ಅಮರ ಪ್ರೇಮ!; ಹೆಂಡತಿಯ ಸಾವಿನ ಆಘಾತದಿಂದ ಗಂಡನೂ ಸಾವು; ಒಂದೇ ಚಿತೆ ಮೇಲಿಟ್ಟು ಅಂತ್ಯಕ್ರಿಯೆ

ಗಾಜಿಪುರದ ಮಹಿಳೆಯೊಬ್ಬರು ವಾರಣಾಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದು, ಪತಿಗೆ ಆಕೆಯ ಸಾವಿನ ಸುದ್ದಿ ತಿಳಿದ ತಕ್ಷಣ ಅವರೂ ಸಾವನ್ನಪ್ಪಿದ್ದಾರೆ. ನಂತರ ಇಬ್ಬರ ಅಂತ್ಯಸಂಸ್ಕಾರವನ್ನು ಒಂದೇ ಚಿತೆಯಲ್ಲಿ ನಡೆಸಲಾಯಿತು.

ಅಮರ ಪ್ರೇಮ!; ಹೆಂಡತಿಯ ಸಾವಿನ ಆಘಾತದಿಂದ ಗಂಡನೂ ಸಾವು; ಒಂದೇ ಚಿತೆ ಮೇಲಿಟ್ಟು ಅಂತ್ಯಕ್ರಿಯೆ
ಹೆಂಡತಿಯ ಸಾವಿನ ಆಘಾತ ತಡೆಯಲಾರದೆ ಗಂಡನೂ ಸಾವು
Follow us
ಸುಷ್ಮಾ ಚಕ್ರೆ
|

Updated on: Nov 11, 2024 | 9:34 PM

ಗಾಜಿಪುರ: ಉತ್ತರ ಪ್ರದೇಶದ ಗಾಜಿಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ರಾಂಪುರ ಗ್ರಾಮದಲ್ಲಿ ಪತ್ನಿಯ ಸಾವಿನ ಆಘಾತ ತಾಳಲಾರದೆ ಪತಿ ಕೂಡ ಕೆಲವೇ ಗಂಟೆಗಳ ಅಂತರದಲ್ಲಿ ನಿಧನರಾಗಿದ್ದಾರೆ. ಇದಾದ ಬಳಿಕ ಇಬ್ಬರ ಮೃತದೇಹಗಳನ್ನು ಒಟ್ಟಿಗೇ ಮೆರವಣಿಗೆ ಮಾಡಿ, ಒಂದೇ ಚಿತೆಯಲ್ಲಿಟ್ಟು ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಕ್ಷಣಕ್ಕೆ ಇಡೀ ಗ್ರಾಮಸ್ಥರು ಸಾಕ್ಷಿಯಾದರು.

ಈ ಗ್ರಾಮದ ಮುಂಭಾಗದ ಗಂಗಾನದಿಯ ದಡದಲ್ಲಿ ಅಲಂಕೃತವಾದ ಒಂದೇ ಚಿತೆಯಲ್ಲಿ ಪತಿ-ಪತ್ನಿ ಇಬ್ಬರ ಅಂತ್ಯಕ್ರಿಯೆಯನ್ನೂ ನೆರವೇರಿಸಲಾಯಿತು. ಸುಮಾರು 87 ವರ್ಷ ವಯಸ್ಸಿನ ಕಾಮೇಶ್ವರ ಉಪಾಧ್ಯಾಯ, ಕಂದಾಯ ಇಲಾಖೆಯಲ್ಲಿ ಅಕೌಂಟೆಂಟ್ ಹುದ್ದೆಯಿಂದ ನಿವೃತ್ತಿ ಹೊಂದಿದ್ದು, ಅವರ ಪತ್ನಿ ಸುಮಾರು 85 ವರ್ಷ ವಯಸ್ಸಿನ ಚಂಪಾ ಉಪಾಧ್ಯಾಯ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಬ್ಬರೂ ವಾರಣಾಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದ ನಂತರ ಕುಟುಂಬಸ್ಥರು ಅವರನ್ನು ಮನೆಗೆ ಕರೆತಂದಿದ್ದರು.

ಇದನ್ನೂ ಓದಿ: ಯುವಕನ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹತ್ಯೆಗೆ ಕಾರಣವಾಯ್ತಾ ವಿಧವೆಯೊಂದಿಗಿನ ಲವ್​?

ಆದರೆ, ತಡರಾತ್ರಿ ಪತ್ನಿ ಚಂಪಾ ಸಾವನ್ನಪ್ಪಿದ್ದಾರೆ. ಪತ್ನಿಯ ಸಾವಿನ ಸುದ್ದಿ ತಿಳಿದ ಪತಿಗೆ ಆಘಾತ ತಡೆದುಕೊಳ್ಳಲಾಗಲಿಲ್ಲ. ಅದಾದ ಕೆಲವು ಗಂಟೆಗಳ ನಂತರ ಅವರೂ ಕೊನೆಯುಸಿರೆಳೆದಿದ್ದಾರೆ. ಪತಿ-ಪತ್ನಿಯರ ಶವಯಾತ್ರೆಯನ್ನು ಒಟ್ಟಿಗೆ ಮಾಡಲಾಗಿದ್ದು, ಈ ಘಟನೆಯ ಸುದ್ದಿ ಕೇಳಿ ಎಲ್ಲರೂ ಬೆಚ್ಚಿಬಿದ್ದರು. ಅಕ್ಕಪಕ್ಕದ ಜನರು ಜಮಾಯಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ
ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ
ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ
ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ
ಎಂಟನೇ ತರಗತಿವರೆಗೆ ಓದಿರುವ ಮಗ ಗ್ಯಾರೇಜಲ್ಲಿ ಕೆಲಸ ಮಾಡುತ್ತಾನೆ: ತಾಯಿ
ಎಂಟನೇ ತರಗತಿವರೆಗೆ ಓದಿರುವ ಮಗ ಗ್ಯಾರೇಜಲ್ಲಿ ಕೆಲಸ ಮಾಡುತ್ತಾನೆ: ತಾಯಿ
ಸಂಡೂರಿನ ಸಿದ್ದಾಪುರದಲ್ಲಿ ಪ್ರಜಾಪ್ರಭುತ್ವದ ಹಬ್ಬ, ಊರಹಬ್ಬ ಒಟ್ಟಿಗೆ ಬಂದಿವೆ
ಸಂಡೂರಿನ ಸಿದ್ದಾಪುರದಲ್ಲಿ ಪ್ರಜಾಪ್ರಭುತ್ವದ ಹಬ್ಬ, ಊರಹಬ್ಬ ಒಟ್ಟಿಗೆ ಬಂದಿವೆ
ಪಾರ್ಟನ್ ಚೈತ್ರಾ ವಿರುದ್ಧ ಉರಿದು ಬಿದ್ದ ತ್ರಿವಿಕ್ರಮ್, ಮಾಡಿದ್ದಾರೂ ಏನು?
ಪಾರ್ಟನ್ ಚೈತ್ರಾ ವಿರುದ್ಧ ಉರಿದು ಬಿದ್ದ ತ್ರಿವಿಕ್ರಮ್, ಮಾಡಿದ್ದಾರೂ ಏನು?
ಸರ್ಕಾರಿ ಕಾರಿನ ಮೇಲೆ ಹತ್ತಿ ಯುವತಿಯ ಅಶ್ಲೀಲ ನೃತ್ಯ; ವಿಡಿಯೋ ವೈರಲ್
ಸರ್ಕಾರಿ ಕಾರಿನ ಮೇಲೆ ಹತ್ತಿ ಯುವತಿಯ ಅಶ್ಲೀಲ ನೃತ್ಯ; ವಿಡಿಯೋ ವೈರಲ್
ಬೈಕ್ ಶೋರೂಂಗೆ ನುಗ್ಗಿ ಯುವಕನಿಗೆ ತಿವಿದ ಗೂಳಿ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂಗೆ ನುಗ್ಗಿ ಯುವಕನಿಗೆ ತಿವಿದ ಗೂಳಿ; ಶಾಕಿಂಗ್ ವಿಡಿಯೋ ವೈರಲ್
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ
ಪ್ರಿಯಾಂಕಾ ಗೆದ್ದರೆ ಬಂಡೀಪುರ ರಾತ್ರಿ ಸಂಚಾರ: ಡಿಕೆಶಿ ಹೇಳಿಕೆ ವಿಡಿಯೋ ನೋಡಿ
ಪ್ರಿಯಾಂಕಾ ಗೆದ್ದರೆ ಬಂಡೀಪುರ ರಾತ್ರಿ ಸಂಚಾರ: ಡಿಕೆಶಿ ಹೇಳಿಕೆ ವಿಡಿಯೋ ನೋಡಿ
ಈಡಿ ಅಧಿಕಾರಿಗಳು ಮಾಡುತ್ತಿರುವ ತನಿಖೆಗೆ ನಾವು ಅಡ್ಡಿಯಾಗಲ್ಲ: ಸಿದ್ದರಾಮಯ್ಯ
ಈಡಿ ಅಧಿಕಾರಿಗಳು ಮಾಡುತ್ತಿರುವ ತನಿಖೆಗೆ ನಾವು ಅಡ್ಡಿಯಾಗಲ್ಲ: ಸಿದ್ದರಾಮಯ್ಯ