ಮಾಜಿ‌ ಸ್ಪೀಕರ್‌ ಅನುಮಾನಾಸ್ಪದ ಸಾವು, ಬಂಜಾರಾ ಹಿಲ್ಸ್​​ ಪೊಲೀಸರಿಂದ ತನಿಖೆ‌ ಆರಂಭ

ಹೈದಾರಾಬಾದ್​: ಮಾಜಿ‌ ಸ್ಪೀಕರ್‌ ಡಾ. ಕೋಡಲ ಶಿವಪ್ರಸಾದ ಇಂದು ಮೃತಪಟ್ಟಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುವ ಹೈದರಾಬಾದಿನ ಬಂಜಾರಾ ಹಿಲ್ಸ್​​ ಠಾಣೆ ಪೊಲೀಸರು ತನಿಖೆ‌ ಆರಂಭಿಸಿದ್ದಾರೆ. ಡಿ.ಸಿ.ಪಿ. ಎ.ಆರ್. ಶ್ರೀನಿವಾಸ್​ ನೇತೃತ್ವದಲ್ಲಿ ಬಸವ ತಾರಕ‌ ಆಸ್ಪತ್ರೆಗೆ‌‌ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಒಂದು‌ ತಂಡ ಶಿವಪ್ರಸಾದ ಮನೆಗೆ‌ ಸಹ ಭೇಟಿ ನೀಡಿದೆ. ಮೃತ ಆಂಧ್ರ ಪ್ರದೇಶ ಮಾಜಿ ಸ್ಪೀಕರ್‌ ಕೋಡಲ ಶಿವಪ್ರಸಾದ ಮೂಲತಃ ವೈದ್ಯರು, ಎಂ.ಬಿ.ಬಿ.ಎಸ್  ಮತ್ತು ಎಂ.ಎಸ್ ವ್ಯಾಸಂಗ‌ ಮಾಡಿದ್ದರು. ಬಡವರ ಪರ, ಸೇವಾ ಪರ, ಜನಪರ ವೈದ್ಯರೆಂದು […]

ಮಾಜಿ‌ ಸ್ಪೀಕರ್‌ ಅನುಮಾನಾಸ್ಪದ ಸಾವು, ಬಂಜಾರಾ ಹಿಲ್ಸ್​​ ಪೊಲೀಸರಿಂದ ತನಿಖೆ‌ ಆರಂಭ
Follow us
ಸಾಧು ಶ್ರೀನಾಥ್​
|

Updated on:Sep 16, 2019 | 3:40 PM

ಹೈದಾರಾಬಾದ್​: ಮಾಜಿ‌ ಸ್ಪೀಕರ್‌ ಡಾ. ಕೋಡಲ ಶಿವಪ್ರಸಾದ ಇಂದು ಮೃತಪಟ್ಟಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುವ ಹೈದರಾಬಾದಿನ ಬಂಜಾರಾ ಹಿಲ್ಸ್​​ ಠಾಣೆ ಪೊಲೀಸರು ತನಿಖೆ‌ ಆರಂಭಿಸಿದ್ದಾರೆ.

ಡಿ.ಸಿ.ಪಿ. ಎ.ಆರ್. ಶ್ರೀನಿವಾಸ್​ ನೇತೃತ್ವದಲ್ಲಿ ಬಸವ ತಾರಕ‌ ಆಸ್ಪತ್ರೆಗೆ‌‌ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಒಂದು‌ ತಂಡ ಶಿವಪ್ರಸಾದ ಮನೆಗೆ‌ ಸಹ ಭೇಟಿ ನೀಡಿದೆ.

ಮೃತ ಆಂಧ್ರ ಪ್ರದೇಶ ಮಾಜಿ ಸ್ಪೀಕರ್‌ ಕೋಡಲ ಶಿವಪ್ರಸಾದ ಮೂಲತಃ ವೈದ್ಯರು, ಎಂ.ಬಿ.ಬಿ.ಎಸ್  ಮತ್ತು ಎಂ.ಎಸ್ ವ್ಯಾಸಂಗ‌ ಮಾಡಿದ್ದರು. ಬಡವರ ಪರ, ಸೇವಾ ಪರ, ಜನಪರ ವೈದ್ಯರೆಂದು ಹೆಸರಾಗಿದ್ದರು. ಮಾಜಿ ಸಿಎಂ ಎನ್.ಟಿ. ರಾಮರಾವ್ ಕರೆಯ ಮೇರೆಗೆ ರಾಜಕೀಯಕ್ಕೆ‌ ಧುಮುಕಿ, ಟಿಡಿಪಿ ಸೇರಿದ್ದರು. ಮುಂದೆ, 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಅವಿಭಜಿತ ಆಂಧ್ರಪ್ರದೇಶ ಸರ್ಕಾರದಲ್ಲಿ ವೈದ್ಯಕೀಯ ಸಚಿವರಾಗಿ ಸೇವೆ ಮಾಡಿದ್ದರು. ನೂತನ‌ ಆಂಧ್ರ ಸರ್ಕಾರದಲ್ಲಿ ಪ್ರಥಮ ಸ್ಪೀಕರ್ ಆಗಿದ್ದರು. ಇತ್ತೀಚಿನ ಚುನಾವಣೆಯಲ್ಲಿ ಸೋಲನ್ನಪ್ಪಿದ್ದರು. ನಂತರದಲ್ಲಿ ವೈಸಿಪಿ ನಾಯಕರಿಂದ ನಾನಾ‌ ರೀತಿ ಕಿರುಕುಳಕ್ಕೊಳಗಾದ ಆರೋಪ‌ ಕೇಳಿ ಬಂದಿತ್ತು.

ಟಿಡಿಪಿ ಸರ್ಕಾರವಿದ್ದಾಗ ಶಿವಪ್ರಸಾದ ಸ್ಪೀಕರ್ ಆಗಿದ್ದರು. ಟಿಡಿಪಿ‌‌ ನಾಯಕ ಚಂದ್ರಬಾಬು ನಾಯ್ಡು, ವೈಸಿಪಿಯ 23 ಶಾಸಕರನ್ನು ಪಕ್ಷಾಂತರ ಮಾಡಿಸಿದ್ದರು. ಆ ವೇಳೆ, ಸ್ಪೀಕರ್ ಶಿವಪ್ರಸಾದ ಟಿಡಿಪಿ ಪರ ತೀರ್ಮಾನ‌ ನೀಡಿದ್ದರು.

Published On - 3:34 pm, Mon, 16 September 19

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ