AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಪಿತಾ ಮುಖರ್ಜಿ ಎಲ್ಐಸಿ ಪಾಲಿಸಿಗಳಿಗೆ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ನಾಮಿನಿ

ಕೆಲವು ಆಸ್ತಿಗಳನ್ನು ಆರೋಪಿಗಳು ನಗದು ಕೊಟ್ಟು ಖರೀದಿಸಿದ್ದಾರೆ. ಇದಕ್ಕಾಗಿ ಬಳಸಿದ ಹಣದ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತನಿಖಾ ಸಂಸ್ಥೆ ಹೇಳಿದೆ.

ಅರ್ಪಿತಾ ಮುಖರ್ಜಿ ಎಲ್ಐಸಿ ಪಾಲಿಸಿಗಳಿಗೆ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ನಾಮಿನಿ
ಅರ್ಪಿತಾ ಮುಖರ್ಜಿ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Aug 04, 2022 | 7:38 PM

Share

ಕೊಲ್ಕತ್ತಾ: ಶಾಲಾ ಶಿಕ್ಷಕರ ನೇಮಕಾತಿ ಹಗರಣದ ಆರೋಪಿ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ (Partha Chatterjee) ಅವರ ಆಪ್ತೆ ಅರ್ಪಿತಾ ಮುಖರ್ಜಿ (Arpita Mukherjee) ಅವರ ಹೆಸರಲ್ಲಿ 31 ಎಲ್ಐಸಿ (LIC)  ಪಾಲಿಸಿ ಇದೆ. ಈ ಪಾಲಿಸಿಗಳ ನಾಮಿನಿ ಪಾರ್ಥ  ಚಟರ್ಜಿ ಆಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಅರ್ಪಿತಾ ಮತ್ತು ಪಾರ್ಥ ಚಟರ್ಜಿ 2012 ಜನವರಿ 1ರಂದು ಎಪಿಎ ಯುಟಿಲಿಟಿ ಸರ್ವೀಸಸ್​​​ನಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಆರೋಪಿಗಳ ಈ ಪಾಲುದಾರಿಕೆಯ ಸಂಸ್ಥೆಯ ಹೆಸರಿಗೆ ಆಸ್ತಿಯನ್ನು ತರಲಾಗಿತ್ತು ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ಕೆಲವು ಆಸ್ತಿಗಳನ್ನು ಆರೋಪಿಗಳು ನಗದು ಕೊಟ್ಟು ಖರೀದಿಸಿದ್ದಾರೆ. ಇದಕ್ಕಾಗಿ ಬಳಸಿದ ಹಣದ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತನಿಖಾ ಸಂಸ್ಥೆ ಹೇಳಿದೆ.

ಆರೋಪಿಗಳ ಈ ಪಾಲುದಾರಿಕೆಯ ಸಂಸ್ಥೆಯ ಹೆಸರಿಗೆ ಆಸ್ತಿಯನ್ನು ತರಲಾಗಿತ್ತು ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ಕೆಲವು ಆಸ್ತಿಗಳನ್ನು ಆರೋಪಿಗಳು ನಗದು ಕೊಟ್ಟು ಖರೀದಿಸಿದ್ದಾರೆ. ಇದಕ್ಕಾಗಿ ಬಳಸಿದ ಹಣದ ಮೂವ ಯಾವುದು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತನಿಖಾ ಸಂಸ್ಥೆ ಹೇಳಿದೆ.

ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ ಇಡಿ ಶೋಧ  ನಡೆಸಿದಾಗ ಎಡಿಎಸ್ಆರ್ ಬೋಲಾಪುರ್  ಕಚೇರಿಯಲ್ಲಿ  ನೋಂದಣಿ ಮಾಡಿದ ಒಪ್ಪಂದ ಪತ್ರ ಸಿಕ್ಕಿದೆ. ಈ ದಾಖಲೆಗಳನ್ನು ಇಡಿ ವಶಪಡಿಸಿಕೊಂಡಿದೆ. ಈ ದಾಖಲೆಗಳ ಪ್ರಕಾರ ಇವರಿಬ್ಬರೂ 2012ರಿಂದ ಪಾಲುದಾರರಾಗಿದ್ದಾರೆ. ಕೊಲ್ಕತ್ತಾದ ವಿಶೇಷ ನ್ಯಾಯಾಲಯ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಆಗಸ್ಟ್ 5ರ ವರೆಗೆ ಇಡಿ ವಶಕ್ಕೆ ನೀಡಿದೆ. ಜುಲೈ 22ರಂದು ಇಡಿ ಅರ್ಪಿತಾ ಮುಖರ್ಜಿ ಮನೆ ಮೇಲೆ ದಾಳಿ ನಡೆಸಿ 21.90 ಕೋಟಿ ನಗದು ವಶಪಡಿಸಿತ್ತು. ತನಿಖಾ ಸಂಸ್ಥೆ  56 ಲಕ್ಷ ಮೌಲ್ಯದ ವಿದೇಶಿ ಹಣ ಮತ್ತು 76ಲಕ್ಷ ಮೌಲ್ಯದ ಚಿನ್ನ ವಶಪಡಿಸಿದೆ.

Published On - 6:12 pm, Thu, 4 August 22

Follow Us
TV9 Web
TV9 Web

TV9 Kannada

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!