AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೇನ್ ದುರಂತ: ಅಳಿಯನ ಅಂತ್ಯಸಂಸ್ಕಾರಕ್ಕೆ ಹೊರಟ್ಟಿದ್ದ ಕಾರು ಅಪಘಾತ, 3 ಸಾವು

ಹೈದರಾಬಾದ್: ಚಾಲಕನ ನಿಯಂತ್ರಣ ತಪ್ಪಿ ಕಾರು ಲಾರಿಗೆ ಗುದ್ದಿ ಮೂವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಕಾಂಚಿಲಿ ಬಳಿ ಭಾನುವಾರ ನಡೆದಿದೆ. ನಾಗಮಣಿ (48), ಲಾವಣ್ಯ (23) ಚಾಲಕ ರೌತು ದ್ವಾರಕಾ (23) ಮೃತ ದುರ್ದೈವಿಗಳು. ಮೃತರು ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಾದ (HSL) ಕ್ರೇನ್ ಅಪಘಾತದಲ್ಲಿ ಮೃತಪಟ್ಟ ಸಂಬಂಧಿಯೊಬ್ಬರ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ವಿಶಾಖಪಟ್ಟಣಂಗೆ ತೆರಳುತ್ತಿದ್ದರು. ಈ ವೇಳೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆ ಬಳಿ ಲಾರಿಗೆ ಗುದ್ದಿ ಮೃತಪಟ್ಟಿದ್ದಾರೆ. ತನ್ನ ಅಳಿಯ ಪಿ.ಭಾಸ್ಕರ್ ರಾವ್ ಅವರ […]

ಕ್ರೇನ್ ದುರಂತ: ಅಳಿಯನ ಅಂತ್ಯಸಂಸ್ಕಾರಕ್ಕೆ ಹೊರಟ್ಟಿದ್ದ ಕಾರು ಅಪಘಾತ, 3 ಸಾವು
ಆಯೇಷಾ ಬಾನು
| Edited By: |

Updated on:Aug 04, 2020 | 11:24 AM

Share

ಹೈದರಾಬಾದ್: ಚಾಲಕನ ನಿಯಂತ್ರಣ ತಪ್ಪಿ ಕಾರು ಲಾರಿಗೆ ಗುದ್ದಿ ಮೂವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಕಾಂಚಿಲಿ ಬಳಿ ಭಾನುವಾರ ನಡೆದಿದೆ. ನಾಗಮಣಿ (48), ಲಾವಣ್ಯ (23) ಚಾಲಕ ರೌತು ದ್ವಾರಕಾ (23) ಮೃತ ದುರ್ದೈವಿಗಳು.

ಮೃತರು ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಾದ (HSL) ಕ್ರೇನ್ ಅಪಘಾತದಲ್ಲಿ ಮೃತಪಟ್ಟ ಸಂಬಂಧಿಯೊಬ್ಬರ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ವಿಶಾಖಪಟ್ಟಣಂಗೆ ತೆರಳುತ್ತಿದ್ದರು. ಈ ವೇಳೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆ ಬಳಿ ಲಾರಿಗೆ ಗುದ್ದಿ ಮೃತಪಟ್ಟಿದ್ದಾರೆ.

ತನ್ನ ಅಳಿಯ ಪಿ.ಭಾಸ್ಕರ್ ರಾವ್ ಅವರ ಅಂತ್ಯಕ್ರಿಯೆಗಾಗಿ ವಿಶಾಖಪಟ್ಟಣಂಗೆ ಬರುತ್ತಿದ್ದ ನಾಗಮಣಿ (48), ಸೊಸೆ ಲಾವನ್ಯಾ (23) ಮತ್ತು ಕಾರ್ ಚಾಲಕ ರೌತು ದ್ವಾರಕಾ (23) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಉಳಿದ ನಾಗಮಣಿಯ ಇಬ್ಬರು ಪುತ್ರರು ಮತ್ತು ಇನ್ನೊಬ್ಬ ಅಳಿಯ ಗಾಯಗೊಂಡಿದ್ದು, ಆರಂಭದಲ್ಲಿ ಗಾಯಾಳುಗಳನ್ನು ಸೊಂಪೇಟದಲ್ಲಿರುವ ಸರ್ಕಾರಿ ಆಸ್ಪತ್ರೆಗೆ, ನಂತರ ಶ್ರೀಕಾಕುಲಂಗೆ ಸ್ಥಳಾಂತರಿಸಲಾಗಿದೆ. ಆಕೆಯ ಒಬ್ಬ ಮಗನ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಸಿಕ್ಕಿದೆ.

Published On - 10:38 am, Tue, 4 August 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಲ್ಯಾಪ್ ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಡ್ರೈವರ್
ಲ್ಯಾಪ್ ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಡ್ರೈವರ್