AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Year in Search 2021: ಗೂಗಲ್​ನಲ್ಲಿ ಐಪಿಎಲ್, ಕೊವಿನ್ ಬಗ್ಗೆ ಹುಡುಕಿದವರೇ ಹೆಚ್ಚು

ಗೇಮಿಂಗ್ ಪಟ್ಟಿಯನ್ನು ಪರಿಶೀಲಿಸಿದರೆ Garena Free Fire ಹೆಚ್ಚು ಹುಡುಕಿದ ಗೇಮ್ ಆಗಿದೆ. ಭಾರತದ ಒಟ್ಟಾರೆ ಟ್ರೆಂಡಿಂಗ್ ಪಟ್ಟಿಯಲ್ಲಿ ಇದು ಮೊದಲ ಸ್ಥಾನದಲ್ಲಿದೆ

Google Year in Search 2021: ಗೂಗಲ್​ನಲ್ಲಿ ಐಪಿಎಲ್, ಕೊವಿನ್ ಬಗ್ಗೆ ಹುಡುಕಿದವರೇ ಹೆಚ್ಚು
ಗೂಗಲ್ ಸರ್ಚ್​
TV9 Web
| Updated By: ಆಯೇಷಾ ಬಾನು|

Updated on: Dec 09, 2021 | 8:02 AM

Share

ಭಾರತೀಯರು 2021ರಲ್ಲಿ ಅತಿಹೆಚ್ಚು ಹುಡುಕಿದ ಹುಡುಕು ಪದಗಳ ಪಟ್ಟಿಯನ್ನು ಗೂಗಲ್ ಬುಧವಾರ (ಡಿ 8) ಬಿಡುಗಡೆ ಮಾಡಿದೆ. ಎಂದಿನಂತೆ ಈ ವರ್ಷವೂ ಕ್ರಿಕೆಟ್​ ಭಾರತದಲ್ಲಿ ಅತಿಹೆಚ್ಚು ಜನರು ಹುಡುಕಿದ ಪದವಾಗಿದೆ. Indian Premier League (ಇಂಡಿಯನ್ ಪ್ರೀಮಿಯರ್ ಲೀಗ್) ಮತ್ತು ICC T20 World Cup (ಐಸಿಸಿ ಟಿ20 ವರ್ಲ್ಡ್​ ಕಪ್) ಎಂಬುದು ಭಾರತದಲ್ಲಿ ಅತಿಹೆಚ್ಚು ಜನರು ಹುಡುಕಿದ ಪದಗಳಾಗಿವೆ. ಇದರ ಜೊತೆಗೆ CoWIN ಮತ್ತು Covid Vaccine ಪದಗಳನ್ನು ಹೆಚ್ಚು ಜನರು ಹುಡುಕಿದ್ದಾರೆ. ಗೇಮಿಂಗ್ ಪಟ್ಟಿಯನ್ನು ಪರಿಶೀಲಿಸಿದರೆ Garena Free Fire ಹೆಚ್ಚು ಹುಡುಕಿದ ಗೇಮ್ ಆಗಿದೆ. ಭಾರತದ ಒಟ್ಟಾರೆ ಟ್ರೆಂಡಿಂಗ್ ಪಟ್ಟಿಯಲ್ಲಿ ಇದು ಮೊದಲ ಸ್ಥಾನದಲ್ಲಿದೆ.

2021ರ ಟಾಪ್ ಟ್ರೆಂಡಿಂಗ್ ವಿಷಯಗಳು ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್, ಕೊವಿನ್, ಐಸಿಸಿ ಟಿ20 ವರ್ಲ್ಡ್​ ಕಪ್, ಯೂರೋಕಪ್ ಮತ್ತು ಟೊಕಿಯೊ ಒಲಿಂಪಿಕ್ಸ್ ಪದಗಳನ್ನು ಭಾರತೀಯರು ಗೂಗಲ್​ನಲ್ಲಿ ಹೆಚ್ಚಾಗಿ ಹುಡುಕಿದ್ದಾರೆ. ಕೊವಿಡ್-19ರ ಹಿಂದಿನ ಅಲೆಯ ಪ್ರಭಾವದಿಂದಾಗಿ ನೆಟಿಜನ್ನರು ಗೂಗಲ್​ನಲ್ಲಿ ಕೊವಿಡ್​ಗೆ ಸಂಬಂಧಿಸಿದ ಪದಗಳನ್ನೇ ಹೆಚ್ಚಾಗಿ ಹುಡುಕಿದ್ದಾರೆ. ಇದರಲ್ಲಿ COVID ಲಸಿಕೆ ಮತ್ತು ಕೊವಿಡ್ ಆಸ್ಪತ್ರೆಗಳೂ ಸೇರಿವೆ. ಇದರ ಜೊತೆಗೆ ಆಕ್ಸಿಜನ್ ಸಿಲಿಂಡರ್ ಮತ್ತು ಸಿಟಿ ಸ್ಕ್ಯಾನ್ ಪದಗಳನ್ನೂ ಸಾಕಷ್ಟು ಜನರು ಹುಡುಕಾಡಿದ್ದಾರೆ. ಇದರ ಜೊತೆಗೆ ಫುಡ್ ಡೆಲಿವರಿ, ಟಿಫಿನ್ ಸರ್ವೀಸ್ ಮತ್ತು ಟೇಕ್​ಔಟ್ ರೆಸ್ಟೊರೆಂಟ್​ಗಳನ್ನೂ ಸಾಕಷ್ಟು ಜನರು ಹುಡುಕಿದ್ದಾರೆ ಎಂದು ಕಂಪನಿಯು ತಿಳಿಸಿದೆ.

How to ಮತ್ತು What is ಹುಡುಕಾಟ ಒಟ್ಟಾರೆ ಟ್ರೆಂಡಿಂಗ್​ ವಿಷಯಗಳಲ್ಲಿ ಮುಖ್ಯ ಎನಿಸುವ How to ಮತ್ತು What is ಪದಗುಚ್ಛಗಳಲ್ಲಿಯೂ ಕೊವಿಡ್ ಸಂಬಂಧಿತ ಪದಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಕೊವಿಡ್ ಲಸಿಕೆ ಪಡೆಯಲು ನೋಂದಣಿ ಹೇಗೆ? ಲಸಿಕೆ ಪ್ರಮಾಣ ಪತ್ರ ಡೌನ್​ಲೋಡ್ ಮಾಡಿಕೊಳ್ಳುವುದು ಹೇಗೆ? ಆಮ್ಲಜನಕರ ಮಟ್ಟ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ವಿಷಯಗಳ ಬಗ್ಗೆ ಹೆಚ್ಚಿನ ಹುಡುಕಾಟ ನಡೆದಿದೆ. what is ಪದಗುಚ್ಛದ ಹುಡುಕಾಟದಲ್ಲಿ ಬ್ಲಾಕ್ ಫಂಗಸ್ ಹೆಸರಿನ ಮೇಲೆ ಹೆಚ್ಚು ಹುಡುಕಾಟ ನಡೆದಿದೆ. ಇದರ ಜೊತೆಗೆ ರೆಮ್​ಡೆಸಿವಿರ್ ಪದವನ್ನು ಹೆಚ್ಚು ಜನರು ಹುಡುಕಿದ್ದಾರೆ. ಕೊರೊನಾ ಸಂಬಂಧಿತ ವಿಷಯಗಳ ಜೊತೆಗೆ what is Taliban ಮತ್ತು what is the factorial of hundred ಪದಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಹುಡುಕಾಡಿದ್ದಾರೆ.

ವ್ಯಕ್ತಿಗಳ ಹೆಸರಿನ ಹುಡುಕಾಟ ಟೊಕಿಯೊ ಒಲಿಂಪಿಕ್ಸ್​ನ ಜಾವಲಿನ್​ ಎಸೆತದಲ್ಲಿ ಭಾರತಕ್ಕೆ ಪದಕ ತಂದ ನೀರಜ್ ಛೋಪ್ರಾ ಹೆಸರನ್ನು ಭಾರತೀಯರು ಹೆಚ್ಚು ಹುಡುಕಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಡ್ರಗ್ಸ್​ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಬಾಲಿವುಡ್​ನ ಸ್ಟಾರ್​ನಟ ಶಾರುಖ್​ಖಾನ್​ರ ಮಗ ಆರ್ಯನ್​ ಖಾನ್ ಹೆಸರನ್ನು ಹುಡುಕಿದ್ದಾರೆ. ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್​ ಮತ್ತು ಸೆಲಬ್ರಿಟಿಗಳಾದ ವಿಕಿ ಕೌಶಲ್, ಶೆಹನಾಜ್ ಗಿಲ್ ಮತ್ತು ರಾಜ್ ಕುಂದ್ರಾ ಹೆಸರುಗಳು ಗೂಗಲ್​ನಲ್ಲಿ 2021ರ ಮುಂಚೂಣಿ ಸ್ಥಾನದಲ್ಲಿವೆ.

ಟ್ರೆಂಡಿಂಗ್ ಸಿನಿಮಾಗಳು ಪ್ರಾದೇಶಿಕ ಸಿನಿಮಾಗಳು ಈ ವರ್ಷ ಗೂಗಲ್ ಹುಡುಕಾಟದಲ್ಲಿ ಮೊದಲ ಸ್ಥಾನದಲ್ಲಿವೆ. ತಮಿಳು ಸಿನಿಮಾ ಜೈಭೀಮ್ ಅತಿಹೆಚ್ಚು ಜನರು ಹುಡುಕಾಡಿದ ಸಿನಿಮಾ ಎನಿಸಿದೆ. ಇದರ ನಂತರದ ಸ್ಥಾನದಲ್ಲಿ ಬಾಲಿವುಡ್ ಸಿನಿಮಾಗಳಾದ ಶೇರ್​ಶಾಹ್, ರಾಧೆ ಮತ್ತು ಬೆಲ್​ಬಾಮ್ ಇದೆ. ಹಾಲಿವುಡ್ ಸಿನಿಮಾಗಳಾದ ಗೋಡ್​ಜಿಲ್ಲಾ ವರ್ಸಸ್ ಕಾಂಗ್ ಮತ್ತು ಎಟರ್ನಲ್ಸ್​ ಸಿನಿಮಾಗಳನ್ನು ಹೆಚ್ಚು ಜನರು ಹುಡುಕಿದ್ದಾರೆ.

ಹೊಸರುಚಿಯ ಹುಡುಕಾಟ ಈ ವರ್ಷದ ಆರಂಭದಲ್ಲಿ ಬಹುತೇಕ ಜನರು ಮನೆಗಳಲ್ಲಿಯೇ ಉಳಿದುಕೊಂಡಿದ್ದರು. ಸಾಕಷ್ಟು ಸಮಯ ಸಿಕ್ಕಿದ್ದ ಕಾರಣ ಹಲವರು ಹೊಸರುಚಿಗಳನ್ನು ಹುಡುಕಾಡಿದ್ದಾರೆ. ಗೂಗಲ್​ನಲ್ಲಿ ಭಾರತೀಯರು ಅತಿಹೆಚ್ಚು ಹುಡುಕಿದ ರೆಸಿಪಿ ‘ಎನೊಕಿ ಮರ್ಷೂಮ್ಸ್​‘. ಇದರ ಜೊತೆಗೆ ಮೋದಕ ಮತ್ತು ಕೂಕಿಸ್ ಪದಗಳನ್ನು ಬಹುತೇಕರು ಹುಡುಕಾಡಿದ್ದಾರೆ. ‘ಮೇಟಿ ಮಟರ್ ಮಲಾಯ್’ ಮತ್ತು ‘ಪಾಲಕ್’​ಗಳ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ‘ಕಡ’ ರೆಸಿಪಿಗಳನ್ನು ಹಲವರು ಹುಡುಕಿದ್ದಾರೆ.

ಯಾಹೂ ಹುಡುಕಾಟದ ವಿವರ ಗೂಗಲ್​ನ ಪ್ರತಿಸ್ಪರ್ಧಿ ಕಂಪನಿ ಯಾಹೂ ಸಹ 2021ರ ಹುಡುಕಾಟದ ವಿವರಗಳನ್ನು ಪ್ರಕಟಿಸಿದೆ. ಯಾಹೂ ಹುಡುಕಾಟದಲ್ಲಿ ನರೇಂದ್ರ ಮೋದಿ, ವಿರಾಟ್ ಕೊಹ್ಲಿ, ಮಮತಾ ಬ್ಯಾನರ್ಜಿ, ಸಿದ್ಧಾರ್ಥ ಶುಕ್ಲಾ, ರಾಹುಲ್ ಗಾಂಧಿ ಮತ್ತು ಎಂ.ಎಸ್.ಧೋನಿ ಪದಗಳನ್ನು ಅತಿಹೆಚ್ಚು ಜನರು ಹುಡುಕಿದ್ದಾರೆ. ಇದರ ಜೊತೆಗೆ ಫಾರ್ಮರ್ಸ್​ ಪ್ರೊಟೆಸ್ಟ್, ಆರ್ಯನ್ ಖಾನ್, 2021 ಕೇಂದ್ರ ಬಜೆಟ್, ರಾಜ್ ಕುಂದ್ರಾ ಮತ್ತು ಬ್ಲಾಕ್ ಫಂಗಸ್ ಪದಗಳನ್ನು ಸಾಕಷ್ಟು ಜನರು ಹುಡುಕಿದ್ದಾರೆ.

ಇದನ್ನೂ ಓದಿ: Google Play Best Apps 2021: ಈ ವರ್ಷದ ಬೆಸ್ಟ್​​ ಆ್ಯಪ್ಸ್​​​, ಗೇಮ್ಸ್​ ಯಾವುದು?; ಗೂಗಲ್ ಪ್ಲೇಯಿಂದ ಪಟ್ಟಿ ಬಿಡುಗಡೆ ಇದನ್ನೂ ಓದಿ: 7 ಅಪ್ಲಿಕೇಶನ್ ಬ್ಯಾನ್ ಮಾಡಿದ ಗೂಗಲ್: ನಿಮ್ಮ ಮೊಬೈಲ್​ನಲ್ಲಿ ಈ ಆ್ಯಪ್ ಇದ್ದರೆ ತಕ್ಷಣವೇ ಡಿಲೀಟ್ ಮಾಡಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ