ಐಟಿ ದಾಳಿ: ಕಾಂಗ್ರೆಸ್​ ಸಂಸದ ಧೀರಜ್ ಸಾಹು ಮನೆಯಲ್ಲಿ 351 ಕೋಟಿ ರೂ. ನಗದು ಬಳಿಕ ಸಿಕ್ಕಿತೇ ಚಿನ್ನಾಭರಣಗಳು?

ಜಾರ್ಖಂಡ್​ನ ಕಾಂಗ್ರೆಸ್​ ಸಂಸದ ಧೀರಜ್ ಸಾಹು(Dheeraj Sahu) ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ(Income Tax Department) ನಡೆಸಿದ ದಾಳಿಯಲ್ಲಿ ಇದುವರೆಗೆ 351 ಕೋಟಿ ರೂ. ನಗದು ಪತ್ತೆಯಾಗಿದೆ. ಆದರೆ ಆಭರಣಗಳನ್ನು ಬಚ್ಚಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ರಾಂಚಿಯ ರೇಡಿಯಂ ರಸ್ತೆಯಲ್ಲಿರುವ ಧೀರಜ್ ಸಾಹು ಅವರ ಮನೆಯ ಜಮೀನನ್ನು ಅಗೆಯಲು ಆದಾಯ ತೆರಿಗೆ ಇಲಾಖೆ ತಂಡ ಸಿದ್ಧತೆ ನಡೆಸಿದೆ.

ಐಟಿ ದಾಳಿ: ಕಾಂಗ್ರೆಸ್​ ಸಂಸದ ಧೀರಜ್ ಸಾಹು ಮನೆಯಲ್ಲಿ 351 ಕೋಟಿ ರೂ. ನಗದು ಬಳಿಕ ಸಿಕ್ಕಿತೇ ಚಿನ್ನಾಭರಣಗಳು?
ಐಟಿ ದಾಳಿ

Updated on: Dec 13, 2023 | 12:49 PM

ಜಾರ್ಖಂಡ್​ನ ಕಾಂಗ್ರೆಸ್​ ಸಂಸದ ಧೀರಜ್ ಸಾಹು(Dheeraj Sahu) ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ(Income Tax Department) ನಡೆಸಿದ ದಾಳಿಯಲ್ಲಿ ಇದುವರೆಗೆ 351 ಕೋಟಿ ರೂ. ನಗದು ಪತ್ತೆಯಾಗಿದೆ. ಆದರೆ ಆಭರಣಗಳನ್ನು ಬಚ್ಚಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ರಾಂಚಿಯ ರೇಡಿಯಂ ರಸ್ತೆಯಲ್ಲಿರುವ ಧೀರಜ್ ಸಾಹು ಅವರ ಮನೆಯ ಜಮೀನನ್ನು ಅಗೆಯಲು ಆದಾಯ ತೆರಿಗೆ ಇಲಾಖೆ ತಂಡ ಸಿದ್ಧತೆ ನಡೆಸಿದೆ.

ಧೀರಜ್ ಸಾಹು ಮನೆಯ ಮೇಲೆ ದಾಳಿ ನಡೆಸಿದ ತಂಡ ತನಿಖೆ ಆರಂಭಿಸಿದೆ, ಜಿಯೋ ಸರ್ವೆಲೆನ್ಸ್​ ಸಿಸ್ಟಂ ಯಂತ್ರದ ಮೂಲಕ ಐಟಿ ತಂಡ ಜಮೀನನ್ನು ಶೋಧಿಸುತ್ತಿದೆ. ಮಣ್ಣಿನಡಿಯಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣ ಮತ್ತಿತರೆ ವಸ್ತುಗಳನ್ನು ಯಂತ್ರದ ಮೂಲಕ ಶೋಧಿಸಲಾಗುತ್ತಿದೆ.
ದಾಳಿಯ ವೇಳೆ ದೊರೆತ ಅಪಾರ ಸಂಪತ್ತು ಬೆಳಕಿಗೆ ಬಂದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ನಿರೀಕ್ಷೆಗಳು ಹೆಚ್ಚಿವೆ. ಧೀರಜ್ ಸಾಹು ಅವರ ಮನೆಯ ನೆಲದಡಿಯಲ್ಲಿ ನಿಧಿ ಅಡಗಿರಬಹುದು ಎಂದು ಅವರು ಭಾವಿಸಿದ್ದಾರೆ.

ಇಂದು ಮೂರು ವಾಹನಗಳಲ್ಲಿ 12 ಮಂದಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಲೋಹರ್ಡಗಾದಲ್ಲಿರುವ ಧೀರಜ್ ಸಾಹು ಅವರ ನಿವಾಸಕ್ಕೆ ತನಿಖೆಗಾಗಿ ಆಗಮಿಸಿದ್ದಾರೆ. ಜಿಯೋ ಕಣ್ಗಾವಲು ಯಂತ್ರವನ್ನು ಕೂಡ ತಂದಿದ್ದಾರೆ.

ಮತ್ತಷ್ಟು ಓದಿ: ಧೀರಜ್​ ಸಾಹು ಐಟಿ ಕೇಸ್​: 6ನೇ ದಿನವೂ ಮುಂದುವರೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

ಮೇಜಿನ ಮೇಲೆ ಕಂತೆ ಕಂತೆ ನೋಟುಗಳು
ಆಭರಣಗಳು ಅಥವಾ ಇನ್ಯಾವುದೇ ವಸ್ತುಗಳು ನೆಲದಲ್ಲಿ ಅಡಗಿವೆಯೇ ಎಂದು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ತಂಡವು ರಾಂಚಿ ಹಾಗೂ ಧೀರಜ್ ಅವರ ಇತರೆ ಸ್ಥಳಗಳ ಮೇಲೆ ದಾಳಿ ಮಾಡಿವೆ.

ಅಂತರ ಕಾಯ್ದುಕೊಂಡ ಕಾಂಗ್ರೆಸ್​
ಧೀರಜ್ ಸಾಹು ಅವರ ಕುಟುಂಬವು ಮದ್ಯ ತಯಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ ಮತ್ತು ಒಡಿಶಾದಲ್ಲಿ ಕಾರ್ಖಾನೆಗಳನ್ನು ಹೊಂದಿದೆ. ಅಪಾರ ನಗದು ಪತ್ತೆಯಾದ ಬಳಿಕ ಕಾಂಗ್ರೆಸ್​ ಧೀರಜ್​ನಿಂದ ಅಂತರ ಕಾಯ್ದುಕೊಂಡಿದೆ. ಧೀರಜ್ ವ್ಯವಹಾರಕ್ಕೂ ಕಾಂಗ್ರೆಸ್​ಗೂ ಯಾವುದೇ ಸಂಬಂಧವಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್​ ಹೇಳಿದ್ದಾರೆ.

80 ತಂಡಗಳಿಂದ ದಾಳಿ
ಆದಾಯ ತೆರಿಗೆ ಇಲಾಖೆ ತಂಡವು ಡಿಸೆಂಬರ್ 6ರಂದು ತೆರಿಗೆ ವಂಚನೆ ಪ್ರಕರಣದಲ್ಲಿ ಬೌದ್ ಡಿಸ್ಟಿಲಿರಿ ಪ್ರೈವೇಟ್ ಲಿಮಿಟೆಡ್ ಹಾಗೂ ಅದರ ಪ್ರವರ್ತಕರ ವಿರುದ್ಧ ದಾಳಿ ಶುರು ಮಾಡಿತ್ತು. ಆದಾಯ ತೆರಿಗೆ ಇಲಾಖೆ ಹಾಗೂ ಹಲವಾರು ಬ್ಯಾಂಕ್​ಗಳಿಂದ ಸುಮಾರು 80 ತಂಡವನ್ನು ನಿಯೋಜನೆ ಮಾಡಿತ್ತು. ಭದ್ರತಾ ಸಿಬ್ಬಂದಿ, ಚಾಲಕರು ಇತರೆ ಸಿಬ್ಬಂದಿ ಸೇರಿ ಒಟ್ಟು 200 ಮಂದಿ ಇದ್ದಾರೆ. ಸಾಹು ಅವರು 175 ಬ್ಯಾಗ್​ಗಳಲ್ಲಿ ಹಣವನ್ನು ಇಟ್ಟುಕೊಂಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us