ಪ್ರಧಾನಿ ನರೇಂಧ್ರ ಮೋದಿ (Narandra Modi) ಅವರು ಗುರುವಾರ (ಮೇ 26) ರಂದು ವಿವಿಧ ಯೋಜನೆಗಳ ಚಾಲನೆಗೆ ತಮಿಳುನಾಡಿಗೆ ತೆರಳಿದ್ದರು. ಈ ವೇಳೆ ಪ್ರಧಾನಿ ಮೋದಿ ಅವರಿಗೆ ಜನರು “ಗೋ ಬ್ಯಾಕ್ ಮೋದಿ” ಎಂದು ರಸ್ತೆಗಳ ಮೇಲೆ ಬರಹಗಳನ್ನು ಬರೆದು ಪ್ರಧಾನಿ ಮೋದಿಯವರು ತಮಿಳುನಾಡಿಗೆ ಬರುವುದನ್ನು ಜನರು ವಿರೋಧಿಸಿದರು ಎಂದು ಟ್ವಿಟರ್ನಲ್ಲಿ ಸಾಕಷ್ಟು ಜನರು ಪೋಟೊವನ್ನು ಟ್ವೀಟ್ ಮಾಡಿದ್ದಾರೆ. ಆದರೆ ಇದು ಸತ್ಯವೇ? ಇದರ ಸಲಿಯತ್ತು ಏನು ಇಲ್ಲದೆ.
ಇದನ್ನು ಓದಿ: ನಾಯಕಿ ಪ್ರಧಾನ ಸಿನಿಮಾ ಮಾಡ್ತಾರಾ ಪ್ರಶಾಂತ್ ನೀಲ್? ಇಂಥ ಗಾಸಿಪ್ ಹರಡಲು ಕಾರಣ ಇಲ್ಲಿದೆ..
ಟ್ವಿಟರ್ (Twitter) ಮತ್ತು ಫೇಸ್‌ಬುಕ್‌ನಲ್ಲಿ (Facebook) ಹಲವಾರು ಜನರು #GoBackModi ಮತ್ತು #GoBackFascistModi ನಂತಹ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಈ ಫೋಟೋ ಹೊಸದಲ್ಲ ಅಥವಾ ಚೆನ್ನೈನಿಂದ ಬಂದದ್ದಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಜನವರಿ 2020 ರಲ್ಲಿ, ಕೋಲ್ಕತ್ತಾದಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರು ಪ್ರಧಾನಿಯ ಭೇಟಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ಈ ಬರಹವನ್ನು ಚಿತ್ರಿಸಿದರು.
TN hate you & your party ideology..#GoBackModi #GoBackFascistModi pic.twitter.com/OnkSqYzYrQ
— தேவ்…?❤️ (@yazhiniappa) May 25, 2022
ಇದನ್ನು ಓದಿ: ಬೇಸಿಗೆಯಲ್ಲಿ ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಸಲಹೆಗಳು
“ಮೆಟ್ರೋ ಚಾನೆಲ್ ಕಂಟ್ರೋಲ್ ಪೋಸ್ಟ್, ಹೇರ್ ಸ್ಟ್ರೀಟ್ ಪೋಲೀಸ್ ಸ್ಟೇಷನ್” ಗಾಗಿ Google Maps ನಲ್ಲಿ ಹುಡುಕಿದಾಗ ನಾವು ಕಂಡುಕೊಂಡ ಫೋಟೋಗಳು ಮತ್ತು ವೈರಲ್ ಶಾಟ್‌ಗಳ ನಡುವೆ ನಮಗೆ ಸಂಪೂರ್ಣ ಹೋಲಿಕೆಗಳು ಕಂಡುಬಂದವು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Sun, 29 May 22