ಮದುವೆ ಮುಗಿಸಿ ಬರುತ್ತಿದ್ದವರ ವಾಹನ ನಿಂತಿದ್ದ ಲಾರಿಗೆ ಡಿಕ್ಕಿ, ನಾಲ್ವರು ಸಾವು; ಬಾರಾಬಂಕಿಯಲ್ಲಿ 6 ಮಂದಿ ದುರ್ಮರಣ

ಮದುವೆ ಮುಗಿಸಿ ಬರುತ್ತಿದ್ದವರ ವಾಹನ ನಿಂತಿದ್ದ ಲಾರಿಗೆ ಡಿಕ್ಕಿ, ನಾಲ್ವರು ಸಾವು; ಬಾರಾಬಂಕಿಯಲ್ಲಿ 6 ಮಂದಿ ದುರ್ಮರಣ
ಸಾಂಕೇತಿಕ ಚಿತ್ರ

ಸ್ಥಳೀಯ ಪೊಲೀಸರು ಮತ್ತು ಸ್ವಯಂಸೇವಕರು ಕೂಡಲೇ ಸ್ಥಳಕ್ಕೆ ಧಾವಿಸಿ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಾಲ್ವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.

TV9kannada Web Team

| Edited By: Lakshmi Hegde

Feb 16, 2022 | 9:31 AM

ಮದುವೆ ಮುಗಿಸಿ ಬರುತ್ತಿದ್ದವರ ವಾಹನ ಅಪಘಾತಕ್ಕೀಡಾದ ಕಾರಣ ನಾಲ್ವರು ಮೃತಪಟ್ಟು, 9ಮಂದಿ ಗಾಯಗೊಂಡ ದುರ್ಘಟನೆ ಮಹಾರಾಷ್ಟ್ರದ ವಾಶಿಮ್​ ಜಿಲ್ಲೆಯಲ್ಲಿ (Washim District) ನಡೆದಿದೆ. ಇವರೆಲ್ಲ ಒಂದು ಪಿಕ್​ಅಪ್​ ವಾಹನದಲ್ಲಿ ನಾಗ್ಪುರದಿಂದ ವಾಪಸ್​ ಬರುತ್ತಿದ್ದರು. ವಾಶಿಮ್ ಮತ್ತು ಶೆಲುಬಜಾರ್​ಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ನಿಂತಿದ್ದ ಟ್ರಕ್​​ಗೆ ಪಿಕ್​ಅಪ್​ ವಾಹನ ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿದ್ದಾಗಿ ವಾಶಿಮ್ ಎಸ್​​​ಪಿ ಬಚ್ಚನ್ ಸಿಂಗ್ ತಿಳಿಸಿದ್ದಾರೆ.

ಮೃತರು, ಗಾಯಗೊಂಡವರೆಲ್ಲ ವಾಶಿಮ್​ ಜಿಲ್ಲೆಯ ಶವಂಗಾ ಜೆಹಂಗೀರ್​ ಗ್ರಾಮದವರಾಗಿದ್ದಾರೆ. ನಿನ್ನೆ ರಾತ್ರಿ 8ಗಂಟೆ ಹೊತ್ತಿಗೆ ಅಪಘಾತ ನಡೆದಿದೆ. ಸ್ಥಳೀಯ ಪೊಲೀಸರು ಮತ್ತು ಸ್ವಯಂಸೇವಕರು ಕೂಡಲೇ ಸ್ಥಳಕ್ಕೆ ಧಾವಿಸಿ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಾಲ್ವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಉಳಿದ 9 ಜನರಿಗೆ ಅಲ್ಲಿನ ಸಿವಿಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಬಚ್ಚನ್​ ಸಿಂಗ್​ ಮಾಹಿತಿ ನೀಡಿದ್ದಾರೆ.

ಬಾರಾಬಂಕಿ ಭೀಕರ ಅಪಘಾತ

ಇನ್ನೊಂದೆಡೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಇಂದು ಮುಂಜಾನೆ ಭೀಕರ ಅಪಘಾತ ನಡೆದಿದ್ದು, ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಕಾರು ಮತ್ತು ಕಂಟೇನರ್​​ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: ಕಾನನದ ಮಧ್ಯೆ ಪರಿಸರ ಸ್ನೇಹಿ ಸರ್ಕಾರಿ ಶಾಲೆ; ಪಾಠದ ಜತೆಗೆ ಹೂವು, ತರಕಾರಿ, ಔಷಧಿಗಳ ಬೆಳೆಗೆ ಹೆಚ್ಚು ಒತ್ತು

Follow us on

Related Stories

Most Read Stories

Click on your DTH Provider to Add TV9 Kannada