Gujarat: ಬಸ್ ಅಪಘಾತ: 6 ಮಂದಿ ಸಾವು, 10 ಜನರಿಗೆ ಗಂಭೀರ ಗಾಯ

ಗುಜರಾತ್‌ನ ಭಾವನಗರ ಜಿಲ್ಲೆಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಡಂಪರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾವನಗರದಿಂದ ಮಹುವಾ ಕಡೆಗೆ ಬಸ್ ತೆರಳುತ್ತಿದ್ದಾಗ ಬೆಳಗ್ಗೆ 6 ಗಂಟೆ ಸುಮಾರಿಗೆ ತ್ರಪಾಜ್ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹರ್ಷದ್ ಪಟೇಲ್ ತಿಳಿಸಿದ್ದಾರೆ.

ಅಪಘಾತ
Follow us
ನಯನಾ ರಾಜೀವ್
|

Updated on:Dec 17, 2024 | 2:41 PM

ಗುಜರಾತ್‌ನ ಭಾವನಗರ ಜಿಲ್ಲೆಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಡಂಪರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾವನಗರದಿಂದ ಮಹುವಾ ಕಡೆಗೆ ಬಸ್ ತೆರಳುತ್ತಿದ್ದಾಗ ಬೆಳಗ್ಗೆ 6 ಗಂಟೆ ಸುಮಾರಿಗೆ ತ್ರಪಾಜ್ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹರ್ಷದ್ ಪಟೇಲ್ ತಿಳಿಸಿದ್ದಾರೆ.

ಬಸ್ ಹಿಂದಿನಿಂದ ಡಂಪರ್ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ, ಎಂಟರಿಂದ ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಬಲಭಾಗದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರು-ಲಾರಿ ಮುಖಾಮುಖಿ ಡಿಕ್ಕಿ, 6 ಮಂದಿ ಸಾವು, 7 ಜನರಿಗೆ ಗಾಯ ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ ರಾಂಗ್ ಸೈಡ್‌ನಿಂದ ಬಂದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದಾರೆ, 7 ಜನರು ಗಾಯಗೊಂಡಿದ್ದಾರೆ. ದೊಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾನುಪ್ರತಾಪುರ-ದಳ್ಳಿರಾಜರ ರಸ್ತೆಯ ಚೌರಪವಾಡ ಬಳಿ ಮುಂಜಾನೆ ಅಪಘಾತ ಸಂಭವಿಸಿದೆ.

ಮಾಹಿತಿ ಪ್ರಕಾರ, ಎದುರಿನಿಂದ ಬರುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ರಾಜನಂದಗಾಂವ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ. ಅಪಘಾತದ ಬಗ್ಗೆ ವಿವರಗಳನ್ನು ಒದಗಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅಶೋಕ್ ಜೋಶಿ, ಆರೋಪಿ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಮತ್ತು ಆತನ ಶೋಧ ಮುಂದುವರೆದಿದೆ.

ಡಿಕ್ಕಿಯ ರಭಸಕ್ಕೆ ಕಾರು ತೀವ್ರವಾಗಿ ಜಖಂಗೊಂಡಿದೆ. ಅಪಘಾತ ಸಂಭವಿಸಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳೀಯರ ನೆರವಿನಿಂದ ಗಂಟೆಗಟ್ಟಲೆ ಪ್ರಯತ್ನದ ಬಳಿಕ ಕಾರಿನಲ್ಲಿ ಸಿಲುಕಿದ್ದವರನ್ನು ಹೊರ ತೆಗೆಯಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:40 pm, Tue, 17 December 24

ಯಡಿಯೂರಪ್ಪ ನಮ್ಮ ಸಹಾಯವಿಲ್ಲದೆ ಪಕ್ಷವನ್ನು ಕಟ್ಟಿಲ್ಲ: ಬಸನಗೌಡ ಯತ್ನಾಳ್

ರೇಣುಕಾಸ್ವಾಮಿ ಹತ್ಯೆ ಮುಂಚಿನ ಸ್ಥಿತಿ ಪುನಃ ನಿರ್ಮಾಣವಾಗಲಿದೆಯೇ?

Belagavi Session Live: ಉತ್ತರ ಕರ್ನಾಟಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ

ಸ್ಟೀವ್ ಸ್ಮಿತ್ ಸ್ಟನ್ನಿಂಗ್​ ಕ್ಯಾಚ್​ಗೆ ಕೆಎಲ್ ರಾಹುಲ್ ಇನಿಂಗ್ಸ್ ಅಂತ್ಯ

ಕಾರು ಹತ್ತಿ ತೆರಳುವ ಮುನ್ನ ಮುನೇಶ್ವರನಿಗೆ ಕೈಮುಗಿದ ಪವಿತ್ರಾ ಗೌಡ

Video: ವ್ಯಾನವಾಟುವಿನಲ್ಲಿ ಪ್ರಬಲ ಭೂಕಂಪ, ವಿಡಿಯೋ ಇಲ್ಲಿದೆ

ಎಲ್ಲ ಪಕ್ಷಗಳ ನಾಯಕರು ಸಹಕಾರ ನೀಡಿದ್ದಕ್ಕೆ ಕಲಾಪ ಸಾಧ್ಯವಾಯಿತು: ಖಾದರ್

ಘಾಟಿ ಸುಭ್ರಮಣ್ಯ ದೇವಸ್ಥಾನದ ಹುಂಡಿ ಎಣಿಕೆ: 75 ಲಕ್ಷ ನಗದು ಸಂಗ್ರಹ

ನಗು ನಗುತ್ತ ಜೈಲಿನಿಂದ ಹೊರ ಬಂದ ಪವಿತ್ರಾ ಗೌಡ; ಆರು ತಿಂಗಳ ಜೈಲುವಾಸ ಅಂತ್ಯ

Video: ವೇಗವಾಗಿ ಬಂದು ಹತ್ತಾರು ಜನರಿಗೆ ಡಿಕ್ಕಿ ಹೊಡೆದ ಕಾರು