್ಟ್​ 01: ಮಾಲೆಗಾಂವ್ ಸ್ಫೋಟ(Malegaon Blast) ಪ್ರಕರಣದಲ್ಲಿ ಆರ್​​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagwat) ಅವರನ್ನು ಸಿಲುಕಿಸುವ ಪಿತೂರಿ ನಡೆದಿತ್ತು ಎಂದು ಮಾಜಿ ಎಟಿಎಸ್ ಅಧಿಕಾರಿ ಮೆಹಬೂಬ್ ಮುಜಾವರ್ ತಿಳಿಸಿದ್ದಾರೆ. 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸಿದ್ದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮಾಜಿ  ಅಧಿಕಾರಿಯೊಬ್ಬರು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಂಧಿಸುವಂತೆ ಒತ್ತಡವಿತ್ತು ಮತ್ತು ಹಾಗೆ ಮಾಡುವಂತೆ ಕೇಳಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

‘‘ಮೋಹನ್ ಭಾಗವತ್ ಅವರಂತಹ ದೊಡ್ಡ ವ್ಯಕ್ತಿಯನ್ನು ಬಂಧಿಸುವುದು ನನ್ನ ಸಾಮರ್ಥ್ಯಕ್ಕೆ ಮೀರಿತ್ತು. ನಾನು ಆದೇಶಗಳನ್ನು ಪಾಲಿಸದ ಕಾರಣ, ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಯಿತು ಅದು ನನ್ನ 40 ವರ್ಷಗಳ ವೃತ್ತಿಜೀವನವನ್ನು ಹಾಳುಮಾಡಿತು’’ ಎಂದರು.

ಮಾಲೆಗಾಂವ್ ಸ್ಫೋಟ ಪ್ರಕರಣದ ಎಲ್ಲಾ ಏಳು ಆರೋಪಿಗಳನ್ನು ಎನ್​ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಮತ್ತು ಕರ್ನಲ್ ಪುರೋಹಿತ್ ಸೇರಿದಂತೆ ಎಲ್ಲಾ 7 ಆರೋಪಿಗಳನ್ನು ಎನ್‌ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಆರಂಭದಲ್ಲಿ ಎಟಿಎಸ್ ಪ್ರಕರಣದ ತನಿಖೆ ನಡೆಸಿತ್ತು, ಆದರೆ ನಂತರ ಅದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿತು.

ತಮ್ಮ ಹೇಳಿಕೆಗಳನ್ನು ಬೆಂಬಲಿಸಲು ತಮ್ಮ ಬಳಿ ದಾಖಲೆಗಳಿವೆ, ಕೇಸರಿ ಭಯೋತ್ಪಾದನೆ ಇರಲಿಲ್ಲ. ಎಲ್ಲವೂ ನಕಲಿಯಾಗಿತ್ತು ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಈ ಕೇಸ್ ನನ್ನ ಬದುಕನ್ನೇ ಹಾಳು ಮಾಡಿತು; ಮಾಲೆಗಾಂವ್ ಸ್ಫೋಟದ ತೀರ್ಪಿನ ಬಳಿಕ ಪ್ರಜ್ಞಾ ಠಾಕೂರ್ ಮೊದಲ ಪ್ರತಿಕ್ರಿಯೆ

ಸೆಪ್ಟೆಂಬರ್ 29, 2008 ರಂದು ಆರು ಜನರು ಸಾವನ್ನಪ್ಪಿ 101 ಜನರು ಗಾಯಗೊಂಡ ಮಾಲೆಗಾಂವ್ ಸ್ಫೋಟದ ತನಿಖೆ ನಡೆಸುತ್ತಿದ್ದ ಎಟಿಎಸ್ ತಂಡದ ಭಾಗವಾಗಿ ತಾವು ಇದ್ದಿದ್ದಾಗಿ ಅವರು ಹೇಳಿದ್ದಾರೆ. ಮೋಹನ್ ಭಾಗವತ್ ಅವರನ್ನು ಹಿಡಿಯಲು ತಮ್ಮನ್ನು ಕೇಳಿಕೊಳ್ಳಲಾಗಿತ್ತು, ಆ ಸಮಯದಲ್ಲಿ ಎಟಿಎಸ್ ಏನು ತನಿಖೆ ನಡೆಸಿತು ಮತ್ತು ಏಕೆ ಎಂದು ನಾನು ಹೇಳಲಾರೆ.

ಆದರೆ ರಾಮ್ ಕಲ್ಸಂಗ್ರ, ಸಂದೀಪ್ ಡಾಂಗೆ, ದಿಲೀಪ್ ಪಾಟಿದಾರ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಂತಹ ವ್ಯಕ್ತಿಗಳ ಬಗ್ಗೆ ನನಗೆ ಕೆಲವು ಗೌಪ್ಯ ಆದೇಶಗಳನ್ನು ನೀಡಲಾಯಿತು. ಈ ಎಲ್ಲಾ ಆದೇಶಗಳನ್ನು ಅನುಸರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿಯೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಂಧಿಸುವಂತೆ ತಮ್ಮ ಅಧಿಕಾರಿಗಳು ಆದೇಶಿಸಿದ್ದರು. ಅವರು ನಿರಾಕರಿಸಿದಾಗ, ಅವರನ್ನು ಅಮಾನತುಗೊಳಿಸಲಾಯಿತು ಮತ್ತು ಕೆಲವು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಯಿತು.

ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ಮಾಲೆಗಾಂವ್‌ನ ಮುಸ್ಲಿಂ ಏರಿಯಾದಲ್ಲಿ ಮಸೀದಿಯ ಬಳಿ ಬೈಕ್​​ನಲ್ಲಿದ್ದ ಸ್ಫೋಟಕ ಸಾಧನವು ಸ್ಫೋಟಗೊಂಡಿತ್ತು, ಇದರ ಪರಿಣಾಮವಾಗಿ ಆರು ಜನರು ಸಾವನ್ನಪ್ಪಿದ್ದರು. ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರಂಜಾನ್ ತಿಂಗಳಲ್ಲಿ ಸ್ಫೋಟ ಸಂಭವಿಸಿತ್ತು. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಆರಂಭದಲ್ಲಿ ತನಿಖೆಯ ನೇತೃತ್ವ ವಹಿಸಿತ್ತು,

ಮೋಟಾರ್ ಸೈಕಲ್‌ನ ಮಾಲೀಕತ್ವವನ್ನು ತ್ವರಿತವಾಗಿ ಪತ್ತೆಹಚ್ಚಿ, ಹಲವರನ್ನು ಬಂಧಿಸಲಾಗಿತ್ತು. 2011 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ವಹಿಸಿಕೊಂಡಾಗ ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ