Fact Check: ಸರಿಯಾದ ನಿರ್ಧಾರ ತೆಗೆದುಕೊಳ್ಳುವುದಲ್ಲ, ನಿರ್ಧಾರ ತೆಗೆದುಕೊಂಡ ನಂತರ ಸರಿ ಮಾಡಿ: ರತನ್ ಟಾಟಾ ಹೀಗೆ ಹೇಳಿರುವುದು ನಿಜವೇ?
‘‘ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರ ಮೇಲೆ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಆಮೇಲೆ ಅದನ್ನು ಸರಿ ಮಾಡುತ್ತೇನೆ’’. ಹೀಗೆ ರತನ್ ಟಾಟಾ ಹೇಳಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ ವೈರಲ್ ಆಗುತ್ತಿದೆ.
‘‘ಜನರು ನಿಮ್ಮ ಮೇಲೆ ಎಸೆಯುವ ಕಲ್ಲುಗಳನ್ನು ತೆಗೆದುಕೊಂಡು ಅವುಗಳ ಮೂಲಕ ಸ್ಮಾರಕಗಳನ್ನು ನಿರ್ಮಿಸಿ…’’ ರತನ್ ಟಾಟಾ ಈ ಹಿಂದೆ ಈ ರೀತಿ ಹೇಳಿದ್ದರು. ಹಾಗೆಯೇ ಬದುಕಿದರು ಕೂಡ. ಎದುರಾಳಿಗಳಿಗೆ ತಕ್ಕ ಉತ್ತರ ನೀಡಿ ವಿಶ್ವದ ಶ್ರೇಷ್ಠ ಉದ್ಯಮಿಯಾಗುವ ಮೂಲಕ ಇತಿಹಾಸದಲ್ಲಿ ಚಿರಸ್ಥಾಯಿಯಾದರು. ರತನ್ ಟಾಟಾ ಇನ್ನಿಲ್ಲ ನಿಜ. ಆದರೆ ಅವರ ಮಾತು ಎಂದೆಂದಿಗೂ ಜೀವಂತ. ಯುವಕರಿಗೆ ಸ್ಪೂರ್ತಿದಾಯಕ ಮಾತುಗಳನ್ನು ಆಡಿ ಅವರನ್ನು ಪ್ರೋತ್ಸವಾಹಿಸಿದವರು ರತನ್. ಆದರೆ, ಇದೀಗ ರತನ್ ಟಾಟಾ ಹೇಳಿದ್ದಾರೆ ಎನ್ನಲಾಗುತ್ತಿರುವ ಸುಳ್ಳು ಕೋಟ್ ವೈರಲ್ ಆಗುತ್ತಿದೆ.
‘‘ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರ ಮೇಲೆ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಆಮೇಲೆ ಅದನ್ನು ಸರಿ ಮಾಡುತ್ತೇನೆ’’. ಹೀಗೆ ರತನ್ ಟಾಟಾ ಹೇಳಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಹೇಳಿಕೆಯನ್ನು ನೀವು ಕೆಳಗೆ ನೋಡಬಹುದು.
ವೈರಲ್ ಆಗುತ್ತಿರುವ ಹೇಳಿಕೆ
View this post on Instagram
ವೈರಲ್ ಆಗುತ್ತಿರುವ ಹೇಳಿಕೆ
#RatanTata, Legendary Industrialist and National Icon, Passes Away at 86 Read Details here… https://t.co/GrQPYSsTmG pic.twitter.com/EAnzVaLbEz
— Hyderabad Post (@TheHydPost) October 9, 2024
Fact Check:
ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದು ಸುಳ್ಳು ಎಂಬುದು ಕಂಡು ಬಂದಿದೆ. ಅಸಲಿಗೆ ರತನ್ ಟಾಟಾ ಈ ರೀತಿ ಹೇಳಲೇ ಇಲ್ಲ. ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ಈ ಕೋಟ್ ಅನ್ನು ಕಾಪಿ-ಪೇಸ್ಟ್ ಮಾಡಿದೆವು. ಆಗ ರತನ್ ಟಾಟಾ ಅವರೇ ಈ ರೀತಿ ಹೇಳಿದ್ದಾರೆ ಎಂಬ ಅನೇಕ ಫೋಟೋಗಳು ಕಂಡವು. ಆದರೆ, ಇವುಗಳ ಮಧ್ಯೆ ಒಂದು ಯೂಟ್ಯೂಬ್ ಚಾನೆಲ್ನ ವಿಡಿಯೋ ಸಿಕ್ಕಿತು. ಲರ್ನ್ ವಿಥ್ ಜಸ್ಪಾಲ್ ಎಂಬ ಯೂಟ್ಯೂಬ್ ಖಾತೆಯಲ್ಲಿ ವಿದೇಶಿ ಆ್ಯಂಕರ್ ಒಬ್ಬರು ರತನ್ ಟಾಟಾ ಅವರನ್ನು ಸಂದರ್ಶನ ಮಾಡುವ ವಿಡಿಯೋ ಇದೆ. ಆಗಸ್ಟ್ 19, 2022 ರಂದು ಅಪ್ಲೋಡ್ ಆಗಿರುವ ಈ ಪೋಸ್ಟ್ನಲ್ಲಿ ಆ್ಯಂಕರ್, ‘ನೀವು ಈ ಹಿಂದೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರ ಮೇಲೆ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಆಮೇಲೆ ಅದನ್ನು ಸರಿ ಮಾಡುತ್ತೇನೆ ಎಂದು ಹೇಳಿದ್ದೀರಿ, ಈ ರೀತಿಯ ವಾಕ್ಯ ನಿಮಗೆ ಹೇಗೆ ಬರುತ್ತದೆ’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರತನ್ ಟಾಟಾ, ‘ಕ್ಷಮಿಸಿ ನಾನು ನಿಮಗೆ ಬೇಸರ ಮಾಡುತ್ತಿದ್ದೇನೆ, ಟ್ವಿಟ್ಟರ್ ಮತ್ತು ಫೇಸ್ಬುಕ್ ಆ ಕೋಟ್ ಹಂಚಿಕೊಂಡಿದೆ. ನಾನು ಎಂದಿಗೂ ಆ ರೀತಿಯ ಸ್ಟೇಟ್ಮೆಂಟ್ ಕೊಟ್ಟಿಲ್ಲ’ ಎಂದು ಹೇಳಿದ್ದಾರೆ.
ಇದು ಮಾತ್ರವಲ್ಲ ರತನ್ ಟಾಟಾ ಹೇಳಿದ್ದಾರೆ ಎನ್ನಲಾಗುತ್ತಿರುವ ಅನೇಕ ಕೋಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಇತ್ತೀಚೆಗಷ್ಟೆ ರತನ್ ಟಾಟಾ ಅವರು ಜೆಎನ್‌ಯು ಪದವೀಧರರನ್ನು ಟಾಟಾ ಗ್ರೂಪ್‌ಗೆ ಪ್ರವೇಶಿಸದಂತೆ ಬ್ಲಾಕ್ ಲಿಸ್ಟ್ಗೆ ಸೇರಿಸಿದ್ದಾರೆ ಎಂನ ಸುದ್ದಿ ವೈರಲ್ ಆಗಿತ್ತು. ಇದು ಕೂಡ ನಕಲಿ ಸುದ್ದಿಯಾಗಿದೆ. ಇನ್ನಾದರೂ ಸೋಷಿಯಲ್ ಮೀಡಿಯಾ ಬಳಕೆದಾರರು ನಿಜಾಂಶವನ್ನು ತಿಳಿಯದೆ ಈ ರೀತಿಯ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಬೇಕಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Thu, 10 October 24