AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಮರು ಭಾರತೀಯರಾಗಿದ್ದರೆ ಸಾಕಾಗುವುದಿಲ್ಲ, ಅವರು ಬಿಜೆಪಿಯವರಾಗಿರಬೇಕು: ಮೆಹಬೂಬಾ ಮುಫ್ತಿ

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮುಖ್ಯಸ್ಥೆ ಮುಫ್ತಿ ಅವರು ಬಿಜೆಪಿ ಹಿಜಾಬ್‌ ವಿಷಯಕ್ಕೆ ನಿಲ್ಲುವುದಿಲ್ಲ ಎಂದು ನನಗೆ ಆತಂಕವಾಗುತ್ತಿದೆ. “ಅವರು ಮುಸ್ಲಿಮರ ಇತರ ಚಿಹ್ನೆಗಳಿಗಾಗಿ ಬರುತ್ತಾರೆ ಮತ್ತು ಎಲ್ಲವನ್ನೂ ಅಳಿಸುತ್ತಾರೆ.

ಮುಸ್ಲಿಮರು ಭಾರತೀಯರಾಗಿದ್ದರೆ ಸಾಕಾಗುವುದಿಲ್ಲ, ಅವರು ಬಿಜೆಪಿಯವರಾಗಿರಬೇಕು: ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Feb 13, 2022 | 7:12 PM

Share

ಶ್ರೀನಗರ: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ (Hijab row)ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ (Mehbooba Mufti) ಮತ್ತು ಫಾರೂಕ್ ಅಬ್ದುಲ್ಲಾ ಅವರು ಭಾನುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಿಸಲು ಅವಕಾಶ ನೀಡದಿರುವುದಕ್ಕೆ ಪ್ರತಿಭಟನೆಗಳ ಜತೆ ಕ್ಯಾಂಪಸ್‌ಗಳಲ್ಲಿ ಹಿಜಾಬ್ ವಿರುದ್ಧ ಹಿಂದೂ ವಿದ್ಯಾರ್ಥಿಗಳೂ ಪ್ರತಿಭಟನೆ ನಡೆಸುತ್ತಿದ್ದಾರೆ . ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮುಖ್ಯಸ್ಥೆ ಮುಫ್ತಿ ಅವರು ಬಿಜೆಪಿ ಹಿಜಾಬ್‌ ವಿಷಯಕ್ಕೆ ನಿಲ್ಲುವುದಿಲ್ಲ ಎಂದು ನನಗೆ ಆತಂಕವಾಗುತ್ತಿದೆ. “ಅವರು ಮುಸ್ಲಿಮರ ಇತರ ಚಿಹ್ನೆಗಳಿಗಾಗಿ ಬರುತ್ತಾರೆ ಮತ್ತು ಎಲ್ಲವನ್ನೂ ಅಳಿಸುತ್ತಾರೆ. ಭಾರತೀಯ ಮುಸ್ಲಿಮರಿಗೆ, ಭಾರತೀಯರಾಗಿದ್ದರೆ ಸಾಕಾಗುವುದಿಲ್ಲ, ಅವರು ಬಿಜೆಪಿಯಾಗಿರಬೇಕು, ”ಎಂದು ಅವರು ಹೇಳಿದರು.  ಏತನ್ಮಧ್ಯೆ, ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಅಭ್ಯಾಸ ಮಾಡಲು ಮತ್ತು ತಿನ್ನಲು ಪ್ರತಿಯೊಬ್ಬರೂ ಸ್ವತಂತ್ರರು ಎಂದು ಹೇಳಿದರು. “ಜನರನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸುವ ಮೂಲಕ ಮತಗಳನ್ನು ಗೆಲ್ಲುವ ಪ್ರಯತ್ನದಲ್ಲಿ ಕೆಲವು ಮೂಲಭೂತವಾದಿಗಳು ಧರ್ಮದ ಮೇಲೆ ದಾಳಿ ಮಾಡುತ್ತಿದ್ದಾರೆ” ಎಂದು ಅಬ್ದುಲ್ಲಾ ಹೇಳಿದರು.

ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠವು ಕ್ಯಾಂಪಸ್‌ಗಳಲ್ಲಿ ಇಸ್ಲಾಮಿಕ್ ಹೆಡ್ ಸ್ಕ್ರಾರ್ಫ್ ಧರಿಸುವುದನ್ನು ಕರ್ನಾಟಕ ಸರ್ಕಾರದ ‘ನಿಷೇಧ’ವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಪುನರಾರಂಭಿಸುವ ಒಂದು ದಿನದ ಮೊದಲು ಈ ಹೇಳಿಕೆಗಳು ಬಂದಿವೆ. ಶುಕ್ರವಾರ ವಿದ್ಯಾರ್ಥಿಗಳು ಧಾರ್ಮಿಕ ಉಡುಗೆಯಲ್ಲಿ ಕ್ಯಾಂಪಸ್‌ಗಳಿಗೆ ಬರುವುದನ್ನು ನಿಷೇಧಿಸುವ ಹೈಕೋರ್ಟ್‌ನ ಮಧ್ಯಂತರ ಆದೇಶದ ವಿರುದ್ಧದ ಅರ್ಜಿಗಳ ತುರ್ತು ವಿಚಾರಣೆಯನ್ನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು.

ಇದನ್ನೂ ಓದಿ: ಹಿಜಾಬ್- ಕೇಸರಿ ಶಾಲು ವಿವಾದ ಹಿನ್ನೆಲೆ: ಉಡುಪಿಯಲ್ಲಿ ಎಲ್ಲಾ ಸಂಘಟನೆಗಳ ಮುಖಂಡರ ಶಾಂತಿ ಸಭೆ