
ನವದೆಹಲಿ, ಜೂನ್ 12: ಇಂದು ಗುಜರಾತ್ನ (Ahmedabad Plane Crash) ಅಹಮದಾಬಾದ್‌ನಲ್ಲಿ ಲಂಡನ್‌ಗೆ ಹೋಗುವ ಏರ್ ಇಂಡಿಯಾ (Air India) ವಿಮಾನ ಅಪಘಾತ ಸಂಭವಿಸಿದೆ. ಇದಕ್ಕೂ ಮೊದಲು ಅಂದರೆ 1 ವಾರದ ಹಿಂದೆ ಜ್ಯೋತಿಷಿಯೊಬ್ಬರು ವಿಮಾನ ಅಪಘಾತ ಉಂಟಾಗುವ ಬಗ್ಗೆ ಭವಿಷ್ಯ ನುಡಿದಿದ್ದರು. ಈ ಭವಿಷ್ಯವಾಣಿ ಈಗ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಶರ್ಮಿಷ್ಠಾ ಎಂಬ ಜ್ಯೋತಿಷಿ ಎಕ್ಸ್ನಲ್ಲಿ ವಿಮಾನ ಅಪಘಾತದ ಬಗ್ಗೆ ಜೂನ್ 5ರಂದು ಪೋಸ್ಟ್ ಮಾಡಿದ್ದರು. ಅವರು ಸಂಭವನೀಯ ವಿಮಾನ ಅಪಘಾತ ಮತ್ತು ವಾಯುಯಾನ ವಲಯದಲ್ಲಿ ಪ್ರಕ್ಷುಬ್ಧತೆಯ ಬಗ್ಗೆ ಎಚ್ಚರಿಕೆ ನೀಡಿದ್ದರು. ಆಗ ಹೆಚ್ಚು ಗಮನಕ್ಕೆ ಬಾರದಿದ್ದ ಈ ಪೋಸ್ಟ್ ಇಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನ ಅಪಘಾತಕ್ಕೀಡಾದ ನಂತರ ಬಹಳ ವೈರಲ್ ಆಗಿದೆ.
ತಮ್ಮ ಪೋಸ್ಟ್‌ನಲ್ಲಿ ಜ್ಯೋತಿಷಿ ಶರ್ಮಿಷ್ಠಾ ಹೀಗೆ ಬರೆದಿದ್ದಾರೆ. “2025ರಲ್ಲಿ ವಿಮಾನಯಾನ ವಲಯವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ವಿಮಾನ ಅಪಘಾತದ ಹೆಡ್ಲೈನ್ಗಳು ನಮಗೆ ಆಘಾತವನ್ನು ನೀಡಬಹುದು. ಇದನ್ನು ಎರಡು ತಿಂಗಳ ಹಿಂದೆಯೇ ಊಹಿಸಲಾಗಿದೆ. ಕೆಳಗಿನ ಟ್ವೀಟ್ ಅನ್ನು ಪರಿಶೀಲಿಸಿ.” ಮೃಗಶಿರ ಮತ್ತು ಆರ್ದ್ರ ನಕ್ಷತ್ರದಲ್ಲಿ ಗುರುವಿನ (ಗುರು) ಜ್ಯೋತಿಷ್ಯ ಸ್ಥಾನವು ವಾಯುಯಾನದಲ್ಲಿ ಅಸ್ಥಿರತೆಯನ್ನು ತರುತ್ತದೆ ಮತ್ತು ಸುರಕ್ಷತೆಗೆ ಧಕ್ಕೆ ತರುತ್ತದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.
Tata will make Rafale fuselage in Hyderabad. This is just aviation expansion, ISRO will surprise the world in Space and satellite engineering, space tourism in coming two years. Predicted this last year via Nakshatra transit. I am still holding high the prediction of Plane crash… https://t.co/WjX39R7E47
— Astro Sharmistha (@AstroSharmistha) June 5, 2025
ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
“ವಿಮಾನಯಾನ ಕ್ಷೇತ್ರದಲ್ಲಿ ಈಗಾಗಲೇ ಸ್ವಲ್ಪ ಸುಧಾರಣೆ ಪ್ರಾರಂಭವಾಗಿದೆ. ಗುರುವು ತಿಂಗಳಿಗೆ ಸುಮಾರು 6.5 ಡಿಗ್ರಿ ವೇಗದಲ್ಲಿ ಮೃಗಶಿರ ಮತ್ತು ಆರ್ದ್ರದ ಮಿಥುನ ಭಾಗದಲ್ಲಿರುವಾಗ ವಾಯುಯಾನದಲ್ಲಿ ಸುರಕ್ಷತೆ ಮತ್ತು ಭದ್ರತೆ ಕಾಣೆಯಾಗುತ್ತದೆ” ಎಂದು ಅವರು ಹೇಳಿದ್ದರು.
ಜೂನ್ 5ರಂದು ಮತ್ತೊಂದು ಪೋಸ್ಟ್‌ನಲ್ಲಿ ಅವರು ಅತ್ಯಂತ ಗಮನಾರ್ಹ ಹೇಳಿಕೆಯನ್ನು ನೀಡಿದ್ದರು. “ವಿಮಾನ ಅಪಘಾತದ ಮುನ್ಸೂಚನೆಯನ್ನು ನಾನು ಇನ್ನೂ ಹೆಚ್ಚು ಒತ್ತಿ ಹೇಳುತ್ತೇನೆ ಮತ್ತು ನಂಬಿದ್ದೇನೆ” ಎಂದು ಹೇಳಿದ್ದು, ಅದು ಈಗ ಸಾರ್ವಜನಿಕರ ಗಮನ ಸೆಳೆದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ