AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​​ನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ದಂಡ, ಲೈಸನ್ಸ್ ರದ್ದು ಶಿಕ್ಷೆ ಜತೆಗೆ ರಕ್ತದಾನವೂ ಕಡ್ಡಾಯ

ಒಂದು ಬಾರಿಗಿಂತ ಹೆಚ್ಚು ಬಾರಿ ತಪ್ಪೆಸಗಿದರೆ ದಂಡವೂ ಹೆಚ್ಚಿಗೆ ಆಗುತ್ತದೆ. ಆದರೆ ಸಮುದಾಯದ ಸೇವೆ ಅದೇ ರೀತಿ ಇರುತ್ತದೆ.  ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸಿ ಮೊದಲ ಬಾರಿ..

ಪಂಜಾಬ್​​ನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ದಂಡ, ಲೈಸನ್ಸ್ ರದ್ದು ಶಿಕ್ಷೆ ಜತೆಗೆ ರಕ್ತದಾನವೂ ಕಡ್ಡಾಯ
ಪಂಜಾಬ್ ಪೊಲೀಸ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Jul 17, 2022 | 6:06 PM

Share

ಚಂಡೀಗಢ: ಅತಿ ವೇಗದ ವಾಹನ ಚಾಲನೆ ಅಥವಾ ಮದ್ಯ (alcohol), ಮಾದಕ ವಸ್ತು ಸೇವನೆಯ ಅಮಲಿನಿಂದ ವಾಹನ ಚಲಾಯಿಸಿದ್ದರೆ  ಪಂಜಾಬ್​​ನಲ್ಲಿ (Punjab) ದಂಡ ಮಾತ್ರವಲ್ಲ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಅಥವಾ ರಕ್ತದಾನ (Blood Donation) ಕಡ್ಡಾಯವಾಗಿ ಮಾಡಲೇಬೇಕು. ಪಂಜಾಬ್ ಪೊಲೀಸರು  ಭಾನುವಾರ ಬಿಡುಗಡೆ ಮಾಡಿದ ಹೊಸ ಟ್ರಾಫಿಕ್ ನಿಯಮಗಳ ಪ್ರಕಾರ ವಾಹನಗಳ ಅತಿ ವೇಗದ ಚಾಲನೆಗೆ ದಂಡ ಕಟ್ಟುವುದು, ಲೈಸನ್ಸ್ ತಾತ್ಕಾಲಿಕ ರದ್ದತಿ ಜತೆಗೆ ಕಡ್ಡಾಯ ರಕ್ತದಾನವನ್ನೂ ಸೇರಿಸಲಾಗಿದೆ. ಒಂದಕ್ಕಿಂತ ಹೆಚ್ಚು ಬಾರಿ ತಪ್ಪೆಸಗಿದರೆ ದಂಡವೂ ಹೆಚ್ಚುತ್ತದೆ. ಆದರೆ ಸಮುದಾಯದ ಸೇವೆ ಅದೇ ರೀತಿ ಇರುತ್ತದೆ.  ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸಿ ಮೊದಲ ಬಾರಿ ಪೊಲೀಸರ ಕೈಗೆ ಸಿಕ್ಕಿಹಾಕೊಂಡರೆ ₹ 1,000 ದಂಡ ಮತ್ತು ಮೂರು ತಿಂಗಳಿಗೆ ಚಾಲಕನ ಲೈಸನ್ಸ್ ರದ್ದು ಮಾಡಲಾಗುತ್ತದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಮತ್ತು ಮೂರು ತಿಂಗಳಿಗೆ ಚಾಲಕನ ಲೈಸನ್ಸ್ ರದ್ದು ಮಾಡಲಾಗುತ್ತದ್ದು ₹ 5,000 ದಂಡ ವಿಧಿಸಲಾಗುತ್ತದೆ.

ಮತ್ತೊಮ್ಮೆ ತಪ್ಪೆಸಗಿದರೆ ಮೂರು ತಿಂಗಳಿಗೆ ಚಾಲಕನ ಲೈಸನ್ಸ್ ರದ್ದು ಮಾಡಲಾಗುತ್ತದೆ ಜತೆಗೆ ₹ 2,000 ದಂಡ ಕಟ್ಟಬೇಕು. ಮದ್ಯ ಸೇವಿಸಿ ವಾಹನ ಜಲಾಯಿಸುತ್ತಿದ್ದರೆ ಲೈಸನ್ಸ್ ರದ್ದು ಜತೆ ₹ 10,000 ರೂ ಪಾವತಿ ಮಾಡಬೇಕಾಗುತ್ತದೆ.

ತಪ್ಪಿತಸ್ಥರು ಟ್ರಾನ್ಸ್ ಪೋರ್ಟ್ ಅಥಾರಿಟಿಯಲ್ಲಿ ರಿಫ್ರೆಶರ್ ಕೋರ್ಸ್ ಮಾಡಿ ಆಮೇಲೆ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕನಿಷ್ಠ 2 ಗಂಟೆ ಬೋಧನೆ ಮಾಡಬೇಕು. ದಂಡ ಪಾವತಿ ಹೊತ್ತಲ್ಲಿ ಈ ಬೋಧನೆಗಾಗಿ ನೋಡಲ್ ಆಫೀಸರ್ ಪ್ರಮಾಣ ಪತ್ರವೊಂದನ್ನು ನೀಡುತ್ತಾರೆ. ಇದರ ಜತೆಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿ ಹತ್ತಿದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಬೇಕು ಅಥವಾ ಹತ್ತಿರದ ಬ್ಲಡ್ ಬ್ಯಾಂಕ್ ಗೆ ಒಂದು ಯೂನಿಟ್ ರಕ್ತದಾನ ಮಾಡಬೇಕು

Published On - 6:00 pm, Sun, 17 July 22

Follow Us
TV9 Web
TV9 Web

TV9 Kannada

Read More
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ