Watch ಮುಂಬೈ ಮರೈನ್​​ ಡ್ರೈವ್​​ನಲ್ಲಿ ಗರ್ಭಾ ನೃತ್ಯ; ನಿಜವಾದ ನೃತ್ಯದ ಸೊಬಗು ನೋಡಲು ನಮ್ಮೂರಿಗೆ ಬನ್ನಿ ಎಂದ ಗುಜರಾತಿಗಳು

ಈ ವಿಡಿಯೊಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, ಸರ್ ಹಾಗಾದರೆ ನೀವು ನವರಾತ್ರಿ ಹೊತ್ತಲ್ಲಿ  ಅಹಮದಾಬಾದ್​ಗೆ ಭೇಟಿ ನೀಡಿಲ್ಲ ಎಂದು ಕಾಣುತ್ತದೆ. ನೀವು ಗರ್ಭಾದ ನೈಜ ರೂಪ ಮತ್ತು ಸರಿಯಾದ ಹೆಜ್ಜೆಗಳನ್ನು ಮಿಸ್ ಮಾಡಿಕೊಂಡಿದ್ದೀರಿ...

Watch ಮುಂಬೈ ಮರೈನ್​​ ಡ್ರೈವ್​​ನಲ್ಲಿ ಗರ್ಭಾ ನೃತ್ಯ; ನಿಜವಾದ ನೃತ್ಯದ ಸೊಬಗು ನೋಡಲು ನಮ್ಮೂರಿಗೆ ಬನ್ನಿ ಎಂದ ಗುಜರಾತಿಗಳು
ಮುಂಬೈನಲ್ಲಿ ಗರ್ಭಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 28, 2022 | 4:10 PM

ಈ ವಾರ ನವರಾತ್ರಿ ಆರಂಭವಾಗಿದ್ದು,ದೇಶದ ವಿವಿಧ ಭಾಗಗಳಲ್ಲಿ ಗರ್ಭಾ (Garba) ನೃತ್ಯಗಳನ್ನು ಆಯೋಜಿಸಲಾಗಿದೆ. ಮುಂಬೈಯ ಮರೈನ್ ಡ್ರೈವ್​​ನಲ್ಲಿ ಯುವಕ- ಯುವತಿಯರ ಗುಂಪೊಂದು ಗರ್ಭಾ ನೃತ್ಯಕ್ಕೆ ಹೆಜ್ಜೆ ಹಾಕುತ್ತಿರುವ ವಿಡಿಯೊವೊಂದನ್ನು ಉದ್ಯಮಿ ಆನಂದ್ ಮಹೀಂದ್ರ (Anand Mahindra) ಟ್ವೀಟ್ ಮಾಡಿದ್ದಾರೆ. ಮುಂಬೈನ ಮರೈನ್ ಡ್ರೈವ್. ಮುಂಬೈನ ಬೀದಿಗಳನ್ನು ವಶಪಡಿಸಿಕೊಳ್ಳುವುದು ಮತ್ತು ಸ್ವಾಧೀನಪಡಿಸಿಕೊಳ್ಳುವುದು ಪೂರ್ಣಗೊಂಡಿದೆ. ಆದರೆ ಇವರು ತೆರೆದ ತೋಳುಗಳಿಂದ ಸ್ವಾಗತಿಸಲ್ಪಟ್ಟ ನುಸುಳುಕೋರರು. ನವರಾತ್ರಿಯ ಸಮಯದಲ್ಲಿ ಮುಂಬೈ ನೋಡಬೇಕು. (ನಾನು ಗುಜರಾತ್‌ನ ನಗರಗಳಿಂದ ಪ್ರತಿಭಟನೆಯ ಕೂಗುಗಳನ್ನು ಕೇಳಲಿದ್ದೇನೆ ಎಂದು ನನಗೆ ತಿಳಿದಿದೆ. !)” ಎಂದು ಮಹೀಂದ್ರ ಟ್ವೀಟ್ ನಲ್ಲಿ ಬರೆದಿದ್ದಾರೆ. ಈ ವಿಡಿಯೊವನ್ನು 3 ಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.ಈ ವಿಡಿಯೊಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, ಸರ್ ಹಾಗಾದರೆ ನೀವು ನವರಾತ್ರಿ ಹೊತ್ತಲ್ಲಿ  ಅಹಮದಾಬಾದ್​ಗೆ ಭೇಟಿ ನೀಡಿಲ್ಲ ಎಂದು ಕಾಣುತ್ತದೆ. ನೀವು ಗರ್ಭಾದ ನೈಜ ರೂಪ ಮತ್ತು ಸರಿಯಾದ ಹೆಜ್ಜೆಗಳನ್ನು ಮಿಸ್ ಮಾಡಿಕೊಂಡಿದ್ದೀರಿ ಎಂದಿದ್ದಾರೆ.

ಇನ್ನೊಬ್ಬ ಬಳಕೆದಾರರು, ಸರಿಯಾದ ಗರ್ಭಾ ನೋಡಬೇಕಾದರೆ ನೀವು ವಡೋದರಾಕ್ಕೆ ಬರಬೇಕು ಎಂದಿದ್ದಾರೆ. ಸಾಂಪ್ರದಾಯಿಕ ಗರ್ಭಾ ನೋಡಬೇಕಾದರೆ ಅಹಮದಾಬಾದ್ ಗೆ ಬನ್ನಿ ಎಂದು ಹಲವು ನೆಟ್ಟಿಗರು ಹೇಳಿದ್ದಾರೆ. ನೃತ್ಯ ಪ್ರಕಾರದ ಕೆಲವು  ಸಾಂಪ್ರದಾಯಿಕ ಸೊಬಗು  ವೀಕ್ಷಿಸಲು ಅಹಮದಾಬಾದ್‌ಗೆ ಉತ್ತಮ ಸ್ಥಳವೆಂದು ಬಳಕೆದಾರರು ಹೇಳಿದ್ದಾರೆ .  ನವರಾತ್ರಿಯಲ್ಲಿ ಅಹಮದಾಬಾದ್  ನೋಡಬೇಕು. ಮುಂಬೈನ ಗರ್ಭಾ  ಸಾಂಪ್ರದಾಯಿಕವಲ್ಲ, ಗರ್ಭಾಕ್ಕಿಂತ  ಇದು ದಾಂಡಿಯಾ ತರಹ ಕಾಣುತ್ತಿದೆ . ಗುಜರಾತ್ ಸಾಂಪ್ರದಾಯಿಕ ಸೊಗಡನ್ನು ಹೊಂದಿದೆ ಎಂದಿದ್ದಾರೆ.

ನಾನು ಗುಜರಾತಿ ಮತ್ತು ನಾನು ಎಲ್ಲಿಯಾದರೂ ಗರ್ಭಾವನ್ನು  ವೀಕ್ಷಿಸಲು ಇಷ್ಟಪಡುತ್ತೇನೆ ಸರ್ ಎದು  ವ್ಯಕ್ತಿಯೊಬ್ಬರು ಬರೆದಿದ್ದಾರೆ.

ಒಂಬತ್ತು ರಾತ್ರಿಗಳ ಹಬ್ಬವಾದ ನವರಾತ್ರಿ  ಸೆಪ್ಟೆಂಬರ್ 26 ರಂದು ಪ್ರಾರಂಭವಾಯಿತು. ಈ ಸಮಯದಲ್ಲಿ, ಭಕ್ತರು ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸುತ್ತಾರೆ ಮತ್ತು ಅವರ ಕುಟುಂಬದ ಯೋಗಕ್ಷೇಮಕ್ಕಾಗಿ ಆಶೀರ್ವಾದವನ್ನು ಕೋರುತ್ತಾರೆ.

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್