Gold Price Today: ಚಿನ್ನದ ಬೆಲೆ ಇಂದು 600 ರೂ. ಇಳಿಕೆ; ಒಂದೇ ದಿನದಲ್ಲಿ ದಾಖಲೆಯ ಕುಸಿತ ಕಂಡ ಬೆಳ್ಳಿ ದರ

| Updated By: ಸುಷ್ಮಾ ಚಕ್ರೆ

Updated on: Oct 16, 2022 | 6:30 AM

Silver Rate Today: ಬೆಳ್ಳಿ ದರ ಇಂದು ಬರೋಬ್ಬರಿ 2,000 ರೂ. ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 57,300 ರೂ. ಇದ್ದುದು ಇಂದು 55,300 ರೂ. ಆಗಿದೆ.

Gold Price Today: ಚಿನ್ನದ ಬೆಲೆ ಇಂದು 600 ರೂ. ಇಳಿಕೆ; ಒಂದೇ ದಿನದಲ್ಲಿ ದಾಖಲೆಯ ಕುಸಿತ ಕಂಡ ಬೆಳ್ಳಿ ದರ
ಚಿನ್ನದ ಬೆಲೆ
Follow us on

Gold Price on 16th October 2022 | ಬೆಂಗಳೂರು: ಭಾರತದಲ್ಲಿ 2 ದಿನಗಳ ಬಳಿಕ ಇಂದು ಚಿನ್ನದ ಬೆಲೆ (Gold Rate) 600 ರೂ. ಕುಸಿತವಾಗಿದೆ. ಬೆಳ್ಳಿ ಬೆಲೆ (Silver Price) ಇಂದು ಒಂದೇ ದಿನದಲ್ಲಿ 2,000 ರೂ. ಕುಸಿತವಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. 2 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 46,750 ರೂ. ಇದ್ದುದು ಇಂದು 46,200 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,000 ರೂ. ಇದ್ದುದು 50,400 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,900 ರೂ. ಮುಂಬೈ- 46,200 ರೂ, ದೆಹಲಿ- 46,900 ರೂ, ಕೊಲ್ಕತ್ತಾ- 46,200 ರೂ, ಬೆಂಗಳೂರು- 46,250 ರೂ, ಹೈದರಾಬಾದ್- 46,200 ರೂ, ಕೇರಳ- 46,200 ರೂ, ಪುಣೆ- 46,230 ರೂ, ಮಂಗಳೂರು- 46,250 ರೂ, ಮೈಸೂರು- 46,250 ರೂ. ಆಗಿದೆ.

ಇದನ್ನೂ ಓದಿ: Gold Price Today: ಚಿನ್ನದ ಬೆಲೆ ಇಂದು 270 ರೂ. ಕುಸಿತ; ಬೆಳ್ಳಿ ದರ 400 ರೂ. ಇಳಿಕೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,160 ರೂ, ಮುಂಬೈ- 50,400 ರೂ, ದೆಹಲಿ- 50,550 ರೂ, ಕೊಲ್ಕತ್ತಾ- 50,400 ರೂ, ಬೆಂಗಳೂರು- 50,450 ರೂ, ಹೈದರಾಬಾದ್- 50,400 ರೂ, ಕೇರಳ- 50,400 ರೂ, ಪುಣೆ- 50,430 ರೂ, ಮಂಗಳೂರು- 50,450 ರೂ, ಮೈಸೂರು- 50,450 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ದರ ಕೂಡ ಇಂದು ಬರೋಬ್ಬರಿ 2,000 ರೂ. ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 57,300 ರೂ. ಇದ್ದುದು ಇಂದು 55,300 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 55,300 ರೂ, ಮೈಸೂರು- 55,300 ರೂ., ಮಂಗಳೂರು- 55,300 ರೂ., ಮುಂಬೈ- 55,300 ರೂ, ಚೆನ್ನೈ- 60,500 ರೂ, ದೆಹಲಿ- 55,300 ರೂ, ಹೈದರಾಬಾದ್- 60,500 ರೂ, ಕೊಲ್ಕತ್ತಾ- 55,300 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ