ಜೈಲಿಂದ ಬಂದ್ರೂ ಬುದ್ಧಿ ಬಂದಿಲ್ಲ, ಜಾಮೀನಿನ ಮೇಲೆ ಹೊರ ಬಂದ ದಿನವೇ ಆಭರಣದಂಗಡಿಯಲ್ಲಿ ಕಳವು ಮಾಡಿದ ಮಹಿಳೆ

ಜೈಲಿಂದ ಹೊರಬಂದ ದಿನವೇ ಮಹಿಳೆಯೊಬ್ಬಳು ಆಭರಣದಂಗಡಿಯಲ್ಲಿ ಕಳವು ಮಾಡಿ ಮತ್ತೆ ಜೈಲಿಗೆ ಹೋಗಿರುವ ಘಟನೆ ಫರಿದಾಬಾದ್​ನಲ್ಲಿ ನಡೆದಿದೆ. ಆರೋಪಿ ಮಹಿಳೆ ಕಾಜಲ್ (30) ವಿವಾಹಿತಳಾಗಿದ್ದು, ಅಪರಾಧಿಯಾಗಿದ್ದಾಳೆ. ಮೂರು ತಿಂಗಳ ಹಿಂದೆ ಫರಿದಾಬಾದ್ ಜಿಲ್ಲೆಯ ನೀಮ್ಕಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಆಕೆ ಮತ್ತೆ ಅಪರಾಧ ಎಸಗಿದ್ದಾಳೆ. ಕಾಜಲ್‌ಳನ್ನು ಬುಧವಾರ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಜೈಲಿಂದ ಬಂದ್ರೂ ಬುದ್ಧಿ ಬಂದಿಲ್ಲ, ಜಾಮೀನಿನ ಮೇಲೆ ಹೊರ ಬಂದ ದಿನವೇ ಆಭರಣದಂಗಡಿಯಲ್ಲಿ ಕಳವು ಮಾಡಿದ ಮಹಿಳೆ
ಆಭರಣ
Image Credit source: Sneha Rateria

Updated on: Apr 02, 2026 | 10:09 AM

ಫರಿದಾಬಾದ್, ಏಪ್ರಿಲ್ 02: ಜೈಲಿಂದ ಹೊರಬಂದ ದಿನವೇ ಮಹಿಳೆಯೊಬ್ಬಳು ಆಭರಣದಂಗಡಿ(Jewellery Shop)ಯಲ್ಲಿ ಕಳವು ಮಾಡಿ ಮತ್ತೆ ಜೈಲಿಗೆ ಹೋಗಿರುವ ಘಟನೆ ಫರಿದಾಬಾದ್​ನಲ್ಲಿ ನಡೆದಿದೆ. ಆರೋಪಿ ಮಹಿಳೆ ಕಾಜಲ್ (30) ವಿವಾಹಿತಳಾಗಿದ್ದು, ಅಪರಾಧಿಯಾಗಿದ್ದಾಳೆ. ಮೂರು ತಿಂಗಳ ಹಿಂದೆ ಫರಿದಾಬಾದ್ ಜಿಲ್ಲೆಯ ನೀಮ್ಕಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಆಕೆ ಮತ್ತೆ ಅಪರಾಧ ಎಸಗಿದ್ದಾಳೆ.
ಕಾಜಲ್‌ಳನ್ನು ಬುಧವಾರ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಫರಿದಾಬಾದ್‌ನ ಭಗತ್ ಸಿಂಗ್ ಕಾಲೋನಿಯ ರಾಜೇಶ್ ಕುಮಾರ್ ಎಂಬವರು ಬಲ್ಲಬ್‌ಗಢ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಫೆಬ್ರವರಿ 27 ರಂದು ಮಹಿಳೆಯೊಬ್ಬರು ಚಿನ್ನಾಭರಣ ನೋಡುವ ನೆಪದಲ್ಲಿ ತಮ್ಮ ಆಭರಣ ಅಂಗಡಿಗೆ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಆಕೆ ಮೊದಲು ಆಭರಣಗಳನ್ನು ತೋರಿಸಲು ಕೇಳಿಕೊಂಡಿದ್ದಾಳೆ, ರಾಜೇಶ್ ಎಂಬುವವರ ಜತೆ ಸಂಭಾಷಣೆಯಲ್ಲಿ ತೊಡಗಿ, ಇನ್ನಷ್ಟು ಹೆಚ್ಚು ಆಭರಣಗಳನ್ನು ತೆಗೆಯಲು ಬೇರೆ ಕಡೆ ತಿರುಗಿದಾಗ ಆಕೆ ಆಭರಣವನ್ನು ದೋಚಿದ್ದಾಳೆ. ತನಿಖೆ ನಡೆಸುತ್ತಿದ್ದ ಪೊಲೀಸ್ ತಂಡ ಮಂಗಳವಾರ ಫರಿದಾಬಾದ್‌ನ ಸೆಕ್ಟರ್ 8 ರ ಇಂದಿರಾ ಕಾಲೋನಿಯ ಕಾಜಲ್ ಅವರನ್ನು ಬಂಧಿಸಿದೆ. ಆಕೆಯ ವಿಚಾರಣೆ ನಡೆಯುತ್ತಿದೆ ಎಂದು ಫರಿದಾಬಾದ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಮತ್ತಷ್ಟು ಓದಿ: Video: 25 ಕಳ್ಳರಿಂದ ಆಭರಣದಂಗಡಿ ದರೋಡೆ, ಗ್ರಾಹಕರಾ, ಕಳ್ಳರಾ ನೋಡುವಷ್ಟರಲ್ಲಿ ಆಭರಣಗಳು ಮಂಗಮಾಯ

ಆಕೆ ಜೈಲಿಂದ ಬಂದಿದ್ದರೂ ಆಕೆ ತನ್ನ ನಿಜವಾದ ವರಸೆ ಬಿಟ್ಟಿರಲಿಲ್ಲ, ಇದೀಗ ಆಕೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us