Fact Check ಸಂಭಾಜಿ ಬಿಢೆ ಕಾಲಿಗೆ ನಮಸ್ಕರಿಸುತ್ತಿರುವ ವಿಡಿಯೊ ಟ್ವೀಟ್ ಮಾಡಿದ ಟ್ವಿಟರ್ ಖಾತೆ ಸುಧಾಮೂರ್ತಿಯವರದ್ದಲ್ಲ, ಅದು ಫೇಕ್

ಇದು ಆಕೆಯ ಟ್ವಿಟರ್ ಹ್ಯಾಂಡಲ್ ಅಲ್ಲ, ಆಕೆ ಯಾವುದೇ ಟ್ವಿಟ್ಟರ್ ಖಾತೆಯನ್ನು ಹೊಂದಿಲ್ಲ. ಅವರು ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್‌ನಲ್ಲಿಲ್ಲ...

Fact Check ಸಂಭಾಜಿ ಬಿಢೆ ಕಾಲಿಗೆ ನಮಸ್ಕರಿಸುತ್ತಿರುವ ವಿಡಿಯೊ ಟ್ವೀಟ್ ಮಾಡಿದ ಟ್ವಿಟರ್ ಖಾತೆ ಸುಧಾಮೂರ್ತಿಯವರದ್ದಲ್ಲ, ಅದು ಫೇಕ್
ಸುಧಾಮೂರ್ತಿಯವರ ಫೇಕ್ ಟ್ವಿಟರ್ ಖಾತೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 09, 2022 | 9:37 PM

ಇನ್ಫೋಸಿಸ್ ಫೌಂಡೇಶನ್‌ನ ಲೇಖಕಿ ಮತ್ತು ಅಧ್ಯಕ್ಷೆ ಸುಧಾ ಮೂರ್ತಿ (Sudha Murty) ಅವರ ಫೇಕ್ ಟ್ವಿಟರ್(Twitter) ಖಾತೆಯ ಟ್ವೀಟ್ ವೈರಲ್ ಆಗಿದ್ದು, ಹಲವಾರು ಟ್ವಿಟರ್ ಬಳಕೆದಾರರು ಇದನ್ನು ಮೂರ್ತಿ ಅವರ ನಿಜವಾದ ಖಾತೆ ಎಂದು ನಂಬಿದ್ದಾರೆ. ನವೆಂಬರ್ 8, 2022 ರಂದು, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಮತ್ತು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ಅತ್ತೆ, ಸುಧಾಮೂರ್ತಿ ಅವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಬಲಪಂಥೀಯ ನಾಯಕ ಸಂಭಾಜಿ ರಾವ್ ಭಿಡೆ(Sambhaji Bhide) ಅವರನ್ನು ಭೇಟಿಯಾಗಿದ್ದಾರೆ. ಈ ಹೊತ್ತಲ್ಲಿ ಸುಧಾಮೂರ್ತಿ ಭಿಡೆಯವರ ಪಾದಗಳಿಗೆ ನಮಸ್ಕರಿಸುತ್ತಿರುವುದನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವರು ಇದನ್ನು ಟೀಕಿಸಿದ್ದಾರೆ. @sudhamurty ಎಂದಿರುವ ಅನ್ ವೆರಿಫೈಡ್ ಖಾತೆಯಲ್ಲಿ, ಶಿವ ಪ್ರತಿಷ್ಠಾನದ ಸಂಸ್ಥಾಪಕರೂ ಆಗಿರುವ ಮಾಜಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನಾಯಕರ ಕಾಲಿಗೆ ಸುಧಾಮೂರ್ತಿ ನಮಸ್ಕರಿಸುತ್ತಿರುವ ವಿಡಿಯೊ ಟ್ವೀಟ್ ಮಾಡಲಾಗಿದೆ. ಆದರೆ ಈ ಖಾತೆ ಸುಧಾಮೂರ್ತಿಯವರದ್ದು ಅಲ್ಲ ಎಂದು ಬೂಮ್ ಲೈವ್ ವರದಿ ಮಾಡಿದೆ.

ಯಾರು ಈ ಬಿಢೆ?

2018 ರಲ್ಲಿ ಸಂಭವಿಸಿದ ಭೀಮಾ ಕೋರೆಗಾಂವ್ ಘರ್ಷಣೆಯಲ್ಲಿ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾದ ವ್ಯಕ್ತಿಗಳಲ್ಲಿ ಸಂಭಾಜಿ ಭಿಡೆ ಒಬ್ಬರು. ಭಿಡೆ ಅವರು ನವೆಂಬರ್ 2, 2022 ರಂದು ಮಹಿಳಾ ಟಿವಿ ವರದಿಗಾರರಿಗೆ ‘ಬಿಂದಿ’ ಧರಿಸದಿದ್ದಕ್ಕಾಗಿ ಮಾತನಾಡುವುದಿಲ್ಲ ಎಂದು ಹೇಳಿ ಸುದ್ದಿಯಾಗಿದ್ದರು. ಈ ಬಗ್ಗೆ ರಾಜ್ಯ ಮಹಿಳಾ ಆಯೋಗ ಅವರಿಗೆ ನೋಟಿಸ್ ಜಾರಿ ಮಾಡಿತ್ತು.

ಸುಧಾ ಮೂರ್ತಿ (@sudhamurty) ಎಂಬ ಹೆಸರಿನ ಅನ್ ವೆರಿಫೈಡ್ ಟ್ವಿಟರ್ ಖಾತೆಯಲ್ಲಿ, ಸುಧಾಮೂರ್ತಿ ಭಿಡೆ ಅವರನ್ನು ಭೇಟಿಯಾದ 25 ಸೆಕೆಂಡುಗಳ ವಿಡಿಯೊವನ್ನು ಟ್ವೀಟ್ ಮಾಡಲಾಗಿದೆ. ಆದರೆ ಈಗ ಈ ಟ್ವೀಟ್ ಡಿಲೀಟ್ ಆಗಿದೆ.

ಹಲವಾರು ಟ್ವಿಟರ್ ಬಳಕೆದಾರರು ನಕಲಿ ಖಾತೆಯನ್ನೇ ನಿಜವೆಂದು ನಂಬಿದ್ದಾರೆ. ಪತ್ರಕರ್ತ ನಿಖಿಲ್ ವಾಗ್ಲೆ ಅವರು ನಕಲಿ ಖಾತೆಯಲ್ಲಿ ಟ್ವೀಟ್ ಮಾಡಿದ ವಿಡಿಯೊಗೆ ಪ್ರತಿಕ್ರಿಯಿಸಿದ್ದು “ಸುಧಾ ಮೂರ್ತಿ ಅವರು ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಆಕಸ್ಮಿಕ ಭೇಟಿಯಾಗಿದ್ದರೆ, ಅಂತಹ ಕುಖ್ಯಾತ ವ್ಯಕ್ತಿಯ ಕಾಲಿಗೆ ಬಿದ್ದು ಏನು ಸಾಧಿಸಿದ್ದಾರೆ ಎಂದು ಮರಾಠಿಯಲ್ಲಿ ಕೇಳಿದ್ದಾರೆ.

ಸುಧಾ ಮೂರ್ತಿ ಅವರ ನಕಲಿ ಟ್ವಿಟ್ಟರ್ ಹ್ಯಾಂಡಲ್‌ನ ಅದೇ ವೈರಲ್ ಟ್ವೀಟ್ ಅನ್ನು ಬಲಪಂಥೀಯ ಅಂಕಣಕಾರರಾದ ಶೆಫಾಲಿ ವೈದ್ಯ ಕೂಡ ರಿಟ್ವೀಟ್ ಮಾಡಿದ್ದಾರೆ.

ನಕಲಿ ಟ್ವಿಟರ್ ಹ್ಯಾಂಡಲ್ (@Sudhamurty) 71.2 ಸಾವಿರ ಅನುಯಾಯಿಗಳನ್ನು ಹೊಂದಿದೆ ಮತ್ತು ಅದರ ಬಯೋ, “ಸುಧಾ ಮೂರ್ತಿ” ಎಂದು ಮಾತ್ರ ಇದ್ದು, ಫೋಟೊ ಕೂಡಾ ಸುಧಾ ಮೂರ್ತಿಯದ್ದಿದೆ. ಈ ಟ್ವಿಟರ್ ಖಾತೆ ಯಾರನ್ನೂ ಫಾಲೋ ಮಾಡುವುದಿಲ್ಲ ಆದರೆ ಈ ಖಾತೆಗೆ 73.3 ಸಾವಿರ ಫಾಲೋವರ್ ಗಳಿದ್ದಾರೆ.

ಸುಧಾ ಮೂರ್ತಿ ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಇಲ್ಲ

ಸುಧಾ ಮೂರ್ತಿ ಅವರ ಕಚೇರಿಯನ್ನು ಬೂಮ್ ಸಂಪರ್ಕಿಸಿದ್ದು, ಅವರ ಕಚೇರಿಯ ಪ್ರತಿನಿಧಿ ಸುಧಾಮೂರ್ತಿ ಟ್ವಿಟರ್ ಹ್ಯಾಂಡಲ್ (@sudhamurty) ಅವರ ಅಧಿಕೃತ ಹ್ಯಾಂಡಲ್ ಅಲ್ಲ. ಲೇಖಕಿ ಸುಧಾ ಮೂರ್ತಿ ಟ್ವಿಟರ್‌ನಲ್ಲಿಲ್ಲ ಎಂದು ಖಚಿತಪಡಿಸಿದರು. “ಇದು ಆಕೆಯ ಟ್ವಿಟರ್ ಹ್ಯಾಂಡಲ್ ಅಲ್ಲ, ಆಕೆ ಯಾವುದೇ ಟ್ವಿಟ್ಟರ್ ಖಾತೆಯನ್ನು ಹೊಂದಿಲ್ಲ. ಅವರು ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್‌ನಲ್ಲಿಲ್ಲ. ಅವರು ಯಾವುದೇ ಸಾರ್ವಜನಿಕ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿಲ್ಲ” ಎಂದು ಮೂರ್ತಿ ಅವರ ಕಚೇರಿಯ ಪ್ರತಿನಿಧಿ ಬೂಮ್ ಗೆ ತಿಳಿಸಿದ್ದಾರೆ.

Published On - 8:34 pm, Wed, 9 November 22