AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದಲೇ ಸೋನಿಯಾ-ರಾಹುಲ್ SPG ತೆಗೆದುಹಾಕಿದ ಕೇಂದ್ರ

ದೆಹಲಿ: ಇಂದಿನಿಂದಲೇ ಸೋನಿಯಾ ಗಾಂಧಿ ಮತ್ತು ಅವರ ಇಬ್ಬರು ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರ ಅವರಿಗೆ ನೀಡಲಾಗಿದ್ದ ಎಸ್​ಪಿಜಿ ರಕ್ಷಣೆಯನ್ನು ಹಿಂಪಡೆಯಲಾಗಿದೆ. ಎಐಸಿಸಿ ಹಂಗಾಮಿ ಅಧ್ಯಕ್ಷೆಯಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ನೆಲೆಸಿರುವ 10 ಜನಪತ್ ನಿವಾಸದ ಬಳಿ ಈಗಾಗಲೇ ಸಿಆರ್​ಪಿಎಫ್​ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಗಾಂಧಿ ಪರಿವಾರಕ್ಕೆ ಸಿಆರ್​ಪಿಎಫ್​ನ Z+ ಸೆಕ್ಯೂರಿಟಿಯನ್ನು ನೀಡಲಾಗಿದೆ. ಪ್ರಧಾನಿ ಮೋದಿಗೆ ಮಾತ್ರ SPG ಸೆಕ್ಯೂರಿಟಿ: 28 ವರ್ಷಗಳಿಂದ ಗಾಂಧಿ ಪರಿವಾರಕ್ಕೆ ಎಸ್​ಪಿಜಿ ಭದ್ರತೆಯನ್ನು ನೀಡಲಾಗುತ್ತಿತ್ತು. ಈಗ […]

ಇಂದಿನಿಂದಲೇ ಸೋನಿಯಾ-ರಾಹುಲ್ SPG ತೆಗೆದುಹಾಕಿದ ಕೇಂದ್ರ
ಸಾಧು ಶ್ರೀನಾಥ್​
|

Updated on:Nov 08, 2019 | 10:46 PM

Share

ದೆಹಲಿ: ಇಂದಿನಿಂದಲೇ ಸೋನಿಯಾ ಗಾಂಧಿ ಮತ್ತು ಅವರ ಇಬ್ಬರು ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರ ಅವರಿಗೆ ನೀಡಲಾಗಿದ್ದ ಎಸ್​ಪಿಜಿ ರಕ್ಷಣೆಯನ್ನು ಹಿಂಪಡೆಯಲಾಗಿದೆ. ಎಐಸಿಸಿ ಹಂಗಾಮಿ ಅಧ್ಯಕ್ಷೆಯಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ನೆಲೆಸಿರುವ 10 ಜನಪತ್ ನಿವಾಸದ ಬಳಿ ಈಗಾಗಲೇ ಸಿಆರ್​ಪಿಎಫ್​ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಗಾಂಧಿ ಪರಿವಾರಕ್ಕೆ ಸಿಆರ್​ಪಿಎಫ್​ನ Z+ ಸೆಕ್ಯೂರಿಟಿಯನ್ನು ನೀಡಲಾಗಿದೆ.

ಪ್ರಧಾನಿ ಮೋದಿಗೆ ಮಾತ್ರ SPG ಸೆಕ್ಯೂರಿಟಿ: 28 ವರ್ಷಗಳಿಂದ ಗಾಂಧಿ ಪರಿವಾರಕ್ಕೆ ಎಸ್​ಪಿಜಿ ಭದ್ರತೆಯನ್ನು ನೀಡಲಾಗುತ್ತಿತ್ತು. ಈಗ ಅವರಿಗೂ ಎಸ್​ಪಿಜಿ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ. ಇದೀಗ ದೇಶದಲ್ಲಿ ಎಸ್​ಪಿಜಿ ರಕ್ಷಣೆಯನ್ನು ಹೊಂದಿರುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ.

ಗಾಂಧಿ ಕುಟುಂಬಕ್ಕೆ ಬೆದರಿಕೆ ಇಲ್ಲ: ಗಾಂಧಿ ಪರಿವಾರಕ್ಕೆ ಈಗ ಯಾವುದೇ ಬೆದರಿಕೆ ಇಲ್ಲ. ಇತ್ತೀಚೆಗೆ ಎಲ್ಲಾ ಭದ್ರತಾ ಏಜೆನ್ಸಿಗಳಿಂದ ಅಭಿಪ್ರಾಯವನ್ನು ಪಡೆದ ಬಳಿಕ ಎಸ್​ಪಿಜಿ ರಕ್ಷಣೆಯನ್ನು ವಾಪಸ್ ಪಡೆಯುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ಗಾಂಧಿ ಕುಟುಂಬಕ್ಕೆ ಧಕ್ಕೆಯಾಗಲ್ಲ: ಎಸ್​ಪಿಜಿ (Special Protection Group) ದೇಶದಲ್ಲಿಯೇ ಅತ್ಯುನ್ನತ ಶ್ರೇಣಿಯ ಭದ್ರತೆಯನ್ನು ಹೊದಗಿಸುವ ಸಂಸ್ಥೆಯಾಗಿದೆ. SPG ಭದ್ರತೆಯನ್ನು ಹಿಂಪಡೆಯುವುದರಿಂದ ಯಾವುದೇ ಕಾರಣಕ್ಕೂ ಗಾಂಧಿ ಕುಟುಂಬದ ಭದ್ರತೆಗೆ ಧಕ್ಕೆಯಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ಗೆ ಎಸ್​ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಗಾಂಧಿ ಪರಿವಾರಕ್ಕೆ 28 ವರ್ಷಗಳಿಂದ ಈ ಎಸ್​ಪಿಜಿ ರಕ್ಷಣೆಯನ್ನು ನೀಡಲಾಗುತ್ತಿದೆ. 1988ರ ಎಸ್​ಪಿಜಿ ಕಾಯ್ದೆ ಅಡಿ 1991 ಸೆಪ್ಟೆಂಬರ್​ ತಿಂಗಳಿಂದ ವಿವಿಐಪಿ ಸೆಕ್ಯೂರಿಟಿ ಕೊಡಲಾಗುತ್ತಿತ್ತು.

ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ ರಾಹುಲ್ ಗಾಂಧಿ: ಇಷ್ಟು ದಿನ ಹಗಲಿರುಳು ಶ್ರಮಿಸಿ ರಕ್ಷಿಸಿದ ಎಸ್​ಜಿಪಿ ಸಹೋದರ ಮತ್ತು ಸಹೋದರಿಯರೇ ಧನ್ಯವಾದ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Published On - 5:49 pm, Fri, 8 November 19

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!