ಬ್ಯಾಂಕ್ ಮ್ಯಾನೇಜರ್(Bank Manager) ಅಪಹರಣ(Kidnap) ಪ್ರಕರಣದಲ್ಲಿ ದಂಪತಿಯನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ. ಇವರು ವ್ಯಕ್ತಿ ಹಣೆಗೆ ಬಂದೂಕಿಟ್ಟು ಅಪಹರಿಸಿದ್ದರು. ಅಪಹರಣಕ್ಕಿಂತ ಆಶ್ಚಯರ್ವೆನಿಸಿರುವ ಸಂಗತಿ ಎಂದರೆ ಅಪಹರಿಸಿ ಕಾರಿನಲ್ಲಿ ಕೂರಿಸಿಕೊಂಡು ಊರು ಊರು ಸುತ್ತುತ್ತಾ 800 ಕಿ.ಮೀ ಸಂಚರಿಸಿದ್ದರೂ ಕೊನೆಗೆ ಸಿಕ್ಕಿಬಿದ್ದಿದ್ದಾರೆ. ಫರೀದಾಬಾದ್ನಿಂದ ಹಿಮಾಚಲ ಪ್ರದೇಶದ ಬಿಲಾಸ್ಪುರ ನಂತರ ಮಥುರಾಗೆ ಕರೆದೊಯ್ಯಲಾಗಿತ್ತು.
ಸತೀಶ್ ಅವರ ಮನೆಯಲ್ಲಿ ಮೊದಲು ಬಾಡಿಗೆಗಿದ್ದ ಭೂಪೇಂದ್ರ ಎಂಬಾತ ಪತ್ನಿಯ ಜತೆ ಸೇರಿ ಸಂಚು ರೂಪಿಸಿದ್ದ ಎನ್ನಲಾಗಿದೆ.
ಆರೋಪಿಯಿಂದ ಪಿಸ್ತೂಲ್, ಮೂರು ಜೀವಂತ ಕಾಟ್ರಿಡ್ಜ್ಗಳು ಮತ್ತು 4 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಓರ್ವ ತಲೆ ಮರೆಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಪಲ್ವಾನ್ನ ಬಡೋಲಿ ಗ್ರಾಮದ ನಿವಾಸಿಗಳಾದ ಭೂಪೇಂದ್ರ ಹಾಗೂ ರಿಷಿತಾ ಎಂದು ಗುರುತಿಸಲಾಗಿದೆ. ಈ ಪ್ರಕರಣದ ಮಾಸ್ಟರ್ಮೈಂಡ್ ಗುರುಗ್ರಾಮದ ಬಾದಶಹಪುರ ಗ್ರಾಮದ ರವೀಂದ್ರ ಎಂಬಾತ ಇನ್ನೂ ತಲೆ ಮರೆಸಿಕೊಂಡಿದ್ದಾನೆ. ಶಸ್ತ್ರಸಜ್ಜಿತ ಆರೋಪಿಗಳು ಏಪ್ರಿಲ್ 21-22ರ ರಾತ್ರಿ ಬಲ್ಲಭಗಢ ಸೆಕ್ಟರ್ 62ರಲ್ಲಿ ಬ್ಯಾಂಕ್ ಮ್ಯಾನೇಜರ್ ಮನೆಗೆ ನುಗ್ಗಿ ಅಪಹರಿಸಿದ್ದರು.
ಮತ್ತಷ್ಟು ಓದಿ: ವಿಪರೀತ ಸಾಲ, ದಿನ ಬೆಳಗಾದರೆ ನೂರಾರು ಫೋನ್ಕಾಲ್ಗಳು, ಅಪಹರಣ ನಾಟಕವಾಡಿ ತಂದೆ ಬಳಿ ಹಣಕ್ಕೆ ಬೇಡಿಕೆ ಇಟ್ಟ
ಆರೋಪಿಗಳು ಬ್ಯಾಂಕ್ ಮ್ಯಾನೇಜರ್ನ ಅವರ ಕಾರಲ್ಲೇ ಕೂರಿಸಿಕೊಂಡು ಪರಾರಿಯಾಗಿದ್ದರು. ಆರೋಪಿಗಳು ಮೊದಲು ಹಿಮಾಚಲಪ್ರದೇಶಕ್ಕೆ ಹೋಗಿದ್ದರು. ಅಲ್ಲಿಂದ ಮಥುರಾ ತಲುಪಿದ್ದರು. ನಾಲ್ಕು ತಿಂಗಳ ಹಿಂದಿನವರೆಗೂ ಆರೋಪಿಗಳು ಬ್ಯಾಂಕ್ ಮ್ಯಾನೇಜರ್ ಮನೆಯಲ್ಲಿ ಬಾಡಿಗೆಗಿದ್ದರು. ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂಬ ಅರಿವಿತ್ತು. ಮ್ಯಾನೇಜರ್ ಪತ್ನಿ ಸರ್ಕಾರಿ ನೌಕರಿಯಲ್ಲಿರುವುದೂ ತಿಳಿದಿತ್ತು. ಕೆಲವು ದಿನಗಳ ಹಿಂದೆ ಕಾರು ಖರೀದಿಸಿರುವುದೂ ತಿಳಿದಿತ್ತು.
ಭೂಪೇಂದ್ರ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದಾಗ ರವೀಂದ್ರನನ್ನು ಭೇಟಿಯಾಗಿ ಸ್ನೇಹ ಬೆಳಸಿದ್ದ, ಬಳಿಕ ಹಣದ ಆಮಿಷವೊಡ್ಡಿ ಈ ಅಪರಾಧದಲ್ಲಿ ಭಾಗಿಯಾಗುವಂತೆ ಮಾಡಿದ್ದ. 50 ಲಕ್ಷ ಕೊಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು.
ಸಿಕ್ಕಿಬಿದ್ದಿದ್ಹೇಗೆ?
ಮ್ಯಾನೇಜರ್ ಪತ್ನಿ ಗಂಡನನ್ನು ಬಿಡಿಸಲು 4 ಲಕ್ಷಗಳೊಂದಿಗೆ ಬೈಪಾಸ್ ರಸ್ತೆಗೆ ಬಂದಿದ್ದರು. ಆಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Thu, 25 April 24