ಪಂಜಾಬ್​​ನ ನವಾನ್​ ಶಹರ್​​ನ ಪೊಲೀಸ್​ ಕ್ಯಾಂಪಸ್​​ನಲ್ಲಿ ನಿಗೂಢ ಸ್ಫೋಟ; ಉಗ್ರರ ಕೈವಾಡದ ಶಂಕೆ

| Updated By: Lakshmi Hegde

Updated on: Nov 08, 2021 | 8:07 PM

ಪಂಜಾಬ್​​ ರಾಜ್ಯಾದ್ಯಂತ ಕಳೆದ ಕೆಲ ವರ್ಷಗಳಿಂದ ಉಗ್ರರ ಹಾವಳಿ ಗಣನೀಯವಾಗಿ ಹೆಚ್ಚಾಗಿದೆ. ಇದೇ ವರ್ಷ ಆಗಸ್ಟ್​ 8ರಂದು ಅಮೃತ್​ಸರ್​ನ ಒಂದು ಹಳ್ಳಿಯಲ್ಲಿ 5 ಹ್ಯಾಂಡ್​ ಗ್ರೆನೇಡ್​ ಮತ್ತು ಒಂದು ಟಿಫಿನ್​ ಬಾಕ್ಸ್ ಬಾಂಬ್​​ನ್ನುಅಲ್ಲಿನ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದರು.

ಪಂಜಾಬ್​​ನ ನವಾನ್​ ಶಹರ್​​ನ ಪೊಲೀಸ್​ ಕ್ಯಾಂಪಸ್​​ನಲ್ಲಿ ನಿಗೂಢ ಸ್ಫೋಟ; ಉಗ್ರರ ಕೈವಾಡದ ಶಂಕೆ
ಸಾಂಕೇತಿಕ ಚಿತ್ರ
Follow us on

ಪಂಜಾಬ್​ನ ನವಾನ್​ ಶಹರ್​ನ ಪೊಲೀಸ್​​ ಅಪರಾಧ ತನಿಖಾ ವಿಭಾಗ (CIA)ದ ಠಾಣೆಯ ಕ್ಯಾಂಪಸ್​​ನಲ್ಲಿ ರವಿವಾರ ಸಂಜೆಯ ವೇಳೆ ನಿಗೂಢವಾಗಿ ಸ್ಫೋಟ ಸಂಭವಿಸಿದ್ದಾಗಿ ಪಂಜಾಬ್​​ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪೊಲೀಸ್ ಆಫೀಸ್​​ನ ಒಳಗೆ ಸ್ಫೋಟಕವನ್ನು ಎಸೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಫೋಟದ ಪರಿಣಾಮ ಅತ್ಯಂತ ದೊಡ್ಡದಾಗಿ ಶಬ್ದವಾಗಿದೆ. ಅದೃಷ್ಟವಶಾತ್​ ಯಾವುದೇ ಹೆಚ್ಚಿನ ಮಟ್ಟದ ಹಾನಿಯಾಗಿಲ್ಲ. ಯಾರ ಜೀವಕ್ಕೂ ಅಪಾಯವಾಗಿಲ್ಲ ಎಂದು ಹೇಳಲಾಗಿದೆ.

ಸ್ಫೋಟಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸರು ತನಿಖೆಯನ್ನು ಶುರು ಮಾಡಿದ್ದಾರೆ. ವಿಧಿವಿಜ್ಞಾನ ತಂಡದ ಸಹಾಯವನ್ನೂ ತೆಗೆದುಕೊಂಡಿದ್ದಾರೆ. ಆದರೆ ಈ ಹೊತ್ತಿನವರೆಗೆ ಸ್ಫೋಟದ ಹಿಂದಿನ  ಕಾರಣ, ಸ್ಫೋಟಕವನ್ನು ಪೊಲೀಸ್​ ಕ್ಯಾಂಪಸ್​​ನ ಒಳಗೆ ಎಸೆದವರು ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೂಡ ಪೊಲೀಸರು ನೀಡಿಲ್ಲ.

ಉಗ್ರರ ಉಪಟಳದಲ್ಲಿ ಹೆಚ್ಚಳ
ಪಂಜಾಬ್​​ ರಾಜ್ಯಾದ್ಯಂತ ಕಳೆದ ಕೆಲ ವರ್ಷಗಳಿಂದ ಉಗ್ರರ ಹಾವಳಿ ಗಣನೀಯವಾಗಿ ಹೆಚ್ಚಾಗಿದೆ. ಇದೇ ವರ್ಷ ಆಗಸ್ಟ್​ 8ರಂದು ಅಮೃತ್​ಸರ್​ನ ಒಂದು ಹಳ್ಳಿಯಲ್ಲಿ 5 ಹ್ಯಾಂಡ್​ ಗ್ರೆನೇಡ್​ ಮತ್ತು ಒಂದು ಟಿಫಿನ್​ ಬಾಕ್ಸ್ ಬಾಂಬ್​​ನ್ನುಅಲ್ಲಿನ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದರು. ಅದಾದ ಕೆಲವೇ ದಿನಗಳ ಬಳಿಕ ಅಂದರೆ ಅಗಸ್ಟ್​ 20ರಂದು ಪಾಗ್ವಾರದಲ್ಲಿ ಒಂದು ಟಿಫಿನ್​ ಬಾಕ್ಸ್​ ಬಾಂಬ್​, ಎರಡು ಗ್ರನೇಡ್​ಗಳು ಮತ್ತು ಇತರ ಕೆಲವು ಮಾದರಿಯ ಸ್ಫೋಟಕಗಳು ಪತ್ತೆಯಾಗಿತ್ತು. ಅಜ್ನಾಲಾದಿಂದಲೂ ಒಂದು ಟಿಫಿನ್​ ಬಾಕ್ಸ್​ ಬಾಂಬ್​ನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಈಗ ನಡೆದ ಸ್ಫೋಟದ ಹಿಂದೆ ಉಗ್ರರ ಕೈವಾಡ ಇದೆಯಾ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಇದು ಭಯೋತ್ಪಾದಕ ಚಟುವಟಿಕೆಯೇ ಆಗಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಬಗ್ಗೆ ಪ್ರಾದೇಶಿಕ ಭದ್ರತಾ ಸಂವಾದ ಆಯೋಜಿಸಿರುವ ಭಾರತ; ಪಾಕ್​ ತಿರಸ್ಕಾರಕ್ಕೆ ಕೇಂದ್ರ ಸರ್ಕಾರದ ಉತ್ತರವೇನು?